ತಂದೆ ಬಾರದ ಲೋಕಕ್ಕೆ ಹೋಗಿದ್ದರು ಅವನ ಚಿಕ್ಕ ಮಗು ಪ್ರತಿದಿನ ಮಾಡ್ತಿರೋದನ್ನ ನೋಡಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ.

Real Story ಗೆಳೆಯರೇ ನಾವಿಂದು ನಿಮಗೆ ಹೇಳಲು ಹೊರಟಿರುವ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ಕಣ್ಣಲ್ಲಿ ಕೂಡ ನೀರು ಬರೋದ್ರಲ್ಲಿ ಅನುಮಾನಾನೇ ಇಲ್ಲ. ಯಾಕೆಂದರೆ ಈ ಕಹಾನಿ ಅಷ್ಟೊಂದು ಭಾವುಕತೆಯನ್ನು ಒಳಗೊಂಡಿದೆ. ತಂದೆಯನ್ನು ಕಳೆದುಕೊಂಡಿರುವ ಚಿಕ್ಕ ಮಗುವಿನ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿರೋದು. ಬನ್ನಿ ಈ ನೈಜ ಘಟನೆಯನ್ನು(Real Incident) ವಿವರವಾಗಿ ತಿಳಿದು ಕೊಳ್ಳೋಣ.

ಈ ಹೃದಯ ತಟ್ಟುವಂತಹ ಘಟನೆ ನಡೆದಿರುವುದು ನಮ್ಮ ಮಲೆನಾಡಿನ ತಪ್ಪಲಿನಲ್ಲಿ ಇರುವ ಶಿವಮೊಗ್ಗದಲ್ಲಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರಣ್ ಎನ್ನುವ ವ್ಯಕ್ತಿ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರಿನ ಬಿಟ್ಟು ತಮ್ಮ ಊರಿಗೆ ಹೋಗುತ್ತಾರೆ. ಈ ಸಮಯದಲ್ಲಿ ತಮ್ಮ ಊರಿನಲ್ಲಿ ಸುಮ್ಮನಿರದೇ ಅಲ್ಲಿಯೂ ಕೂಡ ಕೆಲಸವನ್ನು ಮಾಡುತ್ತ ಜನರಿಗೆ ಸಹಾಯವನ್ನು ಮಾಡುತ್ತಾರೆ. ಜನರಲ್ಲಿ ಈ ಸಮಸ್ಯೆಯ ಬಗ್ಗೆ ಜಾಗೃತಿಯನ್ನು(Awareness) ಮೂಡಿಸುವಂತಹ ಕೆಲಸವನ್ನು ಕೂಡ ಮಾಡುತ್ತಾರೆ.

ಆದರೆ ಇಲ್ಲಿ ನಡೆಯುವಂತಹ ಮತ್ತೊಂದು ವಿಧಿಯಾಟ ಏನೆಂದರೆ ಶರಣ್ ಲಾಕ್ ಡೌನ್ ನಲ್ಲಿ ಎಲ್ಲರಿಗೆ ಸಹಾಯ ಮಾಡುತ್ತ ಹಾಗು ಇದರ ಕುರಿತಂತೆ ಎಲ್ಲರಲ್ಲಿ ಜಾಗೃತಿ ಮೂಡಿಸುತ್ತಾ ಅವರೇ ಅದಕ್ಕೆ ತುತ್ತಾಗುತ್ತಾರೆ. ಚಿಕಿತ್ಸೆ(Medication) ಫಲಕಾರಿಯಾಗಿದೆ ಅವರು ಕೂಡ ಮರಣ ಹೊಂದುತ್ತಾರೆ. ಇನ್ನು ಅವರ ಪತ್ನಿ ಕೂಡ ಮಗಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯಿಂದ ಮರಣವನ್ನು ಹೊಂದುತ್ತಾರೆ. ಕೆಲವೇ ಸಮಯಗಳ ಅಂತರದಲ್ಲಿ ತಂದೆ ತಾಯಿ ಇಬ್ಬರನ್ನು ಕೂಡ ಮಗು ಕಳೆದುಕೊಂಡಿತ್ತು.

ಆದರೆ ಶರಣ್ ಅವರ ಸಹೋದರಿ ಈಗ ಆ ಮಗುವನ್ನು ತಾವೇ ತಮ್ಮ ಮಗುವಿನಂತೆ ಸಾಕುತ್ತಿದ್ದಾರೆ. ಪ್ರತಿದಿನ ಚಿಕ್ಕಮಗು ಫೋನ್ ತೆಗೆದುಕೊಂಡು ತಮ್ಮ ತಂದೆಗೆ ಫೋನ್ ಮಾಡುತ್ತಾಳೆ ಆದರೆ ಆ ಕಡೆಯಿಂದ ಫೋನ್ ಎತ್ತಲು ಅವಳ ತಂದೆಯೇ ಇಲ್ಲ ಎನ್ನುವ ವಿಚಾರ ಆಕೆಗೆ ತಿಳಿದರೆ ಖಂಡಿತವಾಗಿ ಎಷ್ಟು ಬೇಸರ ಮಾಡಿಕೊಳ್ಳಬಹುದು. ಇಷ್ಟೊಂದು ಚಿಕ್ಕ ವಯಸ್ಸಿಗೆ ಈ ರೀತಿಯ ಕಷ್ಟವನ್ನು ಆ ದೇವರು ಈ ಮಗುವಿಗೆ ನೀಡಬಾರದಾಗಿತ್ತು ಎಂಬದಾಗಿ ಎಲ್ಲರೂ ಕೂಡ ಪ್ರಾರ್ಥಿಸುತ್ತಾರೆ. ಆದರೆ ವಿಧಿ ನಿಯಮವನ್ನು ಬದಲಾಯಿಸುವ ತಾಕತ್ತು ಯಾರಿಗೆ ತಾನೇ ಇದೆ ಹೇಳ.

Leave a Comment

error: Content is protected !!