CM Salary: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿಗುವ ಸಂಬಳ ಎಷ್ಟು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

CM Salary ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ನಡೆದಿದ್ದು ಫಲಿತಾಂಶ ಕೂಡ ಈಗಾಗಲೇ ಹೊರಬಂದು ಕೆಲವು ದಿನಗಳು ಕಳೆದಿದ್ದು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿ(Karnataka CM) ಆಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುರಿತಂತೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಡೆಯುತ್ತಿವೆ.

ಅದರಲ್ಲೂ ವಿಶೇಷವಾಗಿ ಈ ಬಾರಿ ಕಾಂಗ್ರೆಸ್ 135 ಸೀಟುಗಳನ್ನು ಗೆಲ್ಲುವ ಮೂಲಕ ಬಹುಮತವನ್ನು ಪಡೆದುಕೊಂಡಿದ್ದು ಈ ಬಾರಿ ಬಹುಮತವನ್ನು ಪಡೆದುಕೊಂಡಿರುವಂತಹ ಏಕೈಕ ಶಕ್ತಿಶಾಲಿ ಪಕ್ಷವಾಗಿ ಕಾಂಗ್ರೆಸ್(Congress) ಹೊರಹೊಮ್ಮಿದ್ದು ಯಾವುದೇ ಜಂಟಿ ಸರ್ಕಾರ ರಚನೆ ಮಾಡಬೇಕಾಗಿರುವಂತಹ ಅಗತ್ಯ ಈ ಬಾರಿ ಎದುರಾಗಿಲ್ಲ.

ಈ ಬಾರಿ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್(DK Shivakumar) ಅಥವಾ ಸಿದ್ದರಾಮಯ್ಯ(Siddharamaiah) ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಕಾಣಿಸಿಕೊಳ್ಳಬಹುದು ಎಂಬುದಾಗಿ ರಾಜಕೀಯ ಮೂಲಗಳು ಅತ್ಯಂತ ಬಲವಾಗಿ ಪ್ರತಿಪಾದಿಸುತ್ತಿವೆ. ಇನ್ನು ಮುಖ್ಯಮಂತ್ರಿ ಆದವರಿಗೆ ಎಷ್ಟು ಸಂಬಳ ಸಿಗುತ್ತದೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಬೇರೆ ಬೇರೆ ರಾಜ್ಯಗಳ ಆದಾಯದ ಮೇರೆಗೆ ಮುಖ್ಯಮಂತ್ರಿಗಳ ಸಂಬಳವನ್ನು ನಿರ್ಧರಿಸಲಾಗುತ್ತದೆ ಎಂಬುದಾಗಿ ನಂಬಲಾಗುತ್ತಿದ್ದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ(Karnataka CM Salary) ಪ್ರತಿ ತಿಂಗಳಿಗೆ ಎರಡು ಲಕ್ಷದ ಆಸುಪಾಸಿನಲ್ಲಿ ಸಂಬಳ ಸಿಗುತ್ತದೆ ಎಂಬುದಾಗಿ ಅಧಿಕೃತವಾಗಿ ತಿಳಿದುಬಂದಿದೆ. ಈ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಯಾರು ಆಯ್ಕೆ ಆಗಬಹುದು ಎನ್ನುವ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!