ಒಂದು ಲಕ್ಷ ಪಟಾಕಿಗಳನ್ನು ಸ್ವಿಪ್ಟ್ ಕಾರಿನಲ್ಲಿ ತುಂಬಿಸಿ ಸಿಡಿಸಿದ ಯುವಕ ಮುಂದೇನಾಯ್ತು ವಿಡಿಯೋ ನೋಡಿ

ದೀಪಾವಳಿ ಹಬ್ಬವೆಂದರೆ ಕಣ್ಣಿಗೆ ಮುದ ನೀಡುವ ಸಾಲು ಸಾಲು ದೀಪಗಳ ಬೆಳಕೊಂದೆಡೆಯಾದರೆ, ಕಿವಿಗೆ ಬಂದಪ್ಪಳಿಸುವ ಪಟಾಕಿಗಳ ಸದ್ದು ಇರುತ್ತದೆ. ಪಟಾಕಿ, ಸುರಬಾಣ, ನೆಲಚಕ್ರಗಳ ವಿಚಾರವಾಗಿ ವಾಹನ, ಮನೆಯ ಛಾವಣಿ, ಚಿಕ್ಕಪುಟ್ಟ ಮಕ್ಕಳು ಎನ್ನುತ್ತಾ ಎಷ್ಟೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರು ಸಾಲದು. ಅಲ್ಲೊಬ್ಬರು, ಇಲ್ಲೊಬ್ಬರು ಪಟಾಕಿ ಹಚ್ಚುವಾಗ ಹೊಸ ಪ್ರಯೋಗಗಳನ್ನು ಮಾಡುವುದು ಹೊಸತೇನಲ್ಲ.

ಮರಕ್ಕೆ ಗೋಲಾಕಾರವಾಗಿ ಪಟಾಕಿ ಕಟ್ಟಿ, ರಸ್ತೆಯಲ್ಲಿ ಉದ್ದದಾಗಿ ಪಟಾಕಿ ಸರವಿಟ್ಟು ಢಾಂ ಢೂಂ ಎಂಬ ಸದ್ದಿಗೆ ಮಜಾ ತೆಗೆದುಕೊಳ್ಳುವವರಿದ್ದಾರೆ. ಬೇಕಂತಲೇ ತಮ್ಮ ಮೌಲ್ಯಯುತ ವಸ್ತುಗಳ ಮೇಲೆ ಪಟಾಕಿ ಸಿಡಿಸುವ ಪ್ರಯೋಗ ಮಾಡುವವರ ಸಂಖ್ಯೆ ಕಡಿಮೆಯೇ. ಆದರೆ ಇಲ್ಲೊಬ್ಬ ಯೂಟ್ಯೂಬರ್ ತನ್ನ ಕಾರಿನ ಮೇಲೆ ಒಂದು ಲಕ್ಷ ರೂಪಾಯಿಗಳ ಪಟಾಕಿ ಸರಗಳನ್ನು ಜೋಡಿಸಿ ಸಿಡಿಸಿದ್ದಾನೆ..

