18 ಶಾಸಕರು ಸೇರಿ 25 ಹೈ ಪ್ರೊಫೈಲ್ ಪ್ರಭಾವಿ ಗಳನ್ನು ಬುಟ್ಟಿಗೆ ಹಾಕಿಕೊಂಡು ಸರ್ಕಾರಕ್ಕೆ ಕುತ್ತು ತಂದ ಐನಾತಿ ಚೆಲುವೆ

ಇತ್ತೀಚಿಗಷ್ಟೇ ಒಡಿಶಾ ಮೂಲದ ಅರ್ಚನಾ ನಾಗ್ ಎನ್ನುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಈಗಾಗಲೇ ಆಕೆ ಮಾಡಿರುವ ಕೆಲಸ ಕಾರ್ಯಗಳನ್ನು ನೋಡಿರುವ ಪೊಲೀಸರು ನಿಜಕ್ಕೂ ಕೂಡ ಮೂಕ ವಿಸ್ಮಿತರಾಗಿದ್ದಾರೆ. ಈ ಪ್ರಕರಣದ ಮೂಲಕ ತಿಳಿದು ಬಂದಿರುವುದು ಏನೆಂದರೆ ಅರ್ಚನಾ ನಾಗ್ ಎಂಬ ಮಹಿಳೆ 18 ಶಾಸಕರನ್ನು ಸೇರಿದಂತೆ ಒಟ್ಟಾರೆಯಾಗಿ 25 ಪ್ರಭಾವಿ ವ್ಯಕ್ತಿಗಳನ್ನು ಹನಿ ಟ್ರ್ಯಾಪ್ ಮಾಡುವ ಮೂಲಕ ಸಿಲುಕಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈಕೆ ಹನಿಟ್ರ್ಯಾಪ್ ಮಾಡಿರುವ ಬಹುತೇಕ ಎಲ್ಲಾ ಶಾಸಕರು ಕೂಡ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಆಗಿರುವ ನವೀನ್ ಪಟ್ನಾಯಕ್ ಅವರ ಬಿಜೆಡಿ ರಾಜಕೀಯ ಪಕ್ಷದ ಶಾಸಕರಾಗಿದ್ದಾರೆ ಎನ್ನುವುದು ಮತ್ತೊಂದು ಗಮನಾರ್ಹ ವಿಚಾರವಾಗಿದ್ದು ಇದರಿಂದ ಸರ್ಕಾರ ಉದುರಿ ಬೀಳುವ ಸಂಕಷ್ಟವನ್ನು ಕೂಡ ಎದುರಿಸುತ್ತಿದೆ ಎಂದು ಹೇಳಬಹುದಾಗಿದೆ. ಇನ್ನು ಇಷ್ಟೆಲ್ಲ ನಡೆದರೂ ಕೂಡ ಅರ್ಚನಾಳ ವಿರುದ್ಧ ಯಾವುದೇ ಪ್ರಕರಣ ಅಥವಾ ತನಿಖೆ ನಡೆಯದಿರುವುದು ಮತ್ತೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಆಕೆಯ ವಿರುದ್ಧ ಒಬ್ಬ ಯುವತಿ ದೂರನ್ನು ಕೂಡ ದಾಖಲಿಸಿದ್ದು ಅದರ ಕುರಿತಂತೆ ಕೂಡ ಯಾವುದೇ ಪ್ರತಿಕ್ರಿಯೆಯನ್ನು ಪೊಲೀಸರು ಇದುವರೆಗೂ ನೀಡಿಲ್ಲ.

ಕೆಲವು ರಾಜಕಾರಣಿಗಳು ಇವರು ನಮಗೆ ತಿಳಿದಿದೆ ಎಂಬುದಾಗಿ ಪರಿಚಯದ ಮೂಲವನ್ನು ಉತ್ತರವನ್ನಾಗಿ ನೀಡಿದರೆ ಇನ್ನೂ ಹಲವಾರು ಪ್ರಭಾವಿ ರಾಜಕಾರಣಿಗಳು ನಮಗೆ ಇವರು ಪರಿಚಯವೇ ಇಲ್ಲ ಎಂಬುದಾಗಿ ಮೈಕೊಡವಿಕೊಂಡಿದ್ದಾರೆ. ಇನ್ನು ಈ ಪ್ರಕರಣದಿಂದ ತಿಳಿದುಬಂದಿರುವುದೇನೆಂದರೆ ಅರ್ಚನಾ ನಾಗ್ ಹಾಗೂ ಆಕೆಯ ಪತಿ ಇಬ್ಬರೂ ಕೂಡ ಹಲವಾರು ಪ್ರಭಾವಿ ರಾಜಕಾರಣಿಗಳ ಪರಿಚಯವನ್ನು ಹೊಂದಿದ್ದು ಅವರ ಜೊತೆಗೆ ಹನಿ ಟ್ರ್ಯಾಕ್ ನಡೆಸಿರುವ ವಿಡಿಯೋವನ್ನು ಕೂಡ ಚಿತ್ರೀಕರಿಸಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಒಟ್ಟಾರೆಯಾಗಿ ಅರ್ಚನಾ ನಾಗ್ ಆಡಳಿತಾರೂಢ ಬಿಜೆಪಿ ಪಕ್ಷದ ಪ್ರಮುಖ ಶಾಸಕರನ್ನು ಹಾಗೂ ಪ್ರಭಾವಿ ವ್ಯಕ್ತಿಗಳನ್ನು ತನ್ನ ಹನಿಟ್ರ್ಯಾಪ್ ಬಲೆಗೆ ಸಿಕ್ಕಿಸಿ ಅವರ ಎಲ್ಲಾ ಜುಟ್ಟು ಜನಿವಾರವನ್ನು ತನ್ನ ಬಳಿ ಇಟ್ಟುಕೊಂಡಿದ್ದಾಳೆ. ಇನ್ನೊಂದು ಪ್ರಮುಖವಾದ ವಿಚಾರವೇನೆಂದರೆ ಒಡಿಶಾದ ಖ್ಯಾತ ಸಿನಿಮಾ ನಿರ್ಮಾಪಕನನ್ನು ಕೂಡ ಇದೇ ಹನಿ ಟ್ರ್ಯಾಪ್ ಬಲೆಗೆ ಸಿಕ್ಕಿಸಲು ಹೋದ ಸಂದರ್ಭದಲ್ಲಿಯೇ ಸಿಕ್ಕು ಪೊಲೀಸರ ಅತಿಥಿ ಆಗಿರುವುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!