ಈಗಿನ ಕಾಲದ ಯುವಕ ಯುವತಿಯರು ಅತಿ ಬೇಗನೆ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನು ಕಳೆದುಕೊಳ್ಳುತ್ತಾರೆ. ತಾವು ಅಂದುಕೊಂಡಂತೆ ಜೀವನ ಆಗದೇ ಇದ್ದರೆ ಜೀವವನ್ನೇ ಕಳೆದುಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಳ್ಳೋಕೆ ಸಹ ಹಿಂದೆ ಮುಂದೆ ನೋಡಲ್ಲ ಇಂತಹ ದುರ್ಬಲ ಮನಸ್ಥಿತಿ ಹೊಂದಿರುವ ಮನುಷ್ಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮಾಜ ನಮ್ಮನ್ನ ಈ ಪರಿಸ್ಥಿತಿಗೆ ದೂಡುತ್ತಿದೆಯೋ ಅಥವಾ ಇದಕ್ಕೆ ಸ್ವತಃ ನಮ್ಮ ದುರ್ಬಲ ಮನಸ್ಥಿತಿ ಕಾರಣ ಎನ್ನುವುದು ಪ್ರಶ್ನೆಯಾಗಿದೆ.

ಆಂಧ್ರಪ್ರದೇಶ ಮೂಲದ ನವೀನ್ ಎಂಬ ಯುವಕ ತನ್ನನ್ನು ಯಾವ ಹುಡುಗಿಯೂ ಮದುವೆಯಾಗೋಕೆ ಮುಂದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಸ್ಥೈರ್ಯವನ್ನು ಕಳೆದುಕೊಂಡ ನೈಜ ಕಥೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಆಂಧ್ರಪ್ರದೇಶದ ಮೂಲದ ನವೀನ್ ತನ್ನ ಕುಟುಂಬದೊಂದಿಗೆ ಕೆಲಸಕ್ಕೆಂದು ಬೆಂಗಳೂರಿನಲ್ಲಿ ಬಂದು ವಾಸ ಮಾಡುತ್ತಿದ್ದ. ಪೀಣ್ಯ ಬಳಿಯ ಗಾರ್ಮೆಂಟ್ಸ್​ವೊಂದರಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದ. ನವೀನ್ ಗೆ ಒಳ್ಳೆಯ ಸಂಬಳ ಕೂಡ ಇತ್ತು. ಅದೇ ಸೃಜನಶೀಲ ವ್ಯಕ್ತಿ ಆಗಿದ್ದ.

ನವಿನ್ 29 ನೇ ವಯಸ್ಸಿಗೆ ಬಂದಾಗ ಅವನ ಮನೆಯಲ್ಲಿ ಮದುವೆಯಾಗು ಎಂದು ಒತ್ತಾಯಿಸಲು ಪ್ರಾರಂಭಿಸಿದರು ಹಾಗೆ ನವೀನ್ ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಮನೆಯವರು ಹೂಡಿಕೆಯನ್ನು ಹುಡುಕಲು ಪ್ರಾರಂಭಿಸಿದರು. ನವೀನ್ ಗೆ ವರ್ಷ ಗಳ ಕಾಲ ಹುಡುಗಿ ಹುಡುಕಿದರೂ ಯಾವ ಹುಡುಗಿಗೂ ಸಿಗಲಿಲ್ಲ. ಯಾವ ಹುಡುಗಿಯೂ ನನ್ನನ್ನು ಮದುವೆಯಾಗಲು ಮುಂದಾಗುತ್ತಿಲ್ಲ ಎಂಬ ಆತಂಕ ಮತ್ತು ಕಳವಳ ನೋವಿನಲ್ಲಿ ಶುರುವಾಯ್ತು. ನವೀನ್ ಗೆ 31 ವರ್ಷ ವಯಸ್ಸಾದರೂ ಕೂಡ ಹುಡುಗಿ ಸಿಗಲ್ಲ.

ನವೀನ್ ಬಲಗೈ ಸ್ವಾಧೀನ ಕಳೆದುಕೊಂಡಿದ್ದ. ಎಲ್ಲಾ ಕೆಲಸವನ್ನು ಎಡಗೈಯಲ್ಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು ಹುಡುಗಿಯನ್ನು ನೋಡಲು ಹೋದಾಗ ನವೀನ್ ನ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ನ್ನು ನೋಡಿ ಹುಡುಗಿಯರು ಇವನನ್ನು ಒಪ್ಪುತ್ತಿರಲಿಲ್ಲ. ಹುಡುಗಿಯರೂ ಇವನನ್ನು ಮದುವೆಯಾಗಲು ರಿಜೆಕ್ಟ್ ಮಾಡಿದ್ದಕ್ಕೆ ನವೀನ್ ತುಂಬಾ ದುಃಖಿತನಾಗಿದ್ದ. ಮನನೊಂದ ನವೀನ್ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸುತ್ತಾನೆ . ಮೇ 28 ರಂದು ಪೀಣ್ಯದ ಪೆಟ್ರೋಲ್ ಬಂಕ್​ವೊಂದರಲ್ಲಿ ಪೆಟ್ರೋಲ್ ಖರೀದಿಸಿ..

ಐಟಿಐ ಕಾಲೇಜು ಕಾಂಪೌಂಡ್ ಬಳಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹ’ತ್ಯೆಗೆ ಯತ್ನಿಸಿದ್ದ. ಬಳಿಕ ನವೀನನ ಚೀರಾಟ ಕೇಳಿದ ಸ್ಥಳೀಯರು ತಕ್ಷಣ ಇಎಸ್‌ಐ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೆಸರಘಟ್ಟರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನವೀನ್ ಕೊನೆಯುಸಿರೆಳೆದು ಇಹಲೋಕ ತ್ಯಜಿಸಿದ್ದಾನೆ.ಆದರೆ ನವೀನನ ಮನೆಯವರು ಹೇಳುವ ಪ್ರಕಾರ ಸಂಸ್ಥೆಯಲ್ಲಿ ಏನೋ ಅವಘಡ ಸಂಭವಿಸಿದ್ದರಿಂದ ನವೀನ್ ಜೀವ ಕಳೆದುಕೊಂಡಿದ್ದಾನೆ. ಸಂಸ್ಥೆಯವರು ಸುಳ್ಳು ಕಥೆ ಕಟ್ಟಿದ್ದಾರೆ ಇದು ಅನುಮಾನಸ್ಪದ ಸಾ’ವು ಇಂದು ನವೀನನ ಕುಟುಂಬದವರು ದೂರನ್ನು ದಾಖಲಿಸಿದ್ದಾರೆ.

By admin

Leave a Reply

Your email address will not be published.