83 ವರ್ಷದ ಮಾಲಿಕರನ್ನೇ ಕೊಂದ ಶ್ವಾನದ ಮೇಲೆ ಪ್ರೀತಿ ತೋರಿದ ಜನತೆ; ಇದರ ಹಿಂದಿರುವ ಕಾರಣ ಗೊತ್ತಾ!

ಇತ್ತೀಚಿಗೆ ನಾಯಿ ಪ್ರಿಯರು ಹೆಚ್ಚಾಗಿದ್ದಾರೆ. ಎಲ್ಲಾ ನಗರಗಳಲ್ಲಿಯೂ ನೋಡಿ ಜನರು ವಾಕಿಂಗ್ ಅಂತ ಹೋದ್ರೆ ಜೊತೆಗೆ ನಾಯಿಯೂ ಇದ್ಡೆ ಇರುತ್ತೆ. ಇಂದು ಜನ ಜನರನ್ನೇ ನಂಬುತ್ತಿಲ್ಲ. ನಮಗೆ ಬೇರೆ ಯಾರೂ ಸ್ನೇಹಿತರೂ ಬೇಕಾಗಿಲ್ಲ. ಹಾಗಾಗಿ ಸಾಕಷ್ಟು ಜನರ ಇಂದಿನ ಸ್ನೇಹಿತ ಶ್ವಾನ. ಮನೆಯಲ್ಲಿ ಯಾರು ಜನರಿರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಾಯಿಯನ್ನಂತೂ ಸಾಕಿರುತ್ತಾರೆ.

ನಾಯಿ ನಂಬಿಕಸ್ಥ ಪ್ರಾಣಿ. ಇತ್ತೀಚಿಗೆ ತೆರೆಕಂಡ ಚಾರ್ಲಿ ಚಿತ್ರವನ್ನು ನೋಡಿ ಶ್ವಾನ ಪ್ರಿಯರು ಕಣ್ಣೀರಿಟ್ಟಿದ್ದಂತೂ ಸುಳ್ಳಲ್ಲ. ಅಷ್ಟು ನಾಯಿಯನ್ನು ಪ್ರೀತಿಸುವವರು ಇದ್ದಾರೆ. ನಾಯಿಯ ಮೆಲೆ ನಂಬಿಕೆಯಿಟ್ಟು ಮಕ್ಕಳನ್ನೇಲ್ಳಾ ನಾಯಿ ಬಳಿ ಬಿಡುವ ಅದೆಷ್ಟೋ ವಿಡಿಯೋಗಳನ್ನೂ ನೀವು ನೋಡಿರಬಹುದು. ಆದರೆ ಎಲ್ಲಾ ಸಂದರ್ಭದಲ್ಲಿ ನಾಯಿ ನಂಬುವುದು ಕೂಡ ಒಳ್ಳೆಯದಲ್ಲ ಎನ್ನುವುದಕ್ಕೆ ಒಂದು ಜ್ವಲಂತ ಉದಾಹರಣೆಯನ್ನು ನಾವು ನಿಮಗೆ ಹೇಳುತ್ತೇವೆ.

ಉತ್ತರ ಪ್ರದೇಶದ ಲಖನೌದ ಕೈಸರ್ ಭಾಘ್ ನಗರದಲ್ಲಿ 82 ವರ್ಷದ ಅಜ್ಜಿ ನಾಯಿಯೊಂದನ್ನು ಸಾಕಿದ್ದಳು. ಅದು ಪಿಟ್ ಬುಲ್ ಶ್ವಾನ! ತನ್ನ ಮಗನೊಂದಿಗೆ ವಾಸವಾಗಿದ್ದ ಸುಶೀಲಾ ತ್ರಿಪಾಠಿ ಮನೆಯಲ್ಲಿ ಒಬ್ಬರೇ ಇರಬೇಕಾಗುತ್ತದೆ ಅಂತ ಒಂದು ನಾಯಿಯನ್ನು ಸಾಕಿದ್ದರು. ಬಹಳ ವರ್ಷ ಅತ್ಯಂತ ಪ್ರೀತಿಯಿಂದ ಜೊತೆಗೇ ಇತ್ತು ಈ ನಾಯಿ. ಆದರೆ ಒಂದು ದಿನ ಇದ್ದಕ್ಕಿಂದ ಹಾಗೆ ತಲ್ಲ ಮಾಲಕಿಯನ್ನೆ ಕಚ್ಚಿ ಕಚ್ಚಿ ಭೀ’ಕರವಾಗಿ ಕೊಂದು ಹಾಕಿತ್ತು ಪಿಟ್ ಬುಲ್!

ಆದರೆ ಹೀಗೆ ಸಾಕದವರ ಮೇಲೆ ಯಾಕೆ ಆ ಶ್ವಾನ ಎರಗಿ ಬಂತು ಅಂತ ಯಾರಿಗೂ ಗೊತ್ತಿಲ್ಲ. ಸುಶೀಲಾ ತ್ರಿಪಾಠಿ ಮಗ ಜಿಮ್ ಟ್ರೈನರ್. ಅವರು ಮನೆಗೆ ಬರುವರ್ಷರಲ್ಲಿ ಈ ಘಟನೆ ನಡೆದಿತ್ತು. ಇದಾದ ಬಳಿಕ ನಗರದ ಸಂತಾನಹರಣ ಶ್ವಾನ ಕೇಂದ್ರಕ್ಕೆ ನಾಯಿಯನ್ನು ಸಾಗಿಸಲಾಗಿದೆ. ಆದರೆ ಇಲ್ಲಿ ನಡೆಯುತ್ತಿರುವ ಒಂದು ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ!

ತನ್ನ ಮಾಲಿಕೆಯನ್ನೇ ಕೊಂದ ಶ್ವಾನವನ್ನು ತತ್ತು ತೆಗೆದುಕೊಳ್ಳಲು ಜನ ತಾಮುಂದು ನಾಮುಂದು ಅಂತ ಬರುತ್ತಿದ್ದಾರೆ. ದೆಹಲಿ, ಮುಂಬೈ ಬೆಂಗಳೂರಿನಿಂದಲೂ ಕೂಡ ಜನ ಈ ಶ್ವಾನವನು ತೆಗೆದುಕೊಳ್ಳಲು ಆಸಕ್ತರಾಗಿದ್ದಾರೆ. ಅದೇ ರೀತಿ ಎನ್ ಜಿ ಎ ಗಳೂ ಕೂಡ ಈ ನಾಯಿಯನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಶ್ವಾನವನ್ನೇ ಯಾಕೆ ದತ್ತು ತೆಗೆದುಕೊಳ್ಳಲು ಜನ ಬಯಸಿದ್ದಾರೆ ಅನ್ನೋದು ಮಾತ್ರ ಅರ್ಥವಾಗದ ವಿಷಯ.

ಇನ್ನು ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆಆದ ಮೇನಕಾ ಗಾಂಧಿ ಆ ಶ್ವಾನವನ್ನು ಅವರ ಮಾಲಿಕರಿಗೆ ಹಿಂತಿರುಗಿಸುವಂತೆ ಹೇಳಿದ್ಡಾರೆ. ಆದರೆ ತಮ್ಮ ನಿಯಮದ ಪ್ರಕಾರ ಕ್ರಮಗಳನ್ನು ಕೈಗೊಂಡು ನಂತರ ಸಂಬಂಧಪಟ್ಟವರಿಗೆ ಈ ಶ್ವಾನವನ್ನು ತಲುಪಿಸುವ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ಡಾರೆ ಅಧಿಕಾರಿಗಳು!

Leave a Comment

error: Content is protected !!