14ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಅರುಣ್ ಸಾಗರ್ ಪಡೆದುಕೊಂಡಿರುವ ಒಟ್ಟಾರೆ ಸಂಭಾವನೆ ಎಷ್ಟು ಗೊತ್ತಾ?

Arun Sagar has left the Bigg Boss house for the 14th week: ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಈ ಬಾರಿಯ ಆವೃತ್ತಿಯಲ್ಲಿ ಸಾಕಷ್ಟು ರೋಚಕತೆಯನ್ನು ಕಾಯ್ದುಕೊಂಡು ಬರುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ Perfect ಆಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Arun Sagar has left the Bigg Boss house

ಇನ್ನು ನೋಡ ನೋಡುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮ 14 ವಾರಗಳನ್ನು ಪೂರೈಸಿದೆ. ಇನ್ನು 14ನೇ ವಾರದಲ್ಲಿ ಅರುಣ್ ಸಾಗರ್ ಹಾಗೂ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಅವರು ಎಲಿಮಿನೇಷನ್ ಕಂಡು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

Bigg Boss ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅರುಣ್ ಸಾಗರ್ ಅವರು ಅಲ್ಲಿ ಕೂಡ ಬಿಗ್ ಬಾಸ್ ಕಿರೀಟವನ್ನು ಗೆಲ್ಲಲು ಎಡವಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಈ ಬಾರಿ ಫೈನಲ್ ಕೂಡ ತಲುಪಲು ಸಾಧ್ಯವಾಗದೆ 14ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕನ್ನಡ ಕಿರುತೆರೆಯಲ್ಲಿ ನಿರೂಪಕನಾಗಿ ಹಾಗೂ ಚಿತ್ರರಂಗದಲ್ಲಿ ಅತ್ಯದ್ಭುತ ಹಾಸ್ಯ ಕಲಾವಿದನಾಗಿ ಅರುಣ್ ಸಾಗರ್ ಅವರು ಈಗಾಗಲೇ ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ.

ಇನ್ನು ಈ ಬಾರಿ ಪ್ರವೀಣ ಹಾಗೂ ನವೀನರ ನಡುವೆ ಸ್ಪರ್ಧಿಸಲು ಬಂದ ಅರುಣ್ ಸಾಗರ್ ಅವರು ತಾವು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ಕಾಲ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದರು. ಈ ಬಾರಿಯೂ ಬಿಗ್ ಬಾಸ್ ಅನ್ನು ಗೆಲ್ಲಲು ಸಾಧ್ಯವಾಗದೇ ಈಗ 14ನೇ ವಾರಕ್ಕೆ ಅಮೂಲ್ಯ ಗೌಡ ಅವರ ಜೊತೆಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಮನೆಯಿಂದ ಹೊರ ಬರಬೇಕಾಗಿದೆ. ಹಾಗಿದ್ದರೆ 14ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಅರುಣ್ ಸಾಗರ್ ಅವರು ಪಡೆದುಕೊಂಡಿರುವ ಸಂಭವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಓಂ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಕ್ತು ಗುಡ್ ನ್ಯೂಸ್

ಮೊದಲನೇ ವಾರದಿಂದಲೂ ಕೂಡ ಅರುಣ್ ಸಾಗರ್ ಅವರು ಬಿಗ್ ಬಾಸ್ ಮನೆಯಲ್ಲಿ ಇದು ಈಗ 14ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಹೀಗಾಗಿ ಅವರಿಗೆ ವಾರಕ್ಕೆ ೨೫ ಸಾವಿರ ರೂಪಾಯಿ ಸಂಭಾವನೆ ನೀಡಲಾಗಿದ್ದು ಒಟ್ಟಾರೆಯಾಗಿ 14 ವಾರಗಳಿಗೆ 3.25 ಲಕ್ಷ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಅರುಣ್ ಸಾಗರ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!