ಪಲ್ಲವಿ ಅವರನ್ನು ಮದುವೆಯಾಗುತ್ತೆನೆ ಎಂದು ಹೇಳಿಕೊಂಡಿದ್ದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಲೈಫ್ ನಲ್ಲಿ ಟ್ವಿಸ್ಟ್ ಕೊಟ್ಟ ಪಲ್ಲವಿ. ಈಗ ಆಗಿದ್ದೇ ಬೇರೆ

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸೇರಿದಂತೆ ಕಿರುತೆರೆಯ ಪ್ರೇಕ್ಷಕರಿಗೆ ಹಲವಾರು ಹಾಸ್ಯ ಕಲಾವಿದರು ಎಂದು ಹೇಳಬಹುದಾಗಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಹಲವಾರು ಪ್ರತಿಭಾನ್ವಿತ ಹಾಸ್ಯ ಕಲಾವಿದರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕುಬ್ಜದೇಹಿ ಆಗಿರುವ ಸಂಜು ಬಸಯ್ಯ ಅವರ ಕುರಿತಂತೆ. ತಮ್ಮ ಚಿಕ್ಕ ದೇಹವನ್ನೇ ಉಪಯೋಗಿಸಿಕೊಂಡು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುವಂತೆ ಮಾಡುವ ಪ್ರತಿಭೆಯನ್ನು ಹೊಂದಿರುವ ಸಂಜುಬಸಯ್ಯ ಅವರ ಕುರಿತಂತೆ ಇಂದು ನಾವು ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಹೌದು ಮಿತ್ರರೇ ಸಂಜು ಬಸಯ್ಯ ಅವರು ರಂಗಭೂಮಿ ಹಾಗೂ ಆರ್ಕೆಸ್ಟ್ರಾ ಹಿನ್ನೆಲೆಯಿಂದ ಬಂದಂತಹ ಪ್ರತಿಭೆಯಾಗಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಅವರಿಗೆ ಒಂದು ಸುವರ್ಣ ಅವಕಾಶವನ್ನು ನೀಡಿತ್ತು ಸಂಜುಬಸಯ್ಯ ಕೂಡ ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಾರೆ.

ಇನ್ನು ಈ ವೇದಿಕೆಯ ಮೂಲಕವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾ ಆಗಿರುವ ಯಜಮಾನ ಸಿನಿಮಾದಲ್ಲಿ ಕೂಡ ಪ್ರಮುಖ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹಲವಾರು ಕನ್ನಡ ಸಿನಿಮಾಗಳಲ್ಲಿ ಕೂಡ ಅವರು ಕಾಣಿಸಿಕೊಂಡಿರುವುದು ಈ ವೇದಿಕೆ ಮೂಲಕ ಅವರಿಗೆ ದೊರೆತಿರುವ ಅವಕಾಶದ ಒಂದು ನಿಜ ದರ್ಶನವಾಗಿದೆ ಎಂದರು ತಪ್ಪಾಗಲಾರದು. ಇದೇ ಸಂದರ್ಭದಲ್ಲಿ ಸಂಜು ಬಸಯ್ಯ ಅವರು ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಪಲ್ಲವಿ ಎನ್ನುವವರನ್ನು ಪ್ರೀತಿಸುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಂತಹ ವಿಡಿಯೋಗಳು ಕೂಡ ಓಡಾಡುತ್ತಿದ್ದವು.

ಇಬ್ಬರು ಮದುವೆ ಯಾಗುತ್ತಾರೆ ಎಂಬುದಾಗಿ ಕೂಡ ಎಲ್ಲರೂ ಭಾವಿಸಿದ್ದರು ಆದರೆ ನಿಜಾಂಶ ಬೇರೇನೇ ಇದೆ. ಅದೇನೆಂದರೆ ಸಂಜು ಬಸಾಯ ಅವರು ಸ್ವತಹ ಅವರೇ ಲೈವಿಗೆ ಬಂದು ನಾವಿಬ್ಬರು ಅಕ್ಕ ತಮ್ಮನ ಹಾಗೆ ಇದ್ದೇವೆ ವೇದಿಕೆಯಲ್ಲಿ ಕೇವಲ ಸ್ಕ್ರಿಪ್ಟಿಗಾಗಿ ಹಾಗೆ ಹೇಳಿದ್ದೇನೆ ಅದನ್ನು ನೀವು ನಿಜವಾಗಿ ಭಾವಿಸುವ ಅಗತ್ಯವಿಲ್ಲ ದಯವಿಟ್ಟು ಇಂತಹ ಕಲ್ಪನೆಗಳನ್ನು ಹಾಗೂ ತಪ್ಪು ತಿಳುವಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿ ನಮಗೆ ಬೇಸರ ತರಿಸಬೇಡಿ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಪಲ್ಲವಿ ಅವರನ್ನು ಸಂಜು ಬಸಯ್ಯ ಮದುವೆ ಆಗುತ್ತಿರುವುದು ಅಥವಾ ಪ್ರೀತಿಸುತ್ತಿರುವುದು ಸುಳ್ಳು ಎಂಬುದು ಸಾಬೀತಾಗಿದೆ.

Leave a Comment

error: Content is protected !!