ಬಡತನವನ್ನು ಮೆಟ್ಟಿ ನಿಲ್ಲಬೇಕು ಎನ್ನುವಷ್ಟರಲ್ಲಿ ವಿಧಿ ಆಟ. ಸ ತ್ತ ಮೇಲು ಜೀವಂತ ಈ ಪುಟ್ಟ ಬಾಲಕಿ !!

ಪಾಲಕರು ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಕಾಲ ಮೇಲೆ ತಾವು ನಿಂತು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಆಶಿಸುತ್ತಿರುತ್ತಾರೆ ಅಂತಯೇ ಮಕ್ಕಳು ಕೂಡ ಉಜ್ವಲ ಭವಿಷ್ಯದ ಕನಸು ಕಂಡು ಸಾಗುತ್ತಿರುತ್ತಾರೆ. ಚಿಕ್ಕ- ಪುಟ್ಟ ವಯಸ್ಸಿನಲ್ಲಿ ಸಾ-ವು ಬಂದರೆ ಬಹಳವೇ ನೋವು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿಯಲ್ಲಿ ಪಿಯು ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆಕೆಯ ಹೆಸರು ಎಸ್. ಹೆಚ್. ರಕ್ಷಿತಾ ಬಾಯಿ. ತಂದೆ ಶೇಖರ್ ನಾಯ್ಕ; ತಾಯಿ ಲಕ್ಷ್ಮೀ ಬಾಯಿ.

17ರ ವಯಸ್ಸಿನ ರಕ್ಷಿತಾಬಾಯಿ ಚಿಕ್ಕಮಗಳೂರಿನ ಬಸವನಹಳ್ಳಿಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷದ ಪಿಯು ಓದುತ್ತಿದ್ದು, ಹಾಸ್ಟೆಲ್ ನಲ್ಲಿ ಉಳಿದಿದ್ದಳು. ರಜಾ ದಿನಗಳಲ್ಲಿ ತನ್ನ ಪಾಲಕರನ್ನು ನೋಡಲು ಮನೆಗೆ ಹೋಗುತ್ತಿದ್ದಳು. ಸಪ್ಟೆಂಬರ್ 18ರಂದು ಚಿಕ್ಕಮಗಳೂರಿನಲ್ಲಿಯೇ ಇರುವ ತಮ್ಮ ಸಂಬಂಧಿಕರ ಮನೆಗೆ ಹೋಗಬೇಕೆಂದು ನಿರ್ಧರಿಸಿ, ಬಸ್ನಲ್ಲಿ ಪ್ರಯಾಣ ಬೆಳಸಿದ್ದಾಳೆ. ರಸ್ತೆ ಮಧ್ಯದಲ್ಲಿ ಬಸ್ ನಿಂದ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿತ್ತು. ಸ್ಥಳೀಕರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು.

ವಿಷಯ ತಿಳಿದು ಧಾವಿಸಿದ ಪಾಲಕರು, ವೈದ್ಯರಲ್ಲಿ ಮಗಳ ಸಾ-ವು ಬದುಕಿನ ಹೋರಾಟದ ಬಗೆಗೆ ವಿಚಾರಿಸಿದ್ದಾರೆ. ಮಗಳ ಜೀವಂತವಾಗಿ ಉಲಿಯಲಾರಳು ಎಂದು ಮನದಟ್ಟಾದ ಮೇಲೆ, ಅವರು ತೆಗೆದುಕೊಂಡ ನಿರ್ಧಾರ ಇಡೀ ಸಮಾಜವೇ ಅವರತ್ತ ನೋಡುವಂತೆ ಮಾಡಿದೆ.

ಶ್ರೀಮಂತಿಕೆ ಅಳೆಯುವುದು ಹಣದಲ್ಲಲ್ಲಾ ,ಗುಣದಲ್ಲಿ; ಎಂಬುದನ್ನು ಲೋಕಕ್ಕೆ ಸಾರಿದ್ದಾರೆ. ಮಗಳ ಮೆದುಳು ಕೆಲಸ ಮಾಡುತ್ತಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತಲೇ ವೈದ್ಯರಲ್ಲಿ ಉಳಿದ ಅಂಗಾಂಗಗಳ ಚಟುವಟಿಕೆಗಳನ್ನು ವಿಚಾರಿಸಿ, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್, ಕಣ್ಣುಗಳನ್ನು ವೈದ್ಯರ ಸಲಹೆ ಮೇರೆಗೆ ದಾನಮಾಡುವ ಒಳ್ಳೆಯ ಕೆಲಸವನ್ನು ಇವರು ಮಾಡಿದ್ದಾರೆ. ಕೆಲವು ರೋಗಿಗಳಿಗೆ ಸಹಾಯ ಮಾಡಿದ ಈ ಬಡಕುಟುಂಬಕ್ಕೆ ದೇವರು ಮಗಳ ಸಾವ ಭರಿಸುವ ಧೈರ್ಯ ನೀಡಲಿ ಮತ್ತು ಮುಂದೆಂದು ಕಷ್ಟ ಬಾರದಿರಲಿ ಎಂದು ಪ್ರಾರ್ಥಿಸೋಣ. ಬಾಲಕಿ ತೀರಿ ಹೋದರು ಸಹ ಆಕೆಯ ಅಂಗಾಂಗಗಳು ಇನ್ನು ಜೀವಂತವಾಗಿ ಚಟುವಟಿಕೆಯಲ್ಲಿಯೇ ಇದೆ.

Leave a Comment

error: Content is protected !!