ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾ’ವು’. 4 ವರ್ಷಗಳ ನಂತರ ಪೊಲೀಸರಿಗೆ ಗೊತ್ತಾಯ್ತು ಬೈಕರ್ ನ ಹೆಂಡತಿಯ ಅಸಲಿ ಮುಖವಾಡ.

ಸಿನಿಮಾ ನೋಡಿ ಇಂಥ ಪ್ರಕರಣಗಳು ನಡೆಯತ್ತೋ ಅಥವಾ ಇಂಥ ಪ್ರಕರಣಗಳನ್ನೇ ವಸ್ತುವಾಗಿಸಿಕೊಂಡು ಸಿನಿಮಾ ಕಥೆಯನ್ನ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಅಷ್ಟು ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ ಕೊ’ಲೆ, ಸು’ಲಿಗೆ ಹೇಗೆ ಮಾಡುತ್ತಾರೆ ಅನ್ನೋದೆ ಯಕ್ಷ ಪ್ರಶ್ನೆ. ತನ್ನ ಗಂಡನನ್ನೇ ಮುಗಿಸಿ ನಾಲ್ಕು ವರ್ಷದ ವರೆಗೆ ಸುಳಿವೇ ಇಲ್ಲದೇ ಒಬ್ಬ ಮಹಿಳೆ ತಲೆಮರೆಸಿಕೊಂಡಿರೋದು ಅಂದ್ರೆ ಸುಮ್ನೇನಾ!

ಇದೊಂದು ಮಾಸ್ಟರ್ ಮೈಂಡ್ ಮಹಿಳೆಯ ಸ್ಟೋರಿ. ಆಕೆ ತನ್ನ ಪತಿಯನ್ನೇ ಕೊ’ಲೆ ಮಾಡಿದ್ದಾಳೆ ಅಂತ ಕಂಡುಹಿಡಿದು, ಅವಳನ್ನ ವಶಕ್ಕೆ ಪಡೆದುಕೊಳ್ಲುವುದಕ್ಕೆ ಪೋಲಿಸರಿಗೆ ಬರೋಬ್ಬರಿ ನಾಲ್ಕು ವರ್ಷ ತಗುಲಿದೆ. ಈ ಘಟನೆಯ ಹಿನ್ನೆಲೆಯನ್ನ ಒಮ್ಮೆ ನೋಡೋಣ. ಇಲ್ಲಿ ಕೊ’ಲೆ’ಯಾದ ವ್ಯಕ್ತಿ ಕೇರಳ ಮೂಲದ ಅಸ್ಮಾಕ್ ಮೌನ್ ಧರೋತ್. ಈತ ಒಬ್ಬ ಬೈಕರ್. ತನ್ನ ಪತ್ನಿ ಸುಮೇರಾ ಪರ್ವೇಜ್ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದ.

ಅಸ್ಬಾಕ್ ಮತ್ತು ಸುಮೇರಾ ಜೋಡಿ ನಾಲ್ಕು ವರ್ಷಗಳ ಹಿಂದೆ ಅಂದರೆ ಅಗಸ್ಟ್ 11, 2018ರಂದು ರಾಜಸ್ತಾನದ ಜೈಸಲ್ಮೇರ್ ನಗರಕ್ಕೆ ಪ್ರವಾಸ ಹೋಗಿದ್ದರು. ಇವರ ಜೊತೆಯಲ್ಲಿ ಸಂಜಯ್ ಕುಮಾರ್, ಅಬ್ದುಲ್ ಸಾಬಿಕ್, ವಿಶ್ವಾಸ್ ಎಸ್ ಡಿ ಎಂಬ ಮೂವರು ಗೆಳೆಯರು ಕೂಡ ಹೋಗಿದ್ದರು. ಖುಷಿಯಾಗಿ ಹೀಗೆ ಸ್ನೇಹಿತರು ಹಾಗೂ ಪತ್ನಿಯ ಜೊತೆ ಪ್ರವಾಸಕ್ಕೆ ಹೋದ ಅಸ್ಬಾಕ್ ಪತ್ತೆಯಾಗಿದ್ದು ಮಾತ್ರ ಶ’ವವಾಗಿ! 2018ರ ಅಗಸ್ಟ್ 17ರಂದು ಶಹಗರ್ ಪ್ರದೇಸದ ಮರಳು ದಿಬ್ಬದ ಬಳಿ ಹೆ’ಣ ವಾಗಿ ಮಲಗಿದ್ದ. ಇದನ್ನು ನೋಡಿದ ಆತನ ಪತ್ನಿ ಸುಮೇರಾ ಪರ್ವೇಜ್ ಇದು ಸಹಜ ಸಾ’ವ’ಲ್ಲ ಅಂತ ತನ್ನ ತಂದೆಯ ಜೊತೆ ಜಸೈಲ್ಮೆರ್ ಪೋಲಿಸರಿಗೆ ದೂರು ನೀಡಿದ್ದಳು. ಆದ್ರೆ ಪೋಲಿಸರು ತನಿಖೆ ನಡೆಸಿ ಇದು ಸಹಜ ಸಾ’ವು ಕೊ’ಲೆಯಲ್ಲ ಅಂತ ಕೊ’ಲೆ ಮಾಡಿದ್ದಕ್ಕೆ ಯಾವುದೇ ಪ್ರೂಫ್ ಸಿಗದೆ ಈ ಕೇಸ್ ನ್ನು ಕ್ಲೋಸ್ ಮಾಡಿದ್ದರು.

