ದಯವಿಟ್ಟು ಶೇರ್ ಮಾಡಿ ಗೆಳೆಯರೇ

‘ಮಕ್ಕಳ ಕೈಬರಹ ಸುಂದರವಾಗಿಲ್ಲದಿದ್ದಲ್ಲಿ ಚಿಂತೆಪಡಬೇಡಿ; ನಿಮ್ಮ ಮಗು ವೈದ್ಯನಾಗುವ ಎಲ್ಲಾ ಲಕ್ಷಣ ಹೊಂದಿದೆ’ ಎಂಬ ಹಾಸ್ಯ ಎಲ್ಲರಿಗೂ ತಿಳಿದಿದೆ. ಇನ್ನು ಪಾಲಕರು ಮಕ್ಕಳ ಸುಂದರ ಬರವಣಿಗೆಗಾಗಿ ಹರಸಾಹಸ ಪಡುವ ಕಥೆ ದಿನ ಬೆಳಗಾದರೆ ಕಾಣಸಿಗುತ್ತದೆ. ಜೋಡುಗೆರೆ, ನಾಲ್ಕು ಗೆರೆ ಪಟ್ಟಿಗಳಲ್ಲಿ ಬರಿಸುವುದು, ಕೈಹಿಡಿದು ತಿದ್ದಿಸುವುದು ನಡೆದೆ ಇದೆ.

ಇಂತಹ ಕಾಲದಲ್ಲಿ ವೈದ್ಯರೊಬ್ಬರು ಎಲ್ಲರಿಗೂ ಮಾದರಿಯಾಗುವಂತೆ ಸುಂದರ ಕೈಬರಹ ಹೊಂದಿದ್ದಾರೆ. ಇವರು ತಮ್ಮ ಬರವಣಿಗೆಯಿಂದಲೇ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ವೈದ್ಯಕೀಯ ಶಿಕ್ಷಣ ರಂಗದಲ್ಲಿ ವಿಷಯಗಳೇ ಹೊರೆಯಷ್ಟಿರುವಾಗ ಅಕ್ಷರಗಳ ಚಂದಕ್ಕೆ ಲಕ್ಷ್ಯ ವಹಿಸುವವರು ಕಡಿಮೆ ಮಂದಿ.ವೈದ್ಯರು ಬ್ಲಾಕ್ ಲೆಟರ್ಗಳಲ್ಲಿ ಬರೆಯಬೇಕು ಎಂಬ ನಿಯಮಗಳಿದ್ದರೂ ಸಾಮಾನ್ಯವಾಗಿ ಅಸ್ಪಷ್ಟವಾಗಿಯೇ ಬರೆಯುತ್ತಾರೆ.ಮೆಡಿಕಲ್ ಶಾಪ್ ನವರಿಗೆ ಮಾತ್ರ ಅರ್ಥವಾಗುವಂತೆ ಇರುತ್ತವೆ ಇವರ ಬರಹಗಳು.

ಕೇರಳದ ಮಕ್ಕಳ ತಜ್ಞರೊಬ್ಬರು ಔಷಧಿ ಚೀಟಿಯಲ್ಲಿ ಸುಂದರವಾಗಿ,ರೋಗಿಗಳಿಗೆ ಸರಿಯಾಗಿ ಕಾಣುವಂತೆ ಬ್ಲಾಕ್ ಲೆಟರ್ ಗಳಲ್ಲಿ ಬರೆದಿದ್ದಾರೆ.ಇವರು ಚಿಕ್ಕಂದಿನಿಂದಲೂ ಚೆನ್ನಾಗಿ ಅಭ್ಯಾಸ ಮಾಡುವುದರ ಜೊತೆಗೆ ತಮ್ಮ ಕೈಬರಹವನ್ನು ಚಂದವಾಗಿಸಲು ದಿನವೂ ಕಾಪಿಬುಕ್ ಗಳನ್ನು ಬರೆಯುತ್ತಿದ್ದರಂತೆ. ಈ ಔಷಧಿ ಚೀಟಿಯು ವೈರಲ್ ಆಗಿದ್ದು ಈ ವೈದ್ಯರ ಪರಿಚಯಕ್ಕೆ ಕಾರಣವಾಗಿದೆ.

ನಿತಿನ್ ನಾರಾಯಣನ್ ಅವರು, ವೈದ್ಯರೂ ಅಕ್ಷರಗಳನ್ನು ಸುಂದರ ಶೈಲಿಯಲ್ಲಿ ಬರೆಯುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಡಾಕ್ಟರ್ ನಿತಿನ್ ಅವರು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿ, ಜವಾಹರ್ ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ನಿಂದ ಎಂಡಿಯನ್ನು ಪಡೆದಿದ್ದಾರೆ.ಕೇರಳದ ಪಾಲಕ್ಕಾಡ್ ಅಲ್ಲಿರುವ ಆರೋಗ್ಯ ಕೇಂದ್ರವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಬರಹದಿಂದಲೇ ಮಾಧ್ಯಮಗಳಲ್ಲೂ ಫೇಮಸ್ ಆಗಿದ್ದಾರೆ.ಇವರು ಇರಿನಜಲಕುಡ ಬಳಿಯ ಪಡೆಯೂರಿನವರು.

By admin

Leave a Reply

Your email address will not be published.