Deepak Gowda: ಹಂಪಿ ದೇವಸ್ಥಾನದ ಮೇಲೆ ಕುಣಿದಿದ್ದ ರೀಲ್ಸ್ ಸ್ಟಾರ್ ದೀಪಕ್ ಗೌಡ ಅವರಿಗೆ ಸಿಕ್ಕಿರುವ ಶಿಕ್ಷೆ ಎಂತದ್ದು ಗೊತ್ತಾ?

Hampi Viral Video ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಲೈಕ್ಸ್ ಹಾಗೂ ಜನಪ್ರಿಯತೆಗಾಗಿ ಹುಚ್ಚು ಸಾಹಸಕ್ಕೆ ಕೈಹಾಕಿ ವಿಡಿಯೋ ಪೋಸ್ಟ್ ಮಾಡುವಂತಹ ಹಲವಾರು ಯುವಕರಲ್ಲಿ ಮಂಡ್ಯ ಮೂಲದ ದೀಪಕ್ ಗೌಡ(Deepak Gowda Hampi) ಕೂಡ ಒಬ್ಬರಾಗಿದ್ದು ಇತ್ತೀಚಿಗಷ್ಟೇ ಹಂಪಿಯ ಪ್ರವಾಸಿ ಸ್ಥಾನದಲ್ಲಿರುವ ಮಂಟಪ ಒಂದರ ಮೇಲೆ ಹತ್ತಿ ವಿಡಿಯೋ ಮಾಡಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದರು. ಇದು ಹಂಪಿಯ ಜನರ ಕೋಪಕ್ಕೆ ಕಾರಣವಾಗಿದ್ದು ಆತನ ಬಂಧನಕ್ಕೆ ಆಗ್ರಹಿಸಿದ್ದರು. ಅದಾಗಲೇ ವೈರಲ್ ಆಗಿದ್ದ ಆತನನ್ನು ಪೊಲೀಸರಿಗೆ ಹಿಡಿಯಲು ಕಷ್ಟವೇನು ಆಗಲಿಲ್ಲ.

ದೀಪಕ್ ಗೌಡ ಇದರ ಕುರಿತಂತೆ ಕ್ಷಮೆ ಕೋರಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು ಕೂಡ ಆತನನ್ನು ಬಂಧಿಸಿರುವ ಹಂಪಿಯ ಪ್ರವಾಸಿ ತಾಣದ(Hampi Tourism) ಪೊಲೀಸರು ಆತನಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ. ಅಷ್ಟಕ್ಕೂ ಆತನಿಗೆ ಸಿಕ್ಕಿರುವ ಶಿಕ್ಷೆ ಆದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ವಿಶ್ವ ಪಾರಂಪರಿಕ ತಾಣಗಳ(World Heritage Places) ಪಟ್ಟಿಯಲ್ಲಿರುವ ಹಂಪಿಯ ಹೇಮಕುಟ ಪರ್ವತದಲ್ಲಿರುವ ಜೈನ ಮಂಟಪದ ಮೇಲೆ ದೀಪಕ್ ಗೌಡ ಮಾಡಿರುವ ರೀಲ್ಸ್ ನೋಡಿ ವಿಜಯನಗರ ಜಿಲ್ಲೆಯ ಜಿಲ್ಲಾಡಳಿತ ಎಚ್ಚರಗೊಂಡಿದ್ದು ಕೂಡಲೇ ಆತನನ್ನು ಬಂಧಿಸಿದ್ದಾರೆ. ಇದಕ್ಕೂ ಮೂಲ ದೀಪಕ್ ಗೌಡ ತನ್ನ ತಪ್ಪಿನ ಅರಿವಾಗುತ್ತಿದ್ದಂತೆ ವಿಡಿಯೋ ಮಾಡಿ ಕ್ಷಮೆ ಕೂಡ ಯಾಚಿಸಿದ್ದಾನೆ.

ಆದರೆ ಈಗ ಆತನ ಮೇಲೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎನ್ನುವ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಾಗುತ್ತಿವೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಶಾಮನಗೊಳ್ಳುತ್ತದೆ ಹಾಗೂ ಈ ರೀತಿಯ ಕವಿತೆಯನ್ನು ಮಾಡುವವರಿಗೆ ಇದೊಂದು ಪಾಠವಾಗಿರಲಿದೆ ಎನ್ನುವ ಮಾತುಗಳು ಕೂಡ ಪರ ವಿರೋಧಗಳ ಚರ್ಚೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ(Social Media) ಕೇಳಿ ಬರುತ್ತಿದೆ.

Leave a Comment

error: Content is protected !!