ಯೂಟ್ಯೂಬ್ ನಲ್ಲಿ ತಮ್ಮ ವಿಡಿಯೋಗಳಿಗೆ ಹೆಚ್ಚೆಚ್ಚು ವೀವ್ಸ್ ಬರಲೆಂದು ಏನೇನೆಲ್ಲ ಮಾಡುವ ಮಂದಿಯಲ್ಲಿ ಅಮಿತ್ ಶರ್ಮಾ ಕೂಡ ಒಬ್ಬನು. ರಾಜಸ್ಥಾನದ ಅಲ್ವಾರನಲ್ಲಿ ದೊಡ್ಡದಾದ ಬಯಲು ಪ್ರದೇಶದಲ್ಲಿ ಸುಜುಕಿ ಸ್ವಿಫ್ಟ್ ಕಾರನ್ನಿರಿಸಿ, ಕಾರಿನ ಹೊರ ಮೇಲ್ಮೈ ಮೇಲೆ ಪಟಾಕಿಗಳನ್ನು, ಹೆಡ್ ಲೈಟ್ ಮತ್ತು ಗಾಜನ್ನು ಹೊರತುಪಡಿಸಿ ಒಂದಿಂಚು ಬಿಡದಂತೆ ಜೋಡಿಸಿದ್ದಾನೆ. ಪಟಾಕಿಗಳಿಂದ ಅಲಂಕೃತವಾದ ಕಾರಿನ ಎದುರು ನಿಂತು 1,2,3 ಎನ್ನುತ್ತಾ ಅಷ್ಟು ಪಟಾಕಿಗಳನ್ನು ಒಮ್ಮೆಲೇ ಸ್ಪೋಟಿಸಿದ್ದಾನೆ. ದೊಡ್ಡದಾದ ಬೆಂಕಿಯಿಂದ ಕಿಡಿ ಕಾರುತ್ತಾ ನಿಂತ ಕಾರು; ಸ್ವಲ್ಪ ಸಮಯದವರೆಗೂ ನಿಲ್ಲದೆ ಇರುವ ಜೋರಾದ ಸದ್ದು; ನಂತರ ಕಪ್ಪಾಗಿ ತಿರುಗಿದ ಕಾರಿನ ಬಿಳಿಯ ಬಣ್ಣ; ಪಟಾಕಿ ಸಿಡಿದರು ಹಾನಿಗೊಳಗಾಗದ ಕಾರಿನ ಗಾಜು; ಕಾರಿನ ಬಾಗಿಲನ್ನು ಮೆಲ್ಲಗೆ ತೆರೆದಾಗ ದಟ್ಟವಾಗಿ ಹೊರಬಂದ ಬೂದು ಬಣ್ಣದ ಹೊಗೆ…

ಇವಿಷ್ಟನ್ನು ಸ್ಪಷ್ಟವಾಗಿ ಸೆರೆಹಿಡಿದು ಯೂಟ್ಯೂಬಲ್ಲಿ ವಿಡಿಯೋ ಶೇರ್ ಮಾಡಿದ ಅಮಿತ್ ಶರ್ಮಾ, ಸ್ನೇಹಿತರೊಂದಿಗೆ ಮತ್ತದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಒಂದು ಲಕ್ಷ ರೂಪಾಯಿಗಳ ಪಟಾಕಿಗಳನ್ನು ಸಿಡಿಸಿದರೂ ಕಾರಿನ ಎಂಜಿನ್ ಯಾವುದೇ ಹೊಡೆತಕ್ಕೊಳಗಾಗಿಲ್ಲ ಎಂಬುದು ಖಚಿತವಾಗಿದೆ. ಸಾಮಾನ್ಯವಾಗಿ ಹೊರಮೈಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಎಂಜಿನ್ ಕೂಡ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಳೆಯ ಮಾದರಿಯಂತೆ ಗೋಚರಿಸುವ ಈ ಕಾರಿಗೆ ಯಾವುದೇ ಮೇಜರ್ ಹಾನಿಯಾಗಿಲ್ಲ. ಅಲ್ಲದೆ ಈ ಪ್ರಯೋಗವು ಬಯಲಿನಲ್ಲಿ ನಡೆದಿದ್ದರಿಂದ ಯಾರಿಗೂ ಹಾನಿಯಾಗಲಿಲ್ಲ. ಈ ವಿಡಿಯೋ ವೈರಲ್ ಆಗಿದ್ದು, ಪೋಷಕರು ತಮ್ಮ ಮಕ್ಕಳು ಇಂತಹ ವಿಡಿಯೋಗಳನ್ನು ನೋಡಿ ತಾವು ಮಾಡಲು ಪ್ರಯತ್ನಿಸದಂತೆ ಜಾಗರೂಕರಾಗಿ ನೋಡಿಕೊಳ್ಳಬೇಕು. ಯೂಟ್ಯೂಬರ್ಸ್ ಗಳು ಕೂಡ ವಿಡಿಯೋವನ್ನು ಮಾಡುವಾಗ ‘ಮುಂದೆ ಅನಾಹುತಕ್ಕೆಡೆಮಾಡಿಕೊಡಬಹುದೇ?’ ಎಂದು ಯೋಚಿಸಬೇಕು.

Leave a Comment

error: Content is protected !!