ಇನ್ನು 25 ವರ್ಷ ಕಳೆದರೆ ಭಾರತದಲ್ಲಿ ರೈತರ ಇರುವುದಿಲ್ಲ; ಸದ್ಗುರು ಹೀಗೆ ಹೇಳಿದ್ದು ಯಾಕೆ ಗೊತ್ತಾ?


ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶಕ್ಕೆ ರೈತರೇ ಜೀವಾಳ. ಇದನ್ನು ನಾವು ಶಾಲೆಗಳ ಪಠ್ಯ ಪುಸ್ತಕಗಳಲ್ಲಿಯೂ ಓದಿಕೊಂಡು ಬಂದಿದ್ದೇವೆ. ಹಾಗೆಯೇ ಭಾರತದಲ್ಲಿ ರೈತರಿಗೆ ಪ್ರಮುಖ ಸ್ಥಾನವಿದೆ. ಆದರೆ ಇಂದು ಅನ್ನ ಕೊಡುವ ರೈತ ಸಂಖ್ಯೆ ಕಡಿಮೆಯಾಗುತ್ತಿದೆ. ಕಾರಣ ನಗರಪ್ರದೇಶಗಳಲ್ಲಿ ಕೈಗಾರಿಕೆಗಳು ಹೆಚ್ಚು ತಲೆಯೆತ್ತುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಹೆಚ್ಚು ಹೆಚ್ಚು ಉದ್ಯೋಗ ಸಿಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮಕ್ಕಳು ಕೂಡ ಹಳ್ಳಿಯನ್ನು ತೊರೆದು ನಗರಕ್ಕೆ ಬಂದು ಉದ್ಯೋಗವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ರೈತರ ಸಂಖ್ಯೆ ಹೆಚ್ಚುತ್ತಿಲ್ಲ ಬದಲಿಗೆ ಕಡಿಮೆಯಾಗುತ್ತದೆ. ಈ ಬಗ್ಗೆ ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಹೇಳುವ ಪ್ರಕಾರ ನಾವು ರೈತರಿಲ್ಲದ ದೇಶ ಎನಿಸಿಕೊಳ್ಳುವ ಸಮಯ ಹತ್ತಿರದಲ್ಲೇ ಇದೆ!

ದೇಶದ ಅಭಿವೃದ್ಧಿ ಹಾಗೂ ರೈತರಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸದ್ಗುರು ಅವರು ಸಂದರ್ಶನವೊಂದರಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯದ ಪ್ರಕಾರ ಮುಂದಿನ 25 ವರ್ಷಗಳಲ್ಲಿ ರೈತರು ಎಂಬುವವರು ದೇಶದಲ್ಲಿ ಇರುವುದೇ ಇಲ್ಲ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರ. ಹಾಗಾಗಿ ಕೃಷಿಯನ್ನು ಇನ್ನೂ ಹೆಚ್ಚು ಆಕರ್ಷಕ ವೃತ್ತಿಯನ್ನಾಗಿ ರೂಪಿಸುವ ಅವಶ್ಯಕತೆ ದೇಶದಲ್ಲಿ ಇದೆ ಯುವಪೀಳಿಗೆಯನ್ನು ಆಯ್ದುಕೊಳ್ಳುವುದಕ್ಕೆ ಅಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಕೂಡ ಗುರೂಜಿ ಹೇಳಿದ್ದಾರೆ.

