Ambani: ಅಂಬಾನಿ ಮನೆಗೆ ಬಂತು ನೋಡಿ ಹೊಸ ಕಾರ್. ಇದರ ಬೆಲೆ ಕೇಳಿದರೆ ನೀವು ಕೂಡ ಶಾ’ ಕ್!

Mukesh Ambani ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬುದಾಗಿ ಕೇಳಿದಾಗ ಕೇಳಿಬರುವಂತಹ ಮೊದಲ ಹೆಸರು ನಮ್ಮ ಭಾರತದ ಹೆಮ್ಮೆಯ ಮುಖೇಶ್ ಅಂಬಾನಿ(Mulesh Ambani). ಆ ಮನುಷ್ಯ ಯಾವುದೇ ವಸ್ತುವನ್ನು ಖರೀದಿಸಲು ಬಯಸಿದ್ರೆ ಅದನ್ನು ಆತನಿಗೆ ಕರಿಸಲು ಕೇವಲ ಸೆಕೆಂಡುಗಳ ಸಮಯ ಮಾತ್ರ ಸಾಕು ಅಷ್ಟರಮಟ್ಟಿಗೆ ಅವರು ಪವರ್ಫುಲ್ ಹಾಗೂ ಶ್ರೀಮಂತ ಆಗಿದ್ದಾರೆ.

ಕೇವಲ ಹಣವನ್ನು ದುಬಾರಿ ವಸ್ತುಗಳಿಗಾಗಿ ಖರ್ಚು ಮಾಡುವುದರಲ್ಲಿ ಮಾತ್ರವಲ್ಲದೆ ಅದೇ ಕೋಟ್ಯಂತರ ರೂಪಾಯಿ ಹಣದಿಂದ ಬಡ ಮಕ್ಕಳ ಶಿಕ್ಷಣ ಆರೋಗ್ಯ ಸೇರಿದಂತೆ ಹಲವಾರು ಜನಪಯೋಗಿ ಕಾರ್ಯಗಳನ್ನು ಮಾಡುವಲ್ಲಿ ಕೂಡ ಮುಕೇಶ್ ಅಂಬಾನಿ(Mukesh Ambani) ಹಾಗು ಅವರ ಕುಟುಂಬ ಸದಾ ಮುಂದಿರುತ್ತದೆ. ಇದೇ ರೀತಿ ಈಗ ಅವರು ಖರೀದಿಸಿರುವಂತಹ ಹೊಸ ಕಾರಿನ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿದೆ.

ಅತ್ಯಂತ ದುಬಾರಿ ಬಂಗಲೆಯಿಂದ ಪ್ರಾರಂಭವಾಗಿ ದುಬಾರಿ ಪ್ರೈವೇಟ್ ತನಕ ಎಲ್ಲದರಲ್ಲಿ ಕೂಡ ಮುಖೇಶ್ ಅಂಬಾನಿ ಅವರ ಹೆಸರು ಕೇಳಿ ಬರುತ್ತದೆ ಈಗ ಅವರು ಖರೀದಿಸಿರುವ ಹೊಸ ಕಾರು ಕೂಡ ಕೋಟ್ಯಂತರ ರೂಪಾಯಿ ಮೌಲ್ಯವಾಗಿದ್ದು ಅದು ಕೂಡ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಂಡಿದೆ. ಅಷ್ಟಕ್ಕೂ ಆ ಕಾರು ಯಾವುದು ಹಾಗೂ ಅದರ ಬೆಲೆ ಎಷ್ಟು ಕೋಟಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದೇ ಸಂಸ್ಥೆಯ ಬೇರೆ ಮಾಡೆಲ್ ಕಾರ್ ಅನ್ನು ಈಗಾಗಲೇ ಮೂರು ಬಾರಿ ಖರೀದಿಸಿರುವ ಮುಖೇಶ್ ಅಂಬಾನಿ ಈಗ ಮತ್ತೆ ಅದರ ಟಾಪ್ ಎಂಡ್ ಮಾಡೆಲ್ ಅನ್ನು ಖರೀದಿಸಿದ್ದಾರೆ. ಪ್ರತಿಷ್ಠಿತ ಬೆನ್ಟ್ಲೆ(Bentley) ಸಂಸ್ಥೆಯ ಬೆಂಟ್ಯಾಗಾ(Bentayga) ಕಾರ್ ಅನ್ನು 4.5 ಕೋಟಿ ನೀಡಿ ಖರೀದಿಸಿದ್ದಾರೆ. ಸಾಕಷ್ಟು ಐಷಾರಾಮಿ ಕಾರುಗಳಿದ್ದರೂ ಕೂಡ ಮತ್ತೆ ಮತ್ತೆ ಮುಕೇಶ್ ಅಂಬಾನಿ ಸುತ್ತಿರುವುದು ಯಾಕೆ ಎನ್ನುವುದಾಗಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Leave a Comment

error: Content is protected !!