ಮದುವೆ ಮನೆಯಲ್ಲಿ ಯಡವಟ್ಟುಗಳು ಆಗುವುದು ಸರ್ವೇಸಾಮಾನ್ಯ. ಇನ್ನೇನು ಮದುವೆಯಾಗಬೇಕು ಅನ್ನುವ ಸಂದರ್ಭದಲ್ಲಿ ಮದುವೆ ಗಂಡು ಓಡಿ ಹೋಗುವುದು ಅಥವಾ ಮದುವೆ ಹೆಣ್ಣು ಬೇರೊಬ್ಬ ಹುಡುಗನ ಜೊತೆ ಓಡಿ ಹೋಗುವುದು ಇಂತಹ ಘಟನೆಗಳು ನಡೆಯುತ್ತವೆ. ಆದರೆ ಮದುವೆ ಮನೆಯಲ್ಲಿ ಕರೆಂಟ್ ಹೋಯ್ತು ಎಂಬ ಕಾರಣಕ್ಕೆ ಎಡವಟ್ಟು ಉಂಟಾದ ಹಾಸ್ಯ ಘಟನೆ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಕೇಳಿ ನಾವೆಲ್ಲ ಅಳಬೇಕೋ ಗೊತ್ತಾಗುತ್ತಿಲ್ಲ.

ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಅಸ್ಲಾನಾ ತಾಲ್ಲೂಕಿನ ರಮೇಶ್‍ಲಾಲ್ ಎಂಬುವವನಿಗೆ ನಿಕಿತಾ ಮತ್ತು ಕರಿಷ್ಮಾ ಎಂಬ ಇಬ್ಬರು ಪುತ್ರಿಯರು. ರಮೇಶ್ ಲಾಲ್ ನ ಪುತ್ರಿಯರಿಗೆ ದ೦ಗವಾಡ ಎಂಬ ಒಂದೇ ಊರಿನ ಇಬ್ಬರು ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಜೊತೆ ಮದುವೆ ನಿಶ್ಚಯವಾಗಿತ್ತು. ನಿಕಿತಾ ಮತ್ತು ಕರಿಷ್ಮಾ ಈ ಇಬ್ಬರು ಪುತ್ರಿಯರ ಮದುವೆ ಒಂದೇ ದಿನಾಂಕಕ್ಕೆ ಫಿಕ್ಸ್ ಆಗಿತ್ತು. ಮೇ 6 ರಂದು ನಾಲ್ಕು ಜನರ ಮದುವೆ ಊರಿನವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.

ರಮೇಶ್ ಲಾಲ್ ನ ಪುತ್ರಿಯರ ಮದುವೆ ದ೦ಗವಾಡ ಊರಿನಲ್ಲಿ ನಡೆದಿದೆ. ನಿಕಿತಾ ಮತ್ತು ಕರಿಷ್ಮಾ ಈ ಇಬ್ಬರು ಪುತ್ರಿಯರು ಮದುವೆಯಾಗುವ ಹುಡುಗರು ಒಂದೇ ಊರಿಗೆ ಸೇರಿದವರಾಗಿದ್ದರಿಂದ ಅವರ ಊರಿನಲ್ಲಿಯೇ ಮದುವೆ ಸಮಾರಂಭಗಳು ನಡೆದಿವೆ. ಮೇ 6 ರಂದು ಈ ಇಬ್ಬರ ಹೆಣ್ಣು ಮಕ್ಕಳ ಮದುವೆಯಲ್ಲಿ ಕರೆಂಟ್ ಹೋಗಿದ್ದ ಕಾರಣ ದೊಡ್ಡ ಎಡವಟ್ಟಾಗಿದೆ. ನಡೆಯಬೇಕಾಗಿದ್ದ ಮದುವೆ ಉಲ್ಟಾಪಲ್ಟಾ ಆಗಿದೆ. ಇದು ತಮಾಷೆಯೆನಿಸಿದರೂ ನೀವೆಲ್ಲಾ ನಂಬಲೇ ಬೇಕು.

ಅಕ್ಕನನ್ನು ಮದುವೆಯಾಗಬೇಕಿದ್ದ ಗಂಡು ತಂಗಿಯನ್ನು ಮತ್ತು ತಂಗಿಯನ್ನು ಮದುವೆಯಾಗಬೇಕಿದ್ದ ಗಂಡನ್ನು ಅಕ್ಕಾ ಮದುವೆಯಾಗಿದ್ದಾರೆ. ಇದಕ್ಕೆ ಕಾರಣ ಪವರ್ ಕಟ್ ಎಂದು ಹೇಳಲಾಗಿದೆ. ಈ ಮದುವೆಯಲ್ಲಿ ಮಾಲೆ ಹಾಕುವ ಸಮಯದಲ್ಲಿ ಕರೆಂಟ್ ಇಲ್ಲದ ಕಾರಣ ದಂಗ್ವಾರಾ ಭೋಲಾ ಮತ್ತು ಗಣೇಶ್ ಗೆ ಗೊಂದಲ ಉಂಟಾಗಿದೆ ಇಬ್ಬರೂ ಮದುವೆಯ ಗಂಡುಗಳು ಗೊಂದಲದಿಂದ ಮದುವೆ ಹೆಣ್ಣನ್ನು ಬದಲಾಯಿಸಿಕೊಂಡಿದ್ದಾರೆ. ಇನ್ನೊಂದು ಆಶ್ಚರ್ಯದ ಸಂಗತಿಯೇನೆಂದರೆ ಕರೆಂಟ್ ಹೋಗಿ ಸುಮಾರು ಒಂದೂವರೆ ಗಂಟೆಯಾಗಿತ್ತು.

ಆದ್ರೂ ಕೂಡ ಇವರಿಗೆ ತಾವು ಮದುವೆಯಾಗಬೇಕಿದ್ದ ಹುಡುಗಿ ಉಲ್ಟಾಪಲ್ಟಾ ಆಗಿದ್ದಾಳೆ ಎನ್ನುವ ವಿಚಾರವೇ ಗೊತ್ತಾಗಲಿಲ್ಲ. ಕೊನೆಗೆ ಇಬ್ಬರೂ ಮದುವೆ ಹೆಣ್ಣನ್ನು ಮನೆ ತುಂಬಿಸಿಕೊಳ್ಳುವ ಸಮಯದಲ್ಲಿ ಇವರಿಗೆ ಈ ವಿಷಯ ಗೊತ್ತಾಗಿದೆ. ವಿಷಯ ತಿಳಿದ ತಕ್ಷಣ ಮತ್ತೆ ಶಾಸ್ತ್ರದ ಪ್ರಕಾರ ಎಲ್ಲಾ ಮದುವೆ ಕಾರ್ಯಗಳನ್ನು ಇನ್ನೊಂದು ಸಲ ಮಾಡಿದ್ದಾರೆ. ಇನ್ನೊಂದು ಸಲ ತಾವು ಮದುವೆಯಾಗಬೇಕಿದ್ದ ಹುಡುಗಿ ಯಾರೆಂದು ಖಾತರಿಪಡಿಸಿಕೊಂಡು ಮಾಲೆ ಹಾಕಿದ್ದಾರಂತೆ. ಈ ಒಂದು ವಿವಾಹದ ಸುದ್ದಿಯನ್ನು ಕೇಳಿ ವೀಕ್ಷಕರಿಗೆ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ..

By admin

Leave a Reply

Your email address will not be published.