16 ವರ್ಷಗಳ ಕಾಲ ಸಂಸಾರ ಮಾಡಿ ಗಂಡನನ್ನು ಮುಗಿಸಿ ಏನೂ ಅರಿಯದವಳಂತೆ ಹೈ ಡ್ರಾಮಾ ಮಾಡಿದ ಕಿಲಾಡಿ ಕಿಲ್ಲರ್!


ಇದು ಎಂಥ ವಿಚಿತ್ರ ನೋಡಿ, ಇತ್ತೀಚಿಗೆ ಗಂಡ ಹೆಂಡತಿ ಅನುಸರಿಸಿಕೊಂಡು ಸಂಸಾರ ಮಾಡುವ ಬದಲು ಯಾವ್ಯಾವುದೋ ಕಾರಣಗಳಿಗೆ ಕೊ-ಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಸಾಂತ್ವಾನ ಮಾಡಬೇಕಾಗಿದ್ದ ಕೈಗಳು ಕೈಗೆ -ರಕ್ತ ಮೆತ್ತುಕೊಳ್ಳುವಂತಹ ಕೆಲಸ ಮಾಡುತ್ತಿವೆ. ಅದರಲ್ಲೂ ಇಂದು ಅ-ಕ್ರ-ಮ ಸಂಬಂಧದ ಕೇಸ್ ಗಳು ಹೆಚ್ಚು ದಾಖಲಾಗುತ್ತಿವೆ. ಇತ್ತೀಚೆಗೆ ಸೋಲದೇವನಹಳ್ಳಿ ಕೂಡ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದೆ.

ಹೌದು ಇತ್ತೀಚಿಗೆ ಸಂಭವಿಸುತ್ತಿರುವ ಹಲವಾರು ಪುರುಷರ ಕೊ-ಲೆಗಳ ಹಿಂದೆ ಪತ್ನಿಯ ಕೈವಾಡವೇ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಸೋಲದೇವನ ಹಳ್ಳಿಯಲ್ಲಿ ನಡೆದಿರುವ ಈ ಘಟನೆ ಇಂತಹ ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ದಾಸೇಗೌಡ ಎಂಬುವವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ ಎರಡು ದಿನಗಳ ಬಳಿಕ ಅವರ ಪತ್ನಿ ತನ್ನ ಪತಿ ಕಾಣಿಸುತ್ತಿಲ್ಲ ಎಂದು ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ನೀಡಿದರು. ಇದೀಗ ದಾಸೆಗೌಡ ಶ-ವ-ವಾಗಿ ಸಿಕ್ಕಿದ್ದಾರೆ.

ದಾಸೇಗೌಡ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ ಗ್ರಾಮದ ನಿವಾಸಿ. ಇವರ ವಯಸ್ಸು 48 ವರ್ಷ. ದಾಸೇಗೌಡ ಅವರ ಪತ್ನಿ ಜಯಲಕ್ಷ್ಮಿ. ಇವರಿಬ್ಬರ ವಿವಾಹವಾಗಿ 16 ವರ್ಷಗಳ ಕಳೆದಿವೆ ದಾಸೇಗೌಡ ಕಳೆದ 16 ವರ್ಷಗಳಿಂದ ಬೆಂಗಳೂರಿನ ಚಿಕ್ಕಬಾಣಾವರ ಬಳಿ ಇರುವ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಫಾರ್ಮ್ ಹೌಸ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ದಾಸೇಗೌಡ ಅವರೇ. ಇನ್ನು ಅವರ ಪತ್ನಿ ಜಯ ಲಕ್ಷ್ಮಿ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದ ಶನಿವಾರದ ರಾತ್ರಿ ದಾಸೇಗೌಡ ತನ್ನ ಸ್ನೇಹಿತರ ಜೊತೆಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಿತ್ತು ಕೆಲಸ ಮಾಡಿ ಸುಸ್ತಾಗಿದೆ ಹಾಗಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬರುತ್ತೇನೆ ಅಂತ ಗೆಳೆಯರಿಗೆ ಹೇಳಿ ಮನೆಗೆ ಹೊರಟಿದ್ದಾರೆ .ಅವರು ಆ ರಾತ್ರಿ ಕಾರ್ಯಕ್ರಮಕ್ಕೆ ಹೋಗಿಲ್ಲ ಮರುದಿನ ಮನೆಯಲ್ಲಿ ವಿಚಾರಿಸಿದಾಗ ಊರಿಗೆ ಹೋಗಿದ್ದಾರೆ ಎಂದು ಪತ್ನಿ ಮಾಹಿತಿ ನೀಡಿದ್ದಾಳೆ. ಅಲ್ಲಿಂದ ದಾಸೆಗೌಡ ಅವರ ಪತ್ತೆಯೇ ಇರಲಿಲ್ಲ. ಬಳಿಕ ನವೆಂಬರ್ 27ರಂದು ದಾಸೇಗೌಡನ ಪತ್ನಿ ಜಯಲಕ್ಷ್ಮಿ ತನ್ನ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ಪೊಲೀಸರು ದಾಸೇಗೌಡರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಸಮಯದಲ್ಲಿ ದಾಸೇಗೌಡ ಅವರ ಶ-ವ ನವೆಂಬರ್ 30ರಂದು ರಾಮನಗರ ತಾಲೂಕಿನ ಕೆಂಪೇಗೌಡನ ದೊಡ್ಡಿ ಗ್ರಾಮದ ಬಳಿ ಸಿಕ್ಕಿದೆ..

