ಬ್ಯಾಂಕಿನ ಗ್ರಾಹಕರ ದುಡ್ಡಿನಿಂದಲೇ ಕೋಟಿ ಕೊಳ್ಳೆ ಹೊಡೆದ ಮ್ಯಾನೇಜರ್. ಇಂದೇ ಹುಷಾರಾಗಿ.

Fraud Story ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಸ್ಥರು ದೊಡ್ಡ ಮಟ್ಟದ ಹಣ ಸಿಕ್ಕಾಗ ಅದನ್ನು ಬ್ಯಾಂಕಿನಲ್ಲಿ ಎಫ್ ಡಿ(Fixed Deposit) ಇಡುತ್ತಾರೆ. ಆದರೆ ಇನ್ನೊಬ್ಬ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಆ ಹಣದಿಂದಲೇ ಲಾಭವನ್ನು ಮಾಡಿಕೊಂಡಿದ್ದು ನಂತರ ಸಿಕ್ಕಿಬಿದ್ದು ಈಗ ಜೈಲಿನ ಊಟವನ್ನು ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ಮುಂದೆ ಹೋಗುತ್ತಾ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಈ ರೀತಿಯ ಮೋಸವನ್ನು ಮಾಡಿರುವುದು ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ ಎನ್ನುವ ಮಹಿಳಾ ಬ್ಯಾಂಕ್ ಮ್ಯಾನೇಜರ್(Bank Manager). ಪ್ರತಿಯೊಬ್ಬ ಮಾಧ್ಯಮ ಹಾಗೂ ಬಡವರ್ಗದ ಕುಟುಂಬದವರು ತಮ್ಮ ದಿನ ನಿತ್ಯದ ಖರ್ಚುಗಳನ್ನು ಮುಗಿಸಿ ಅದರಿಂದ ಉಳಿದಂತಹ ಹಣವನ್ನು ಈ ರೀತಿ ಬ್ಯಾಂಕಿನಲ್ಲಿ ಕೂಡಿಟ್ಟು ಮನೆ ವಾಹನ ಖರೀದಿಯ ಕನಸನ್ನು ಕಂಡಿರುತ್ತಾರೆ. ಆದರೆ ಈ ಮಹಿಳಾ ಮ್ಯಾನೇಜರ್ ಮಾತ್ರ ಆ ಹಣದಿಂದಲೇ ಲಾಭವನ್ನು ಮಾಡಿಕೊಂಡಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ನಮ್ಮ ಹಣ ಸೇಫ್ ಆಗಿರುತ್ತದೆ ಎಂಬುದಾಗಿ ಭಾವಿಸಿರುವ ಹಲವಾರು ಕೋಟ್ಯಂತರ ಜನರ ನಂಬಿಕೆಗೆ ತಣ್ಣೀರು ಎರಚುವಂತಹ ಕೆಲಸವನ್ನು ಮಾಡಿದ್ದಾಳೆ.

ಬೆಂಗಳೂರಿನ ಎಸ್ ಆರ್ ನಗರದಲ್ಲಿರುವ ಬ್ಯಾಂಕ್ ಒಂದರಲ್ಲಿ ಕನ್ಯಾಕುಮಾರಿ ಮೂಲದ ಸಜಿಲ ಅವರು ರಿಲೇಷನ್ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದೀರ್ಘಕಾಲಿಕ ಎಫ್ ಡಿ ಇಟ್ಟಿರುವಂತಹ ಹಣವನ್ನು ತೆಗೆದು ಎಲ್ಐಸಿಯ ಬಾಂಡ್ ಅನ್ನು ಖರೀದಿಸುತ್ತಿದ್ದಾರಂತೆ. ನಂತರ ಹಣ ಬಂದ ಮೇಲೆ ಅದನ್ನು ಅದೇ ಗ್ರಾಹಕರ ಅಕೌಂಟ್ಗೆ ಮತ್ತೊಮ್ಮೆ ಹಣವನ್ನು ಹಾಕಿ ಲಾಭವನ್ನು ಪಡೆಯುತ್ತಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದು ಇದು ಪ್ರತಿಯೊಬ್ಬ ಗ್ರಾಹಕರನ್ನು(Customer) ಕೂಡ ಕೆರಳಿಸಿದೆ. ಒಬ್ಬ ಮ್ಯಾನೇಜರ್ ಆಗಿ ಅವರೇ ಈ ರೀತಿ ಮಾಡಿರುವುದು ಎಲ್ಲರ ಅಪನಂಬಿಕೆಗೆ ಕಾರಣವಾಗಿದೆ.

ಬ್ಯಾಂಕಿನ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಸಜಿಲಾ ಅವರು ಮಾಡಿರುವಂತಹ 4.9ಕೋಟಿ ಮೌಲ್ಯದ ಮೋಸ ಬೆಳಕಿಗೆ ಬಂದಿದೆ. ಇದು ತಿಳಿದ ಕೂಡಲೇ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅವರು ಕೂಡಲೇ ಎಸ್ ಆರ್ ನಗರದ ಪೊಲೀಸ್(Police) ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಸಜಿಲ ಅವರ ವಿರುದ್ಧ ಪೊಲೀಸ್ ವಿಚಾರಣೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ಅವರ ವಿರುದ್ಧ ದೊಡ್ಡ ಮಟ್ಟದ ನ್ಯಾಯಾಲಯದ ತೀರ್ಪು ಹೊರಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!