ಮದುವೆಯಲ್ಲಿ ಬಳಸುವ ಅಲಂಕಾರಿತ ಬಿತ್ತಕ್ಕಿ ಬಟ್ಟಲು ಅಥವಾ ಅಕ್ಷತೆ ಬಟ್ಟಲನ್ನು ನೀವೇ ತಯಾರಿಸಿಕೊಳ್ಳಲು ಉತ್ಸುಕರಾಗಿದ್ದೀರಾ? ಹಾಗಾದ್ರೆ ಈ ವಿಡಿಯೋವನ್ನು ತಪ್ಪದೆ ನೋಡಿ

ಮದುವೆ ನಿಶ್ಚಿತಾರ್ಥ ಹೊಸ ಮನೆಯ ಗ್ರಹಪ್ರವೇಶ ಹೀಗೆ ಹಲವಾರು ಸಭೆ ಸಮಾರಂಭಗಳಲ್ಲಿ ಮನೆಯನ್ನು ಹೂಗಳಿಂದ, ಡೆಕೋರೇಟಿವ್ ಐಟಂಗಳಿಂದ ಅಲಂಕಾರಗೊಳಿಸುವುದಷ್ಟೇ ಅಲ್ಲದೆ ಪೂಜೆಗಾಗಿ ದೇವರ ಮುಂದೆ ಬಳಸುವ ಪಾತ್ರಗಳನ್ನು ಮದುವೆ ನಿಶ್ಚಿತಾರ್ಥ ಮನೆಗಳಲ್ಲಿ ಅಕ್ಕಿ ಹಾಗೂ ಕಾಯಿ ಅಥವಾ ಹಣ್ಣು ತಿಂಡಿ ತಿನಿಸುಗಳನ್ನು ಸೇರಿದ ಹಲವಾರು ಸಂಖ್ಯೆಯ ಸಂಬಂಧಿಕರ ಎದುರಲ್ಲಿ ಇಡುವಾಗ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿರುತ್ತಾರೆ.

ಹಾಗೆಯೇ ಸುಲಭವಾಗಿ ನಿಮ್ಮ ಮನೆಯಲ್ಲಿರುವ ಪಾತ್ರೆ ಅಥವಾ ಬಟ್ಟಲನ್ನೇ ಸುಂದರವಾಗಿ ಅಲಂಕೃತಗೊಳಿಸುವ ಆಸೆ ಇದ್ದರೆ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ. ನಿಮಗಿಷ್ಟವಾದ ಮೂರರಿಂದ ನಾಲ್ಕು ಬಣ್ಣವನ್ನು ಮತ್ತು ಕುಂಚವನ್ನು ಬಳಸಿಕೊಂಡು ಬಟ್ಟಲು ಅಥವಾ ಪಾತ್ರೆಯ ಮೇಲೆ ಸುಂದರ ಹೂಗಳ ಅಥವಾ ಹೂಬಳ್ಳಿಗಳ ಚಿತ್ರವನ್ನು ವಿಡಿಯೋದಲ್ಲಿ ತೋರಿಸಿರುವಂತೆ ಬಿಡಿಸಲು ಪ್ರಯತ್ನಿಸಿ.

ಮನೆಯಲ್ಲಿ ಕೂತು ಬೇಸರವಾದಾಗ, ಸ್ಟ್ರೆಸ್ ಫುಲ್ ಜೀವನದ ಮಧ್ಯೆ ಸ್ವಲ್ಪ ಸಮಯವನ್ನು ಕರಕುಶಲ ಕಲೆಗಳಿಗಾಗಿ ಮೀಸಲಿಟ್ಟು, ಸಣ್ಣ ಪುಟ್ಟ ಡೆಕೋರೇಟಿವ್ ಐಡಿಯಾಗಳ ಮೂಲಕ ನಿಮ್ಮ ಮನೆಯನ್ನು ಅಥವಾ ಪೂಜಾಧಿ ಕಾರ್ಯಕ್ರಮಗಳನ್ನು ಸುಂದರಗೊಳಿಸುವುದರೊಂದಿಗೆ,ನಿಮ್ಮ ಮನವನ್ನು ಹರ್ಷಗೊಳಿಸಿ.

ವಿಡಿಯೋ ವೀಕ್ಷಿಸಿದ ಬಳಿಕ ನಿಮಗೆ ಹೊಳೆದ ಹೊಸ ಮಾದರಿಯ ಡಿಸೈನನ್ನು ಬಿಡಿಸಿ ನಿಮ್ಮ ಕೈಯಿಂದಲೇ ಸಿದ್ದಗೊಂಡ ಅಲಂಕೃತ ಪಾತ್ರೆಗಳನ್ನು ನಿಮ್ಮ ಮನೆಯ ಸಭೆ ಸಮಾರಂಭಗಳಲ್ಲಿ ಬಳಸಿ ಆನಂದ ಪಟ್ಟುಕೊಳ್ಳಿ.

ವಿಡಿಯೊ ನೋಡಿ : https://youtu.be/p_eKCZH6hqk

Leave a Comment

error: Content is protected !!