Bengaluru crime story
Bengaluru crime story

ದಾಸೇಗೌಡ ಅವರ ಮೃ-ತ ದೇ-ಹವನ್ನು ನೋಡಿದರೆ ಅವರ ತಲೆಗೆ ಕಲ್ಲು ಹೊಡೆದು ಕೊ-ಲೆ ಮಾಡಿರುವುದು ತಿಳಿದು ಬಂದಿದೆ. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯ ಚರಂಡಿ ಒಂದರಲ್ಲಿ ಇವರ ಶ-ವವನ್ನು ಹಾಕಲಾಗಿತ್ತು. ಪೊಲೀಸರ ಊಹೆಯ ಪ್ರಕಾರ ಈ ಕೊ-ಲೆ ನಡೆದು ಆಗಲೇ ನಾಲ್ಕು ದಿನ ಕಳೆದಿದೆ ಅಂದ್ರೆ ಶನಿವಾರದ ರಾತ್ರಿಯೇ ಈ ಕೃ-ತ್ಯ ನಡೆದಿದೆ ಎನ್ನಲಾಗುತ್ತಿದೆ.

ಕೊನೆಗೆ ದಾಸೇಗೌಡನ ಶ-ವ ನೋಡಿದ ಪೊಲೀಸರಿಗೆ ಮೊದಲು ದಾಸೇಗೌಡನ ಪತ್ನಿ ಜಯಲಕ್ಷ್ಮಿ ಮೇಲೆ ಅನುಮಾನ ಬಂದಿದೆ ಆಕೆಯನ್ನ ಸರಿಯಾಗಿ ವಿಚಾರಣೆ ಮಾಡಿದಾಗ ರಾಜೇಶ್ ಎನ್ನುವ ವ್ಯಕ್ತಿಯ ಹೆಸರು ಬಯಲಾಗಿದೆ. ಇನ್ನು ದಾಸೇಗೌಡ ಅವರನ್ನ ಜಯಲಕ್ಷ್ಮಿ ಹಾಗೂ ರಾಜೇಶ ಸೇರಿ ಕೊ-ಲೆ ಮಾಡಿರಬಹುದು ಎನ್ನುವ ಗುಮಾನಿ ಇದೆ ಆದರೆ ಅವತ್ತೇ ಕೊಲೆ ಮಾಡಿ ಮೈಸೂರು ಹೆದ್ದಾರಿ ಅವರಿಗೆ ಹೇಗೆ ಸಾಧಿಸಿದ್ದಾರೆ ಅವರಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಇನ್ನೂ ಗೊತ್ತಾಗಬೇಕಿದೆ.

ದಾಸೇಗೌಡ ಊರಿನಲ್ಲಿ ಮರ್ಯಾದೆಯಿಂದ ಎಲ್ಲರ ನಂಬಿಕೆ ಪ್ರೀತಿ ಗಳಿಸಿಕೊಂಡು ಬದುಕುತ್ತಿದ್ದ ವ್ಯಕ್ತಿ ಊರಿನವರೇ ಆತ ಉತ್ತಮ ವ್ಯಕ್ತಿ ಎಂಬುದನ್ನು ತಿಳಿಸಿದ್ದಾರೆ ಹೊರಗಿನಿಂದ ಬಂದರು ಕೂಡ ಅದೇ ಊರಿನವನೇ ಆಗಿ ಹೋಗಿದ್ದ. ಫಾರ್ಮ್ ಹೌಸ್ ನ್ನು ದಾಸೇಗೌಡ ಒಬ್ಬನೇ ನಿಭಾಯಿಸುತ್ತಿದ್ದ. ಆದರೆ ತನ್ನ ಹಿಂದೆ ತನ್ನನ್ನೇ ಕೊ-ಲೆ ಮಾಡುವಂತಹ ಷ-ಡ್ಯಂ-ತ್ರ ನಡೆಯುತ್ತಿದೆ ಎನ್ನುವುದು ಮಾತ್ರ ಅವನಿಗೆ ಗೊತ್ತಾಗಲೇ ಇಲ್ಲ. ಅದರಲ್ಲೂ 16 ವರ್ಷಗಳ ಕಾಲ ತನ್ನೊಂದಿಗೆ ಸಂಸಾರ ಮಾಡಿಕೊಂಡು ಬಂದ ಹೆಂಡತಿ ತನ್ನ ಸಾ-ವಿ-ಗೆ ಕಾರಣಳಾಗುತ್ತಾಳೆ ಎಂದು ಆತ ಊಹಿಸಿರಲಿಕ್ಕೂ ಸಾಧ್ಯವಿಲ್ಲ. ಆದರೆ ಈ ಕೊ-ಲೆ ಪ್ರ-ಕರಣಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ವಿವರಗಳು ಪೋಲೀಸ್ ತನಿಖೆಯ ನಂತರ ತಿಳಿದು ಬರಲಿದೆ.

ಇದನ್ನೂ ಓದಿ : ವಿಷ್ಣು ದಾದಾ ಅವರ ಮತ್ತೋರ್ವ ಪುತ್ರಿ ಯಾರು ? ಎಲ್ಲಿದ್ದಾರೆ ? ಆಕೆಗೆ ಮದುವೆಯಾಗಿದೆಯೇ?


Leave A Reply

Your email address will not be published.