ಅವರು ಹೇಳುವ ಪ್ರಕಾರ ಕಡ್ಡಾಯ ಶಿಕ್ಷಣದಿಂದಾಗಿ ಸುಮಾರು 18 ವರ್ಷಗಳವರೆಗೆ ಮಕ್ಕಳಿಗೆ ರೈತರ ಜಮೀನಿಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಜೊತೆಗೆ ಬಾಲಕಾರ್ಮಿಕ ಕಾಯ್ದೆಯು ಜಾರಿಯಲ್ಲಿರುವುದರಿಂದ ಮಕ್ಕಳು ತೋಟದಲ್ಲಿ ಯಾವುದೇ ಕೆಲಸವನ್ನು ಮಾಡುವ ಹಾಗಿಲ್ಲ. 18 ವರ್ಷದ ಬಳಿಕ ಮತ್ತೆ ಕೃಷಿಯತ್ತ ಯಾರು ಮುಖ ಮಾಡುವುದಿಲ್ಲ. ಕಡ್ಡಾಯ ಶಿಕ್ಷಣವಾಗಲಿ, ಬಾಲ ಕಾರ್ಮಿಕರ ಪರವಾದ ಕಾನೂನಾಗಲೀ ಒಳ್ಳೆಯದೇ, ಆದರೆ ನಮ್ಮ ರಾಷ್ಟ್ರವು ಅಭಿವೃದ್ಧಿ ಆಗುವುದರ ಜೊತೆಗೆ ಕೃಷಿಯ ವಿಷಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಕೃಷಿಯ ಮಹತ್ವವನ್ನು ನಾವು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂಬುದು ಸದ್ಗುರು ಅವರ ಅಭಿಪ್ರಾಯ. ಇನ್ನು ಅವರು ನಡೆಸಿದ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಈಗ ಇರುವ ಶೇಕಡಾ 63ರಷ್ಟು ರೈತರಲ್ಲಿ ತಮ್ಮ ಮಕ್ಕಳು ರೈತರಾಗಬೇಕು ಅಥವಾ ತಾನು ಅಪ್ಪನಂತೆ ರೈತನಾಗಬೇಕು ಎಂದುಕೊಳ್ಳುವವರ ಸಂಖ್ಯೆ ಕನಿಷ್ಠ ಶೇಕಡ ಎರಡರಷ್ಟೂ ಇಲ್ಲ. ಈ ಭಾವನೆ ಹೋಗಲಾಡಿಸಿ ನಾವು ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸುವುದು ಅತ್ಯಂತ ಮುಖ್ಯ. ಇಲ್ಲದೆ ಹೋದರೆ ದೇಶ ದೊಡ್ಡ ಅಪಾಯಕ್ಕೆ ಸಿಲುಕಲಿದೆ ಎಂದು ಸದ್ಗುರು ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರಿಸಿದ ಸದ್ಗುರು ಅವರು ಕೃಷಿಯಲ್ಲಿಯೂ ಕೂಡ ಇಂಜಿನಿಯರ್ ಗಳು ವಕೀಲರು, ವೈದ್ಯರು, ಗಳಿಸುವಷ್ಟು ಆದಾಯ ಗಳಿಸುವವ ಹಾಗಾದರೆ ಯುವಕರು ಕೃಷಿಯತ್ತ ಆಕರ್ಷಿತರಾಗುತ್ತಾರೆ. ಹೀಗಾಗದೇ ಇದ್ದಲ್ಲಿ ಜನರು ನಗರಗಳತ್ತ ವಲಸೆ ಹೋಗುವ ಸಂಪ್ರದಾಯ ಖಂಡಿತವಾಗಿಯೂ ನಿಲ್ಲುವುದಿಲ್ಲ. ಆಧ್ಯಾತ್ಮ ಗುರು ಎನಿಸಿಕೊಂಡಿರುವ ಸದ್ಗುರು ಅವರು ಆಧ್ಯಾತ್ಮದ ಜೊತೆಗೆ ವಾಸ್ತವ ಅಂಶಗಳ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಈಗ ಅವರು ಹೇಳಿರುವ ಮಾತುಗಳು ಕೂಡ ಗಂಭೀರವಾದ ವಿಷಯ. ಈ ಬಗ್ಗೆ ಖಂಡಿತವಾಗಿಯೂ ಎಲ್ಲರೂ ಯೋಚಿಸಲೇಬೇಕು. ಇಲ್ಲವೇ ಮುಂದೆ ದೇಶದಲ್ಲಾಗುವ ಅಪಾಯವನ್ನು ಎದುರಿಸಲು ಎಲ್ಲರೂ ಸಿದ್ಧರಾಗಬೇಕು. ಯಾಕೆಂದರೆ ದೇಶದ ಜೀವಾಳವೇ ಆಗಿರುವ ನೇಗಿಲಯೋಗಿಯೇ ಇಲ್ಲದೆ ಇದ್ದರೆ, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉದ್ಭವವಾಗದೆ ಇರುವುದಿಲ್ಲ.


Leave A Reply

Your email address will not be published.