ಬೆಲ್ಜಿಯಂ ಬೆಡಗಿ ಬೀಸಿದ ಬಲೆಯಲ್ಲಿ ಬಿದ್ದ ಹಂಪಿಯ ಆಟೋಚಾಲಕ..! ಮೂರು ವರ್ಷದ ಹಿಂದೆಯೇ ಫಿದಾ ಆಗಿದ್ದ ಗೈಡ್ನನ್ನು ವಿವಾಹವಾದ ವಿದೇಶಿ ವಧು


ಬಾಳ ಸಂಗಾತಿಯನ್ನು ಆಯ್ದುಕೊಳ್ಳಲು ಬಣ್ಣ, ಹಣ, ಆಭರಣ, ದೇಶ ಯಾವುದು ಅಷ್ಟಾಗಿ ಲೆಕ್ಕಕ್ಕೆ ಬರುವುದಿಲ್ಲ. ನಮ್ಮ ಜೊತೆ ಹೊಂದಿಕೊಳ್ಳುವ ಮನಸ್ಥಿತಿ ಇದೆ ಎಂದು ತಿಳಿದುಬಂದರೆ ಸಾಕು; ಮುಂಬರುವ ಎಲ್ಲ ಕಷ್ಟಗಳನ್ನು ಒಟ್ಟಿಗೆ ಎದುರಿಸಬಲ್ಲೆವು ಎಂಬ ಧೈರ್ಯ ಬಂದು ಬಿಡುತ್ತದೆ. ಹೀಗೆ ಒಂದು ಅಪರೂಪದ ವಿವಾಹ ನಡೆದಿದೆ.

ಬೆಲ್ಜಿಯಂ ಬೆಡಗಿ ಒಬ್ಬಳು ಕರ್ನಾಟಕದ ಹಂಪಿಯ ಹುಡುಗನನ್ನು ವಿವಾಹವಾಗಿದ್ದಾಳೆ. ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಹಂಪಿಯ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿ ಅನಂತರಾಜು ಅವರನ್ನು ಬೆಲ್ಜಿಯಂ ದೇಶದ ಪ್ರಜೆಯಾಗಿರುವ ಕೆಮಿಲ್ ಎನ್ನುವವಳು ಮದುವೆಯಾಗಿ ದಾಂಪತ್ಯದ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯು ಸರಳವಾಗಿ ನವೆಂಬರ್ 25ರಂದು ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದಲ್ಲಿ ನೆರವೇರಿದೆ.

ಅನಂತರಾಜು ಅವರು ಗೈಡ್ ಆಗಿ ದೇಶ ವಿದೇಶಗಳಿಂದ ಬಂದ ಪ್ರವಾಸಿಗರಿಗೆ ಹಂಪಿಯ ಗತವೈಭವವನ್ನು ವರ್ಣಿಸುತ್ತಾ, ಆಟೋವನ್ನು ಕೂಡ ಓಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಮೂರು ವರ್ಷಗಳ ಹಿಂದೆಯೇ ಹಂಪಿಯ ಸೊವಾಗನ್ನು ನೋಡಲು ಮರೆಯನ್ನೇ ಜಿಮ್ ಫಿಲಿಪ್ಪೆ ಎಂಬ ಬೆಲ್ಜಿಯಂನ ಕುಟುಂಬವೊಂದು ಬಂದಿತ್ತು. ಹಂಪಿಯ ಸೌಂದರ್ಯವನ್ನು ಸವಿಯಲು ವಿ ಅನಂತರಾಜು ಸಹಕರಿಸಿದ್ದರು. ಅದೇ ವೇಳೆಯಲ್ಲಿ ಜಿಮ್ ಅವರ ಮೂರನೇ ಮಗಳಾದ ಕೆಮಿಲ್ ನ ಮೇಲೆ ಮನಸಾಗಿತ್ತು.

hampi auto driver and belgium girl Hampi Wedding photo
hampi auto driver and belgium girl Hampi Wedding photo

ಈ ಕುಟುಂಬದೊಂದಿಗೆ ನಂತರದ ದಿನದಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಅನಂತರಾಜು ಅವರಿಗೆ ಜೀಮ್ ನ ಮೂರನೇ ಪುತ್ರಿ ಕೆಮಿಲ್ ಕೂಡ, ಉತ್ತಮ ಮಾರ್ಗದರ್ಶಕರು ಮತ್ತು ಉಪಕಾರಿ ಆಟೋ ಚಾಲಕರೆಂದು ಮನಸ್ಸು ನೀಡಿದ್ದಾಳೆ. ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿಯಾಗಿ ಮಾಡಿಕೊಡುವ ಆಸೆ ಇದ್ದರೂ, ಕೆಮಿಲ್ ನ ತಂದೆ ತಾಯಿಗಳು ಅನಂತರಾಜು ಅವರ ಆಸೆಯಂತೆ ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನದಲ್ಲಿ ತಮ್ಮ ಮಗಳನ್ನು ಅನಂತರಾಜುವಿಗೆ ಧಾರೆಎರೆದು ಕೊಟ್ಟಿದ್ದಾರೆ.

ಕೆಮಿಲ್ ನ ಸಂಬಂಧಿಗಳು, ಕುಟುಂಬದವರು ಸೇರಿ 50ಕ್ಕೂ ಹೆಚ್ಚು ಜನ ಬೆಲ್ಜಿಯಂ ದೇಶದಿಂದ ಹಂಪಿಗೆ ಮದುವೆಯ ಶುಭ ಸಮಾರಂಭಕ್ಕೆ ಬಂದು, ವಧುವರರಿಗೆ ಆಶೀರ್ವದಿಸಿ, ಊಟೋಪಚಾರಗಳನ್ನು ಸ್ವೀಕರಿಸಿದ್ದಾರೆ. ನವೆಂಬರ್ 24ರ ಸಂಜೆ ಕೆಮಿಲ್ ಹಾಗೂ ಅನಂತರಾಜು ಇವರ ನಿಶ್ಚಿತಾರ್ಥ ಕಾರ್ಯವು ನೆರವೇರಿದ್ದು, ನವೆಂಬರ್ 25 ಅಂದರೆ ಶುಕ್ರವಾರ ಬೆಳಗ್ಗೆ 8:30 ರಿಂದ 9:30ವರೆಗೆ ಸಲ್ಲುವ ಕುಂಭ ಲಗ್ನದ ಶುಭಮೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನಕ್ಕೆ ಹಂಪಿಯ ಹಾಗೂ ಬೆಲ್ಜಿಯಂ ದೇಶದ ಆಪ್ತರು ಶುಭ ಹಾರೈಸಿದ್ದಾರೆ.

hampi auto driver and belgium girl Hampi Wedding photo
hampi auto driver and belgium girl Hampi Wedding photo

Leave A Reply

Your email address will not be published.