ದೇವಮೂರ್ತಿಯ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ. ನಂತರ ನಡೆದ ಪವಾಡ ಏನು ಗೊತ್ತಾ

ಪ್ರತಿಯೊಂದು ದೇವಸ್ಥಾನಗಳು ವಿಭಿನ್ನ ರೀತಿಯ ಪೂಜಾ ವಿಧಾನವನ್ನು ಹೊಂದಿರುತ್ತವೆ. ಕೆಲವು ದೇವರ ಮೂರ್ತಿಗಳಿಗೆ ಕುಂಕುಮವನ್ನು ಲೇಪಿಸುವುದಿಲ್ಲ. ಕೆಲವು ಕಡೆ ಬಿಳಿ ಹೂಗಳಿಂದ ಮಾತ್ರವೇ ದೇವರಿಗೆ ಅಲಂಕಾರ. ಜಲ, ಕ್ಷೀರ, ಎಣ್ಣೆಗಳ ಅಭಿಷೇಕ. ಕೆಲವೆಡೆ ದೇವರಿಗೆ ರಾತ್ರಿ ಪೂಜೆ, ಪೂಜೆಯ ನಂತರ ತೊಟ್ಟಿಲಲ್ಲಿ ನಿದ್ದೆ. ಕೆಲವು ದೇವಸ್ಥಾನಗಳಲ್ಲಿ ಪ್ರತಿದಿನ ಪೂಜೆ ನಡೆದರೆ, ವಾರಕ್ಕೊಮ್ಮೆ, ವರ್ಷಕೊಮ್ಮೆ ಪೂಜಿಸುವ ದೇವಾಲಯಗಳು ಇವೆ.

ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವವರು ಸ್ವಚ್ಛವಾಗಿ ಮಿಂದೆದ್ದು ಬಂದವರಾಗಿ, ದೇವರಲ್ಲಿ ಭಕ್ತಿಯನ್ನು ಹೊಂದಿರಬೇಕು. ನೇಮ, ನಿಷ್ಠೆ, ಅನುಷ್ಠಾನ ಗಳನ್ನು ಎಷ್ಟು ಮಾಡಿದರೂ ಕಡಿಮೆಯೇ. ಅರ್ಚಕರಿಗೆ ದಿನದ ಪೂಜೆಯೊಂದಿಗೆ ಭಕ್ತಾದಿಗಳು ಅರ್ಪಿಸುವ ವಿಶೇಷ ಪೂಜೆಗಳನ್ನು ಸಲ್ಲಿಸುವ ಸೌಜನ್ಯವಿರಬೇಕು. ಭಕ್ತಾದಿಗಳ ಭಕ್ತಿ, ಸೇವೆಗೆ ಮೆಚ್ಚಿದ ಭಗವಂತನು ಇಷ್ಟಾರ್ಥಗಳನ್ನು ಈಡೇರಿಸಿಕೊಡುತ್ತಾನೆಂಬ ನಂಬಿಕೆ.

ನಾನಾ ಬಗೆಯ ಪೂಜಾ ನಿಯಮಗಳನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಂದಿನವರೆಗೂ ಮೂರ್ತಿಯನ್ನು ಕಾಲಿನಿಂದ ಸ್ಪರ್ಶಿಸುವ ಪೂಜಾ ವಿಧಾನವನ್ನು ಎಂದಿಗೂ ಕಂಡಿಲ್ಲ. ದಾವಣಗೆರೆಯಲ್ಲಿ ಅರ್ಚಕನೊಬ್ಬ ವಿಚಿತ್ರವಾಗಿ ಪೂಜೆ ಸಲ್ಲಿಸಿದ್ದು ಅದನ್ನು ಸೆರೆಹಿಡಿದ ಚಿತ್ರವು ಎಲ್ಲೆಡೆ ಅಸಮಾಧಾನ ಮೂಡಿಸಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬುವರು ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು. ಇವರು ಆಂಜನೇಯ ಸ್ವಾಮಿ ವಿಗ್ರಹದ ಶಿರ ಭಾಗದಲ್ಲಿ ತನ್ನ ಕಾಲನಿಟ್ಟು ಪೂಜೆ ಮಾಡುತ್ತಿರುವ ಫೋಟೋ ವೈರಲ್ ಆಗಿದೆ ಭಕ್ತಾದಿಗಳ ನಂಬಿಕೆಗೆ ಪೆಟ್ಟು ತಗುಲಿದಂತಾಗಿದೆ. ‘ಶಿಸ್ತು ಶ್ರದ್ಧೆ ಇಲ್ಲದ ಪೂಜೆಯಿಂದ ದೇವರನ್ನು ಮೆಚ್ಚಿಸಲು ಸಾಧ್ಯವೇ..?ಕಾಲಿನಿಂದ ವಿಗ್ರಹವನ್ನು ಸ್ಪರ್ಶಿಸಿ, ಕೈಯಿಂದ ಅಭಿಷೇಕ ಮಾಡಿದರೆ ಪೂಜಾ ಫಲ ದೊರಕುವುದುಂಟೆ?’ ಎಂದು ಜನ ಆಕ್ರೋಶ ಹೊರ ಹಾಕಿದ್ದಾರೆ. ಹಲವರು ಕೋಪವನ್ನು ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಅರ್ಚಕರನ್ನು ದೇವಸ್ಥಾನದಿಂದ ಹೊರಗಿರಿಸಿ ಬದಲಿ ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.

Leave a Comment

error: Content is protected !!