ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಕೇವಲ ಸೌತೆಕಾಯಿ ಬೆಳೆಯಲ್ಲಿಯೇ 15 ಲಕ್ಷ ಆದಾಯ!
ಕೃಷಿಯಲ್ಲಿ ಲಾಭ ಗಳಿಸುವುದು ಅದೃಷ್ಟವೇ ಸರಿ. ವಾತಾವರಣದ ಏರುಪೇರು ರೈತನನ್ನು ಕಂಗಾಲು ಮಾಡಿದೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಸಿಲುಕದೆ ಯಾವಾಗ ಬೆಳೆ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಸಿಗದೇ ಸೋತು ಬೇಸರ ಪಡುತ್ತಾನೆ. ಇನ್ನು ಕೆಲವೊಮ್ಮೆ ಪ್ರಾಣಿಗಳ ತುಳಿತಕ್ಕೋ, ಆಹಾರಕ್ಕೋ ಹೋಗುತ್ತೆ.

ದೊಡ್ಡಬಳ್ಳಾಪುರದ ಯುವಕನೊಬ್ಬ ಇವೆಲ್ಲ ಸಂಕಷ್ಟಗಳ ಮಧ್ಯೆ ಗಾರ್ಮೆಂಟ್ಸ್ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆಯೇ ಗಾರ್ಮೆಂಟ್ ಕೆಲಸವನ್ನು ತ್ಯಜಿಸಿ ಸೌತೆಕಾಯಿ ಕೃಷಿಯನ್ನು ಮಾಡಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೆ ಅದರಲ್ಲಿ ಯಶಸ್ಸನ್ನು ಕೂಡ ಕಂಡಿದ್ದಾರೆ.

ನವೀನ್ ಕುಮಾರ್, ಇವರಿಗೆ ವೇತನದಲ್ಲಿನ ತಾರತಮ್ಯವನ್ನು ತಾಳಲಾರದೆ ಕೃಷಿ ಮಾಡಬೇಕೆಂಬ ಛಲ ಮೂಡಿತಂತೆ. ಅದೇ ಕಾರಣಕ್ಕೆ ತನ್ನ ಕೆಲಸವನ್ನು ಬಿಟ್ಟು ಅಪ್ಪ ನಡೆಸಿಕೊಂಡು ಬಂದಂತ ಬೇಸಾಯವನ್ನು ಪ್ರಾರಂಭಿಸಿದರು.ಅವರ ಭೂಮಿಯಲ್ಲಿ ಬೆಳೆಯಬಹುದಾದ ತರಕಾರಿಗಳ ಬಗ್ಗೆ, ಅವುಗಳ ವ್ಯವಸಾಯದ ಬಗ್ಗೆ ತಿಳಿದುಕೊಂಡು ಟೊಮೆಟೊ, ಎಲೆಕೋಸು, ಬದನೆಕಾಯಿ, ಸೌತೆಕಾಯಿಗಳನ್ನು ಬೆಳೆಯಲಾರಂಭಿಸಿದರು. ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಗ್ರಾಮದಲ್ಲಿ ಯಶಸ್ವಿ ರೈತನಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಸೌತೆಕಾಯಿ ಬೆಳೆಯೊಂದರಲ್ಲಿ 15 ಲಕ್ಷ ಆದಾಯದ ಕನಸು ಕಂಡಿರುವ ಇವರು, ಎಕರೆಗಟ್ಟಲೆ ಜಾಗದಲ್ಲಿ ಸ್ನೇಹಿತರು ಮತ್ತು ಅನುಭವಸ್ಥರ ಸಲಹೆ ಮೇರೆಗೆ ತರಕಾರಿಗಳನ್ನು ಹಾಕಿದರು. ಟಾಟಾ ಕಂಪನಿಯ 007 ತಳಿಯ ಸೌತೆಕಾಯಿಯನ್ನು ಬೇಸಾಯದ ಭೂಮಿಯಲ್ಲಿ ಹಾಕಿದ್ದಾರೆ. ಈ ತಳಿಯ ವಿಶೇಷತೆ ಏನು ಅಂದ್ರೆ, ಬಿತ್ತನೆ ಮಾಡಿದ 45 ದಿನಗಳಿಗೆ ಕೊಯ್ಲು ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿ ಎಲೆಯ ಬುಡಕ್ಕೊಂದು ಕಾಯಿರುತ್ತದೆ; ಒಂದು ಕೊಯ್ಲಿಗೆ ಸುಮಾರು ಎರಡು ಟನ್ಗಳಷ್ಟು ಇಳುವರಿ ನೀಡುವ ಈ ತಳಿ ಸುಮಾರು 20ಕ್ಕೂ ಹೆಚ್ಚು ಕೊಯ್ಲು ಮಾಡುವಂತ ತರಕಾರಿಯಾಗಿದೆ.ಇಂಥ ಮಳೆಗಾಲದ ಸಂದರ್ಭದಲ್ಲಿ ಒಳ್ಳೆ ಇಳುವರಿ ನೀಡುವ ಈ ತಳಿಯಿಂದ 15 ಲಕ್ಷ ಲಾಭಗಳಿಸುವ ನಿರೀಕ್ಷೆ ಇದೆಯಂತೆ.ಮಾರುಕಟ್ಟೆಯಲ್ಲಿ ಸದ್ಯ ಸೌತೆಕಾಯಿ ಕೆಜಿಗೆ 28 ರೂಪಾಯಿದ್ದು ಇವರ ನಿರೀಕ್ಷೆ ತಲುಪಲು ಕೆಜಿಗೆ 10 ರೂ.ದೊರಕಿದರು ಸಾಕಂತೆ.

ಈಗಾಗಲೇ ತರಕಾರಿ ವ್ಯವಸಾಯದಿಂದ ಯಶಸ್ಸು ಕಂಡಿರುವ ದೊಡ್ಡಬಳ್ಳಾಪುರದ ರೈತ ನವೀನ್ ಕುಮಾರ್ ‘ಕೃಷಿಯಿಂದ ತನ್ನ ಜೀವನವೇ ಬದಲಾಗಿದೆ’ ಎಂದಿದ್ದಾರೆ. ಯಾವಾಗ ಹೇಗಿರುತ್ತೆ ಎಂದು ನಂಬಲಾರದ ವಾತಾವರಣದ ಮಧ್ಯೆಯೂ, ಕೃಷಿಯಿಂದಲೇ ಲಾಭಗಳಿಸಿ ಹೊಸ ಮನೆ ಒಂದನ್ನು ಕಟ್ಟಿಕೊಂಡಿದ್ದಾರೆ. ಕಾರು ಮತ್ತು ತರಕಾರಿಯ ಸಾಗಾಟಕ್ಕಾಗಿ ವಾಹನವನ್ನು ಕೂಡ ಖರೀದಿಸಿದ್ದಾರೆ. ಒಟ್ಟಿನಲ್ಲಿ ರೈತ ನವೀನ್ ಕುಮಾರ್ ಕೃಷಿಯಿಂದಲೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

By admin

Leave a Reply

Your email address will not be published.