ರೂಮಿಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತೇನೆ ಎಂದು ಹೋದ ಮದುಮಗಳು ಮಾಡಿದ್ದೇನು ಗೊತ್ತಾ?

Real Story ಸೋನಿಕ ಎನ್ನುವ ಹುಡುಗಿಗೆ ಒಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಆಗಿ ಮದುವೆ ಆಗುವ ಮಟ್ಟಕ್ಕೆ ಕೂಡ ಬಂದಿತ್ತು. ಮದುವೆಯ ಹಿಂದಿನ ದಿನ ರಿಸೆಪ್ಶನ್ ರೀತಿಯ ಕಾರ್ಯಕ್ರಮವನ್ನು ಮಾಡುವ ಸಂಪ್ರದಾಯ ಅವರಲ್ಲಿತ್ತು. ಅದೇ ರಿಸೆಪ್ಶನ್(Reception) ದಿನ ರಾತ್ರಿ ಬಟ್ಟೆ ಏನು ಬದಲಾಯಿಸಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿ ಹೋದ ಹುಡುಗಿ ಮತ್ತೆ ಬರಲೇ ಇಲ್ಲ. ಹಾಗಿದ್ದರೆ ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಅಂದು ಓಡಿ ಹೋಗಿದ್ದ ಹುಡುಗಿ ತನ್ನ ಪ್ರಿಯಕರನನ್ನು ಮದುವೆಯಾಗಿದ್ದಾಳೆ ಎಂಬುದಾಗಿ ಈಗ ತಿಳಿದು ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಗಂಡಿನ ಕಡೆಯವರು ಮದುವೆ ಮಾಡಿಸಿ ಕೊಡುತ್ತೇವೆ ಎಂಬುದಾಗಿ ಕರೆಸಿ ಈ ರೀತಿ ಅವಮಾನ ಮಾಡಿದ್ದೀರಿ ಎಂಬುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಮದುವೆಗಾಗಿ ಈಗಾಗಲೇ ಮಾಡಿರುವಂತಹ ಖರ್ಚನ್ನೆಲ್ಲಾ ವಾಪಸ್ ಕೊಡಿ ಎಂಬುದಾಗಿ ಹೆಣ್ಣಿನ ಕಡೆಯವರ ಬಳಿ ಕೇಳುತ್ತಿದ್ದಾರೆ. ಇದು ಸಾಲದು ಎನ್ನುವಂತೆ ತನ್ನ ಹೆತ್ತವರ ವಿರುದ್ಧವೇ ನಾನು ಪ್ರೀತಿಸಿದವರನ್ನು ಮದುವೆಯಾಗಲು ಬಿಡದೆ ಗ್ರಹಬಂಧನದಲ್ಲಿ ಇರಿಸಿದ್ದರು ಎಂಬುದಾಗಿ ಸೋನಿಕ ದೂರನ್ನು ದಾಖಲಿಸಿದ್ದಾಳೆ.

ಕಳೆದ ತಿಂಗಳಷ್ಟೇ ಸೋನಿಕ ಜೊತೆಗೆ ಗೊತ್ತು ಮಾಡಿದ ಹುಡುಗನ ಜೊತೆಗೆ ಎರಡು ಕುಟುಂಬಗಳು ಸೇರಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾಡಿದ್ದರು. ಆದರೆ ರಿಸೆಪ್ಶನ್ ಸಂಪ್ರದಾಯದ ರಾತ್ರಿಯ ದಿನ ಬಟ್ಟೆ ಹಾಕಿಕೊಂಡು ಬರುತ್ತೇನೆ ಎಂಬುದಾಗಿ ಹೋಗಿದ್ದ ಸೋನಿಕ ತಾನು ಪ್ರೀತಿಸಿದ ಹುಡುಗನ ಜೊತೆಗೆ ಮನೆ ಬಿಟ್ಟು ಓಡಿ ಹೋಗಿ ಅದೇ ಊರಿನಲ್ಲಿ ಮನೆ ಮಾಡಿ ಮದುವೆ ಮಾಡಿಕೊಂಡು ನೆಲೆಸಿದ್ದಾಳೆ. ಮನೆಯ ಹತ್ತಿರದಲ್ಲೇ ಇರುವ ಗುರುಕುಲ ಶಾಲೆಯಲ್ಲಿ ಸೂಪರ್ವೈಸರ್(Supervisor) ಆಗಿ ಸೋನಿಕ ಕೆಲಸ ಮಾಡುತ್ತಿದ್ದಳು.

ಒಟ್ಟಾರೆಯಾಗಿ ಇಲ್ಲಿ ಯಾರದು ತಪ್ಪಿದೆ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಗಂಡಿನ ಕಡೆಯವರು ಹಾಗೂ ಸೋನಿಕ ಇಬ್ಬರೂ ಕೂಡ ಅವಳ ಹೆತ್ತವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ ನ್ಯಾಯಾಂಗ ರೀತಿಯಲ್ಲಿ ಕಾಟವನ್ನು ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ‌‌. ನಿಜಕ್ಕೂ ಇಲ್ಲಿ ಯಾರದು ತಪ್ಪಿದೆ ಯಾರದ್ದು ಸರಿ ಇದೆ ಎನ್ನುವುದನ್ನು ಸಮಯ ತೆಗೆದುಕೊಂಡು ಸರಿಯಾಗಿ ಆಲೋಚಿಸಿಯ ನಿರ್ಧಾರಕ್ಕೆ ಬರಬೇಕಾಗಿರುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!