ಇತ್ತ ಅಸ್ಬಾಕ್ ಅವರ ತಾಯಿ ಹಾಗೂ ಅಣ್ಣ ಇದು ಕೊ’ಲೆ ಎಂದು ಶಂಕಿಸಿ ಪೋಲೀಸ ತನಿಖೆಗೆ ಆಗ್ರಹಿಸಿದ್ದರು. ಬೆಂಗಳೂರಿನಲ್ಲಿ ತನಿಖೆ ಆರಂಭವಾಯಿತು. ಕೊನೆಗೆ ಇದು ಕೊ’ಲೆ ಅನ್ನುವುದಕ್ಕೆ ಪೋಲಿಸರಿಗೆ ಸಾಕ್ಷಿಯೂ ತೊರಕಿತ್ತು! ಈ ಸಂಬಂಧ ಎರಡು ವರ್ಷಗಳ ಹಿಂದೆಯೇ ಇಬ್ಬರು ಆರೋಪಿಗಳನ್ನು ಬಂ’ಧಿಸಲಾಗಿತ್ತು. ಆದರೆ ಈ ಘಟನೆಯ ಹಿಂದಿರುವ ಚಾಣಾಣ್ಯ ತಲೆ ಸುಮೇರಾ. ಆಕೆ ಮಾತ್ರ ಪೋಲಿಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಳು.

ಅಸ್ಬಾಕ್ ಕೊ”ಲೆ” ಸಾಕ್ಷಿ ಏನು ಗೊತ್ತಾ? ಮೊದಲು ಸಹಯ ಸಾ’ವು ಎಂದೇ ಪರಿಗಣಿಸಿದ್ದ ಪೋಲಿಸರಿಗೆ ಇದು ಕೊ’ಲೆ ಅಂತ ಹಿಂಟ್ ಕೊಟ್ಟಿದ್ದು ಅಸ್ಬಾಕ್ ಅವರ ಬೈಕ್ ನಲ್ಲಿ ನೇತಾಡುತ್ತಿದ್ದ ಹೆಲ್ಮೆಟ್ ಹಾಗೂ ಸರಿಯಾಗಿ ಸ್ಟಾಂಡ್ ಹಾಕಿ ನಿಲ್ಲಿಸಿದ್ದ ಬೈಕ್! ಅಸ್ಬಾಕ್ ಅವರ ಕುತ್ತಿಗೆಯಲ್ಲಿ ಗಾಯವಾಗಿತ್ತು. ಇದು ಹೆಲ್ಮೆಟ್ ನ ಪಟ್ಟಿ ಬಿಸಿದು ಗಾಯವಾಗಿದೆ ಎಂದು ಹೇಳಲಾಗಿತ್ತು. ಆದರೆ ಹೀಗೆ ಗಾಯವಾದವನು ಹೆಲ್ಮೆಟ್ ತೆಗೆದು ಬೈಕ್ ಗೆ ಇಟ್ಟು ಸರಿಯಾಗಿ ಸ್ಟಾಂಡ್ ಹಾಕಿ ಜೀ’ವ ಬಿಡಲು ಹೇಗೆ ಸಾಧ್ಯ ಎಂದು ಪೋಲಿಸರು ತಲೆಕೆಡಿಸಿಕೊಂದರು. ಆಗ ಸುಮೇರಾಳೇ ಈ ಕೊ”ಲೆ” ಮಾಡಿಸಿದ್ದು ಎನ್ನುವ ವಿಷಯ ಪೋಲಿಸರ ಗಮನಕ್ಕೆ ಬಂತು.

ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಸುಮೇರಾ ಪರ್ವೇದ್ ಈಗ ಜೈಲು ಊಟ ಮಾಡುತ್ತಿದ್ದಾಳೆ. ತಾನು ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ತಿಂಗಳಿಗೊಮ್ಮೆ ಸಿಮ್ ಬದಲಾಯಿಸುತ್ತಿದ್ದಳಂತೆ. ಅಸ್ಬಾಕ್ ಕೋಟ್ಯಾಂತರ ಆಸ್ತಿ ಒಡೆಯ. ಹಾಗಾಗಿ ಆಸ್ತಿಗಾಗಿ ಈ ಕೊ’ಲೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿರುವ ವಿಷಯ. ಇನ್ನೂ ಈ ಘಟನೆಯ ಹಿಂದೆ ಬೇರೆ ಯಾವ ಉದ್ದೇಶವಿತ್ತು ಎನ್ನುವುದು ಇನ್ನೂ ಗೊತ್ತಾಗಬೇಕಷ್ಟೇ!

Leave a Comment

error: Content is protected !!