Gold Rate: ಇತಿಹಾಸದಲ್ಲಿ ದಾಖಲೆ ಬರೆದ ಚಿನ್ನದ ಬೆಲೆ. ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್.

Gold Rate ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಚಿನ್ನವನ್ನು ಆಮದು ಮಾಡುವಂತಹ ದೇಶ ಎಂದರೆ ಅದು ನಮ್ಮ ಭಾರತ ದೇಶ(India). ಖಂಡಿತವಾಗಿ ಈ ವಿಚಾರದಲ್ಲಿ ಪ್ರತಿಯೊಂದು ವರ್ಷವೂ ಕೂಡ ಭಾರತ ದೇಶದ ಮಹಿಳೆಯರು ತಮ್ಮದೇ ಆದಂತಹ ರೆಕಾರ್ಡ್ಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಈಗ ಜಾಗತಿಕವಾಗಿ ಚಿನ್ನದ ದರ(Golden Rate) ಎನ್ನುವುದು ಗಗನವನ್ನು ತಲುಪುತ್ತಿದ್ದು ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆ ಕಂಡು ಬಂದಿದೆ. ಇದು ಎಲ್ಲಾ ಕಡೆ ಚಿನ್ನದ ಖರೀದಿದಾರರಿಗೆ ತಲೆಬಿಸಿ ಉಂಟಾಗುವಂತೆ ಮಾಡಿದೆ.

ಹೌದು ಈ ಬಾರಿ ಚಿನ್ನದ ಬೆಲೆ ಎನ್ನುವುದು ಹತ್ತು ಗ್ರಾಂ ಗೆ ರೂ.60,000 ಆಗಿರುವುದು ಇತಿಹಾಸದಲ್ಲೇ ಮೊದಲು ಎಂಬುದಾಗಿ ತಿಳಿದು ಬಂದಿದೆ. ಕ್ರಿಸ್ತಪೂರ್ವ 5ನೇ ಶತಮಾನದಿಂದಲೂ ಕೂಡ ಜಾಗತಿಕವಾಗಿ ಚಿನ್ನದ ಬೆಲೆ ಎನ್ನುವುದು ಎಂದಿಗೂ ಕೂಡ ಕಡಿಮೆಯಾಗಿಲ್ಲ ಆದರೆ ಈ ಬಾರಿ ಚಿನ್ನದ ಬೆಲೆ ಏರಿರುವ ರೀತಿ ನಿಜಕ್ಕೂ ಕೂಡ ಚಿನ್ನದ ಖರೀದಿದಾರರಿಗೆ(Gold Buyers) ಸಾಕಷ್ಟು ಚಿಂತೆಯನ್ನು ಉಂಟುಮಾಡುವಂತೆ ಮಾಡಿದೆ.

ಇನ್ನು ಇದೇ ಸೋಮವಾರ ದಿಲ್ಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.60100 ಆಗಿತ್ತು. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್(1 Ounce) ಚಿನ್ನಕ್ಕೆ 1950 ಡಾಲರ್ ನಿಂದ 2010 ಡಾಲರ್ ವರೆಗೂ ಹೆಚ್ಚಳ ಕಂಡುಬಂದಿತ್ತು ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಬೆಲೆ ಎನ್ನುವುದು ಭಾರತೀಯ ಮಾರುಕಟ್ಟೆಯಲ್ಲಿ(Indian Market) ಚಿನ್ನದ ಬೆಲೆ ಹೆಚ್ಚಳಕ್ಕೆ ಕೂಡ ಕಾರಣವಾಗಿದೆ.

ಈ ಅನಿರೀಕ್ಷಿತ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು ಅಮೆರಿಕ ಸೇರಿದಂತೆ ವಿವಿಧ ದೇಶಗಳ ಬ್ಯಾಂಕಿಂಗ್ ಬಿಕ್ಕಟ್ಟು ಎಂಬುದಾಗಿ ತಿಳಿದು ಬಂದಿದೆ. ಹಲವಾರು ಅಮೆರಿಕನ್ ಬ್ಯಾಂಕ್(American Banks) ಗಳಲ್ಲಿ ಕಂಡುಬರುತ್ತಿರುವಂತಹ ಸಮಸ್ಯೆಗಳೇ ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ದೊಡ್ಡಮಟ್ಟದ ಏರುಪೇರು ಉಂಟಾಗಲು ಕಾರಣವಾಗಿದೆ ಎಂಬುದಾಗಿ ತಿಳಿದುಬಂದಿದೆ.

Leave a Comment

error: Content is protected !!