ಭೂತ, ಮೂಢನಂಬಿಕೆಗಳನ್ನು ಈಗಿನ ಕಾಲದಲ್ಲಿ ನಂಬುವವರು ಕಡಿಮೆ ಆದರೆ ಭೂತವೇನೊ ಹೀಗೆ ಮಾಡುತ್ತಿರುವುದು ಎಂದು ಅನಿಸುವಂತೆ ಘಟನೆಗಳು ನಡೆಯುತ್ತದೆ. ಅಂತದ್ದೆ ಘಟನೆಯೊಂದು ಕಾರವಾರ ನಗರದಲ್ಲಿ ನಡೆದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭೂತ, ದೆವ್ವ ಇವೆಲ್ಲವನ್ನು ಈಗಿನ ಕಾಲದಲ್ಲಿ ನಂಬುವುದಿಲ್ಲ ಆದರೆ ಪ್ರಸಿದ್ಧ ಮಲೆನಾಡು ಪ್ರದೇಶ ಹಾಗೂ ಕರಾವಳಿ ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶಿವಾಜಿ ಎಂಬ ಶಾಲೆಗೆ ಬೀಗ ಹಾಕಲಾಗಿತ್ತು ಆದ್ದರಿಂದ ಇಡೀ ಆವರಣದಲ್ಲಿ ಜನರ ಸದ್ದಿಲ್ಲದೆ ಕತ್ತಲು ಕವಿದಿತ್ತು. ಹೀಗಿರುವಾಗ ಕತ್ತಲಲ್ಲಿ ಬೀಗ ಹಾಕಿದ್ದ ಶಾಲೆಯ ಬಾಗಿಲು ಒಂದೇ ಸಮನೆ ಗಾಳಿಯ ಶಬ್ದವಿಲ್ಲದಿದ್ದರೂ ಬಡಿದುಕೊಳ್ಳುತಿತ್ತು ಬಾಗಿಲ ಶಬ್ಧ ಕೇಳಿಸಿಕೊಂಡ ಅಕ್ಕ ಪಕ್ಕದವರು ಗಾಬರಿಗೊಂಡು ಶಾಲೆಯ ಬಳಿ ಬಂದು ಕೈಯಲ್ಲಿ ಟಾರ್ಚ್ ಹಿಡಿದು ನೋಡಿದ್ದಾರೆ.

ಬಾಗಿಲು ಒಂದೇ ಸಮನೆ ಬಡಿದುಕೊಳ್ಳುತ್ತಿದ್ದುದನ್ನು ನೋಡಿದ ಸ್ಥಳೀಯರು, ಒಳಗೆ ಯಾರಿದ್ದೀರಿ ಎಂದು ಕೇಳಿದ್ದಾರೆ. ಆದರೆ ಒಳಗಿನಿಂದ ಯಾವ ಧ್ವನಿಯೂ ಬರಲಿಲ್ಲ ಆದರೂ ಸ್ಥಳೀಯರು ಕಿಟಕಿಯಲ್ಲಿ ಇಣಕಿ ನೋಡಿದರೂ ಆಗಲೂ ಯಾರೂ ಕಾಣಿಸಲಿಲ್ಲ. ಇದರಿಂದ ಭಯಗೊಂಡ ಸ್ಥಳೀಯರು ಭೂತವಿರಬೇಕು ಎಂದು ಹೆದರಿ ಅಲ್ಲಿಂದ ದೂರ ಸರಿದು ಪೊಲೀಸರಿಗೆ ತಿಳಿಸಿದರು. ಈ ವಿಷಯ ಸುತ್ತಮುತ್ತ ಇದ್ದ ಮನೆಯವರಿಗೆ ತಲುಪಿ ಹೆಚ್ಚಿನ ಜನ ಸೇರಿದರು ನಂತರ ಪೊಲೀಸರು ಸಹ ಬಂದು ನೋಡಿದಾಗಲೂ ಒಳಗಿನಿಂದ ಯಾವುದೇ ಧ್ವನಿ ಬರದೇ ಇದ್ದಾಗ ಪೊಲೀಸರು ಕಂಗಾಲಾದರು ಅವರು ಶಾಲೆಯ ಬೀಗ ತೆರೆಯಿಸಿ ನೋಡಿದರು ಆಗ ತಿಳಿಯಿತು ಶಾಲೆಯ ಬಾಗಿಲು ಹಾಕಿದ್ದಾಗ ಹೇಗೂ ಬೀದಿ ನಾಯಿಯೊಂದು ಶಾಲೆಯ ಕೊಠಡಿಯ ಒಳಕ್ಕೆ ಸೇರಿಕೊಂಡು ಬಿಟ್ಟಿತ್ತು. ಇಡೀ ದಿನ ಅಲ್ಲಿಯೇ ಇದ್ದ ಈ ನಾಯಿ ಹೊರಹೋಗಲು ಒಳಗಿನಿಂದ ಬಾಗಿಲನ್ನು ಕೆರೆದಿದೆ. ಈ ಶಬ್ದಕ್ಕೆ ಜನ ನೋಡಿ ಭೂತದ ಚೇಷ್ಟೆಯೆಂದು ಹೆದರಿ ಕಂಗಾಲಾಗಿದ್ದರು. ನಂತರ ಕೊಠಡಿಯ ಒಳಗಿನಿಂದ ನಾಯಿ ಹೊರಬರುತಿದ್ದಂತೆ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ ಭೂತ ಅಲ್ಲ ಎಂಬ ವಿಷಯ ಮನದಟ್ಟಾಯಿತು. ಒಮ್ಮೊಮ್ಮೆ ಭೂತ ಇದೆ ಎಂದು ಭಯಪಡುವ ಘಟನೆಗಳು ನಡೆದು ಹೋಗುತ್ತದೆ. ಒಟ್ಟಿನಲ್ಲಿ ನಾಯಿಯಿಂದ ಜನರು ಕಂಗಾಲಾಗಬೇಕಾಯಿತು.

By admin

Leave a Reply

Your email address will not be published.