ಈ ಹಳ್ಳಿಯಲ್ಲಿನ ಮಹಿಳೆಯರ ಕೂದಲು ಅವರಿಗಿಂತಲೂ ಉದ್ದವಿರುತ್ತೆ ಯಾಕೆ ಗೊತ್ತೇ?

ಈ ದಪ್ಪವಾದ, ಶೈನ ಆದ ನುಣುಪಾದ ಕೂದಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇಂತಹ ಕೂದಲು ಬೇಕು ಅಂತಾ ತುಂಬಾನೆ ಕಷ್ಟಪಡುತ್ತೆವೆ. ಆದರೆ ಈ ಹಳ್ಳಿಯಲ್ಲಿ ಮಾತ್ರ ಕೂದಲನ್ನು ಉದ್ದವಾಗಿ ಬೆಳೆಸಿರುತ್ತಾರೆ ಯಾಕೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೊಣ.

ಚೀನಾ ದೇಶದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯಲ್ಲಿರುವ ಮಹಿಳೆಯರ ಕೂದಲ ಅತ್ಯಂತ ಉದ್ದವಾಗಿದೆ. ಈ ಹಳ್ಳಿಯ ಹೇಸರು ಹೂಹೇಂಗ್ಲೊ ಎನ್ನುವುದಾಗಿದ್ದು.ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಅಲ್ಲಿ ತನ್ನ ಸ್ಥಾನವನ್ನ ಪಡೆದುಕೊಂಡಿದೆ.ಇನ್ನು ವಿಶೇಷ ಅಂದ್ರೆ ಇಲ್ಲಿ 60 ವರ್ಷ ಮೇಲ್ಪಟ್ಟ ಮಹಿಳೆಯರ ಕೂದಲು ಸಹ ದಷ್ಟು ಪುಷ್ಟವಾಗಿ , ಆರೋಗ್ಯಯುತವಾಗಿ ಬೆಳೆಯುತ್ತಿವೆ.

ಈ ಹಳ್ಳಿಯಲ್ಲಿನ ಮಹಿಳೆಯರ ಕೂದಲು ಉದ್ದ ಬರೋಬ್ಬರಿ ಆರು ಅಡಿ ಉದ್ದವಿರುತ್ತದೆ. ಇದನ್ನು ಗಮನಿಸಿದರೆ ಎಷ್ಟು ಅಶ್ಚರ್ಯಕಾರಿ ಅನ್ನಿಸುತ್ತೆ. ಇವರ ಈ ಕೂದಲಿನ ಪೋಷಣೆಯ ಲಹಸ್ಯವೇನು, ಯಾವ ಆಹಾರ ಪದ್ಧತಿ ಅನುಸರಿಸುತ್ತಾರೆ ಎಂಬುದನ್ನು ನೋಡೋಣ.

ನಾವು ಅನ್ನ ಮಾಡುವಾಗ ಅಕ್ಕಿಯನ್ನು ಚೆನ್ನಾಗಿ ತೊಳಿಯುತ್ತೇವೆ ನಂತರ ಆ ನೀರನ್ನು ಚೆಲ್ಲುತ್ತೇವೆ . ಆದರೆ ಈ ಮಹಿಳೆಯರು ಅಕ್ಕಿಯನ್ನು ತೊಳೆದ ನೀರನ್ನು ಹಾಗೆ ಇಟ್ಟುಕೊಂಡು ಅದರಿಂದ ತಮ್ಮ ಕೂದಲನ್ನು ತೊಳೆದು ಕೊಳ್ಳುತ್ತಾರೆ. ಎರಡು ಮೂರು ಅಕ್ಕಿ ತೊಳೆದ ನೀರನ್ನು ಹಾಗೆ ಇಟ್ಟು ಅದು ಹುಳಿಯಾಗಿ ಫರ್ ಮಿಟೇಷನ್ ಆದಮೇಲೆ ಅದನ್ನು ಬಳಸ್ತಾರೆ. ಈ ನೀರಿನಿಂದಲೇ ಅವರು ತಮ್ಮ ಕೂದಲನ್ನು ತೊಳಿತಾರೆ.

ವೈಜ್ಞಾನಿಕ ವಾಗಿ ರೈಸ್ ವಾಟರ್ ಕೂದಲಿಗೆ ತುಂಬಾ ಒಳ್ಳೆಯದು.ಇದರಲ್ಲಿ ಆಂಟಿ ಆಕ್ಸಿಡೆಂಟ್ , ಮಿನರಲ್ಸ್ ಇದೆ.ಇದರಿಂದ ಕೂದಲಿಗೆ ತುಂಬಾ ಒಳ್ಳೆಯದಾಗುತ್ತದೆ. ಅಲ್ಲದೆ ಕೂದಲು ಬಿಳಿಯಾಗುವುದನ್ನು ತಡೆಗಟ್ಟುತ್ತದೆ. ಇದನ್ನು ನಾವು ಕೂಡ ಬಳಸೊದರಿಂದ ಹೇರಳವಾದ ಕೂದಲನ್ನು ಪಡೆಯಬಹುದಾಗಿದೆ.

Leave a Comment

error: Content is protected !!