ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಘೋರ ಘಟನೆ ಒಂದು ಆಂಧ್ರಪ್ರದೇಶದ ಕಾಕಿನಾಡ ದಲ್ಲಿ ನಡೆದಿದೆ. ಒಡಿಸ್ಸಾದ ಉಮರ್ ಕೋಟ್ ನ ಸಿಲಾತಿ ಗಾಂವ್ ಗ್ರಾಮದ ಯುವಕ, ಕರಗಾಂವ್ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ. ಉದ್ಯೋಗಕ್ಕಾಗಿ ಮದುವೆಯ ನಂತರ ಪತ್ನಿಯೊಂದಿಗೆ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದ.ಈತನ ಹೆಸರು ಮಾಣಿಕ್ ಘೋಷ್. ಈತನ ಪತ್ನಿಯ ಹೆಸರು ಲಿಪಿಕಾ ಮಂಡಲ್. ಎರಡುವರೆ ವರ್ಷದ ಹಿಂದೆ ಹೆಣ್ಣು ಮಗುವೊಂದು ಹುಟ್ಟಿತ್ತು.

ಏಳು ವರ್ಷದ ದಾಂಪತ್ಯ ಜೀವನಕ್ಕೆ ಇದೊಂದೇ ವಿಷಯ ಮುಳ್ಳಾಗಿತ್ತು.ಇವರಿಬ್ಬರೂ ನೋಡಲು ಬೆಳ್ಳಗಾಗಿದ್ದರು.ಆದರೆ ಹುಟ್ಟಿದ ಮಗು ಕಪ್ಪಾಗಿತ್ತು. ಇದೇ ವಿಚಾರಕ್ಕಾಗಿ ಆಗಾಗ ಹೆಂಡತಿಯಲ್ಲಿ ಶೀಲವನ್ನು ಕೊಂಕಿಸಿ ಜಗಳವಾಡಿದ್ದ. ಸಂದೇಹಪಡುವ ಗಂಡನ ಜಗಳ ತಾಳಲಾರದೆ ಲಿಪಿಕಾ ಮಂಡಲ್ ತವರು ಮನೆಗೆ ಹೊರಟು ಹೋಗಿದ್ದಳು. ವಿಷಯ ತಿಳಿದ ಎರಡು ಕಡೆಯ ಕುಟುಂಬಸ್ಥರು ಇವರಿಬ್ಬರೊಂದಿಗೆ ಮಾತುಕತೆ ಆಡಿ, ರಾಜಿ ಮಾಡಿಸಿದರು; ಮತ್ತೆ ಒಟ್ಟಿಗೆ ಬಾಳುವಂತೆ ಮಾಡಿದ್ದರು.

ಆದರೆ ಇದೇ ತಿಂಗಳ 18ರಂದು ಮಾಣಿಕ್ ಘೋಷ್ ತನ್ನ ಪತ್ನಿಗೆ ಮೂರ್ಛೆ ತಪ್ಪಿದೆ ಎಂದು ತಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅಷ್ಟರಲ್ಲಿಯೇ ಪತ್ನಿ ಲಿಪಿಕಾ ಮಂಡಲ್ ತೀರಿಹೋಗಿದ್ದರು.ಇದೊಂದು ಸಹಜ ಸಾ-ವು ಎಂದು ಎಲ್ಲರೂ ನಂಬಿದ್ದರು. ಆದರೆ ಕುತ್ತಿಗೆಯ ಮೇಲಿನ ಹಸಿಯಾದ ಗಾಯ ರಹಸ್ಯ ಗುಟ್ಟನ್ನು ಹೇಳುತ್ತಿತ್ತು.ಪತಿ ಏನೋ ಮಾಡಿದ್ದಾನೆ ಎಂಬ ಸಂದೇಹವು ಎಲ್ಲೆಡೆ ಹರಡಿತ್ತು. ಆದರೆ ಯಾವುದೇ ಪುರಾವೆಗಳಿರಲಿಲ್ಲ.

ಇಂತಹ ಪಾಪಿ ತಂದೆಯ ಮಗಳು, ಲಿಪಿಕಾ ಮಂಡಲ್ ನ ತವರು ಮನೆಗೆ ಹೋಗಿದ್ದಾಗ ,ಅಜ್ಜ ಅಜ್ಜಿಯಲ್ಲಿ ತಾನು ಕಂಡ ದೃಶ್ಯವನ್ನು ಮುದ್ದಾದ ಭಾಷೆಯಲ್ಲಿ ಅರ್ಥವಾಗುವಂತೆ ವಿವರಿಸಿದ್ದಾಳೆ. ಅಲ್ಲಿಯವರೆಗೆ ಸಹಜ ಮರಣ ಎಂದೇ ನಂಬಲಾಗಿದ್ದ ವಿಷಯ ಸುಳ್ಳೆಂಬುದು ಅಜ್ಜ-ಅಜ್ಜಿಗೆ ಮನವರಿಕೆಯಾಯಿತು. ತಮ್ಮ ಅಳಿಯನೇ ಕೊಲೆ ಮಾಡಿದ್ದಾನೆ ಎಂದು ತಿಳಿಯಿತು. ತಕ್ಷಣವೇ ಪೊಲೀಸರಿಗೆ ದೂರು ನೀಡಿದ ಇವರು ಮೊಮ್ಮಗಳನ್ನು ಜೊತೆಯಲ್ಲಿ ಕರೆದೊಯ್ದಿದ್ದರು. ಪೊಲೀಸರ ಎದುರು ಕೂಡ ತನ್ನ ಅಪ್ಪನೇ ಅಮ್ಮನ ಕುತ್ತಿಗೆಯನ್ನು ಬಲವಾಗಿ ಅಡಚುತ್ತಿದ್ದದು,ಅಮ್ಮ ಒದ್ದಾಡುತ್ತಿದ್ದುದು, ನಂತರ ಅಮ್ಮನಿಂದ ಯಾವುದೇ ಶಬ್ದ ಬರಲಿಲ್ಲ ಎಂಬ ವಿಚಾರವನ್ನು ಎರಡುವರೆ ವರ್ಷದ ಪುಟ್ಟ ಬಾಲಕಿ ವಿವರಿಸಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಮಾಣಿಕ್ ಘೋಷ್ ತಾನೇ ಕೃತ್ಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

By admin

Leave a Reply

Your email address will not be published.