70 ತಿರುವುಗಳಿಂದ ಕೂಡಿರೋ ಈ ಅಪಾಯಕಾರಿ ರಸ್ತೆಯ ಬಗ್ಗೆ ನಿಮಗೆ ಗೊತ್ತಾ
ಅಂಕುಡೊಂಕಾದ ಹಾದಿಯಲ್ಲಿ ಪ್ರಯಾಣ ಮಾಡೋದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ ಹಚ್ಚ ಹಸುರಿನ ವನಸಿರಿಯನ್ನು ನೋಡುತ್ತಾ ಪ್ರಯಾಣ ಮಾಡೋದೇ ದೊಡ್ಡ ಸಾಧನೆ ಅದೇ ರೀತಿ ಅನೇಕ ತಿರುವುಗಳನ್ನ ಕೂಡಿರುವ ರಸ್ತೆಯಲ್ಲಿ ನಾವು ಪ್ರಯಾಣ ಮಾಡಿದರೆ ಸುಸ್ತು ಗೊತ್ತಾಗೋದೇ ಇಲ್ಲ
ಹೇಗೆ ಚಾರ್ಮುಡಿ ಘಾಟ್ ದೇವಿಮನೆ ಘಾಟ್ ಶಿರಡಿ ಘಾಟ್ ಆಗುಂಬೆ ಘಾಟ್ ಬಿಸಿಲೆ ಘಾಟ್ ಗಳಿಗೆ ಪ್ರಯಾಣ ಮಾಡೋದೇ ದೊಡ್ಡ ಸಾಧನೆ ಅದೇ ರೀತಿ ಅನೇಕ ತಿರುವುಗಳನ್ನ ಕೂಡಿರುವ ಈ ರಸ್ತೆ ದಕ್ಷಿಣ ಭಾರತದ ಅತ್ಯಂತ ಅಪಾಯಕಾರಿ ರಸ್ತೆಗಳ ಪೈಕಿ ಕೊಲ್ಲಿ ಹಿಲ್ಸ್ ಅಲ್ಲಿ ನಿರ್ಮಿಸಿರುವ ರಸ್ತೆ ಅತಿ ಹೆಚ್ಚು ತಿರಿವುಗಳನ್ನ ಕೂಡಿರುವ ರಸ್ತೆ ಸರಿಸುಮಾರು 70 ಹೈರ್ಪಿನ್ ತಿರುವುಗಳಿಂದ ಕೂಡಿದೆ
ತಮಿಳುನಾಡಿನ ಪೂರ್ವ ಕರಾವಳಿಯ ನಾಮಕ್ಕಲ್ ಜಿಲ್ಲೆಯಲ್ಲಿ ಕೊಲ್ಲಿ ಮಲೈ ಎಂಬ ಪರ್ವತವಿದೆ ಈ ಪರ್ವತವನ್ನು ತಲುಪಲು ಅಂತ ನಿರ್ಮಿಸಿರುವ ರಸ್ತೆಯನ್ನ ದಕ್ಷಿಣ ಭಾರತದ ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ ಒಂದೆಂದು ಗುರುತಿಸಲಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 70 ಹೈರ್ಪಿನ್ ತಿರುವುಗಳಿಂದ ಕೂಡಿದೆ ಕಾಳಪ್ಪನ ನಾಯಕನಹಟ್ಟಿ ಇಂದ ಪ್ರಾರಂಭವಾಗುವ ಈ ರಸ್ತೆ ಕೊಲ್ಲಿ ಮಲೈ ತುದಿಯಲ್ಲಿ ಕೊನೆಗೊಳ್ಳುತ್ತೆ
ಸುಮಾರು 280 ಚದರ ಕಿಮಿ ವಿಸ್ತಾರವಾಗಿರುವ ಕೊಲ್ಲಿ ಮಲೈ ಪರ್ವತವು ಸುಮಾರು 1300 ಮೀ ಎತ್ತರವಾಗಿದ್ದು ಅಭಯಾಗಂಗೈ ಜಲಪಾತವು ಈ ಪರ್ವತದಲ್ಲಿ ಕಾಣುವ ಸುಂದರವಾದ ಜಲಪಾತವಾಗಿದೆ ಸುಮಾರು 300 ಅಡಿ ಎತ್ತರದಿಂದ ಧುಮುಕುವ ಅಭಯಾಗಂಗೈ ಜಲಪಾತ ಮನಮೋಹಕ
ಈ ಕೊಲ್ಲಿ ಹಿಲ್ಸ್ ನ ದಾರಿಯುದ್ದಕ್ಕೂ ಹಸಿರಾಗಿದ್ದು ಮೋಡಗಳನ್ನೇ ತಬ್ಬಿ ನಿಂತಿರುವಹಾಗೆ ಕಾಣಿಸೋ ಕೊಲ್ಲಿ ಮಲೈ ಅಪರೂಪದ ಪ್ರಾಣಿ ಸಂಕುಲಕ್ಕೂ ಆಶ್ರಯತಾಣವಾಗಿದೆ ಈ ಪರ್ವತವನ್ನು ಮೇಲಕ್ಕೆ ತಲಪುತಿದ್ದಂತೆ ಕೆಳಗೆ ಅದ್ಭುತವಾದ ದೃಶ್ಯಗಳು ಗೋಚರಿಸುವಂತೆ ಕಾಣುತ್ತದೆ ರಸ್ತೆಯುದ್ದಕ್ಕೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕಲ್ಲಿನಮೇಲೆ ತಿರುವು ಸಂಖ್ಯೆಗಳನ್ನ ನಮೂದಿಸಲಾಗಿದೆ
ಮಳೆಗಾಲ ಹಾಗು ಚಳಿಗಾಲದಲ್ಲಿ ಈ ಕೊಲ್ಲಿ ಮಲೈ ಪರ್ವತ ಪ್ರಯಾಣ ಮಾಡೋದು ಅದ್ಬುತ ಹಿಮದಲ್ಲಿ ಕೂಡಿರುವ ರಸ್ತೆ ಕ್ರಮಿಸಿವುದೇ ರೋಚಕವಾಗಿರುತ್ತದೆ ಬೈಕ್ ಸವಾರರಿಗಂತೂ ಈ ಅಂಕುಡೊಂಕಾದ ಹಾದಿಯಲ್ಲಿ ಪ್ರಯಾಣ ಮಾಡೋದು ಎಂದರೆ ಅತ್ಯಂತ ಪ್ರಿಯವಾಗಿದ್ದು ಪ್ರತಿ ವರ್ಷವೂ ಹಲವು ಮಂದಿ ಬೈಕ್ ಸವಾರರು ಇಲ್ಲಿ ಭೇಟಿನೀಡಿ ಖುಷಿಪಡುತ್ತಾರೆ