ಅಕ್ಷತಾ ಮೂರ್ತಿ ಬ್ರಿಟನ್ ರಾಜ ಚಾರ್ಲ್ಸ್ ಗಿಂತ ದುಪ್ಪಟ್ಟು ಶ್ರೀಮಂತೆ. ಸುಧಾ ಮೂರ್ತಿ ಮಗಳು ಇಷ್ಟೊಂದು ಹಣ ಮಾಡಿದ್ದು ಹೇಗೆ

ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಕೆಯ ಪ್ರಧಾನಿಯಾಗಲಿದ್ದಾರೆ ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡಬೇಕಾದ ವಿಚಾರ. ರಿಷಿ ಸುನಕ್ ಅವರು ಜಗತ್ತೇ ಅವರತ್ತ ನೋಡುವ ಮಟ್ಟದಲ್ಲಿ ಬೆಳೆದಿದ್ದಾರೆ ಎಂದರೆ ಕರ್ನಾಟಕದವರ ಪಾಲಿಗೆ ಒಂದು ಪಟ್ಟು ಹೆಚ್ಚು ಸಂತಸತಂದಿದೆ. ಏಕೆಂದರೆ ರಿಷಿ ಸುನಕ್ ಇನ್ಫೋಸಿಸ್ ಒಡೆಯರ ಪುತ್ರಿ ಅಕ್ಷತಾ ಅವರ ಪತಿ. ಅಂದರೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಅಳಿಯ..

ಒಬ್ಬ ವ್ಯಕ್ತಿಯು ಪ್ರಖ್ಯಾತವಾಗುತ್ತಿದ್ದಾನೆಂದರೆ, ಆತನ ವಯಕ್ತಿಕ ವಿಷಯಗಳ ಬಗೆಗೆ, ಆತ ನಡೆದು ಬಂದ ಹಾದಿಯ ಬಗೆಗೆ ಜನ ಕುತೂಹಲ ತೋರಿಸುತ್ತಾರೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹುಡುಕುತ್ತಲೇ ಇರುತ್ತಾರೆ. ಇದೀಗ ಸುದ್ದಿಯಲ್ಲಿರುವ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಅವರ ಹಣ, ಆಸ್ತಿಗಳ ವಿಚಾರವಾಗಿ ಬಹಳಷ್ಟು ಜನ ಆಸಕ್ತಿ ತೋರಿದ್ದಾರೆ ಎಂಬುದು ತಿಳಿದ ವಿಷಯ.

ಯುನೈಟೆಡ್ ಕಿಂಗ್ಡಂ ಪ್ರಧಾನಿಯಾಗಲಿರುವ ರಿಷಿ ಸುನಕ್ ಅವರು ‘ಬ್ರಿಟನ್ ನ ಏಕತೆ, ಸ್ಥಿರತೆಯೇ ನನ್ನ ಮೊದಲ ಆದ್ಯತೆ’ ಎಂದು ಅಭಯ ನೀಡಿ, ಅಲ್ಲಿನ ಪ್ರಜೆಗಳ ನಂಬಿಕೆಗೆ ಪಾತ್ರರಾಗಿದ್ದಾರೆ. ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್ಸ್ ಗಳಷ್ಟಿವೆ(68, 36,20,03,400ರೂ.) ಯುಕೆಯ ರಾಜ ಚಾರ್ಲ್ಸ್ lll ಹಾಗೂ ಪತ್ನಿ ಕ್ಯಾಮಿಲ್ಲಾ ಅವರ ಒಟ್ಟು ಸಂಪತ್ತು 350 ಮಿಲಿಯನ್ ಪೌಂಡ್ಸ್ ಎಂದು ಅಂದಾಜಿಸಲಾಗಿದೆ. ಅಂದರೆ ರಿಷಿ ಸುನಕ್ ಅವರು ಯುಕೆ ಕಿಂಗ್ ಗಿಂತ ಎರಡು ಪಟ್ಟು ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ…

2020ರ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಅವರ ಹೆಸರು ಮಿಂಚಿದ್ದು ಯುಕೆಯ ರಾಜಕಾರಣಿಗಳಲ್ಲಿ ಒಂದು ಹೆಜ್ಜೆ ಮುಂದಿರುವವರು ಇವರೇ. ರಿಷಿ ಸುನಕ್ ಅವರು £17 ಮಿಲಿಯನ್ ಬೆಲೆ ಬಾಳುವ ನಾಲ್ಕು ಬಂಗಲೆಗಳನ್ನು ಹೊಂದಿದ್ದಾರೆ. ಇವರ ಪತ್ನಿ ಅಕ್ಷತಾ, ಮಕ್ಕಳಾದ ಕೃಷ್ಣಾ ಮತ್ತು ಅನೌಷ್ಕಾ, ಈ ಮೂವರು ಪಶ್ಚಿಮ ಲಂಡನ್ ನ ಕೆನ್ಸಿಂಗ್ಟನ್ ಅಲ್ಲಿರುವ ಮನೆಯಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ಐದು ಬೆಡ್ ರೂಮ್ ಗಳನ್ನು ಹೊಂದಿರುವ ಈ ಮನೆಯು ಸುಂದರ ಒಳಾಂಗಣಗಳನ್ನು ಹೊಂದಿ, ಏಳು ಮಿಲಿಯನ್ಗಳಿಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ.

ವೀಕೆಂಡ್ ನಲ್ಲಿ ಈ ಕುಟುಂಬವು ಉತ್ತರ ಯಾರ್ಕಷೈರಾದ ರಿಚ್ಮಂಡ್ ಕ್ಷೇತ್ರದ, ಜಾರ್ಜಿಯನ್ ಮೇನರ್ ಮನೆಯಲ್ಲಿ ಖುಷಿಯಿಂದ ಸಮಯ ಕಳೆಯುತ್ತಾರೆ. ಈ ಮನೆಯ ಬೆಲೆ ಎರಡು ಮಿಲಿಯನ್ಗಳಿಗಿಂತಲೂ ಹೆಚ್ಚು. ಇವಿಷ್ಟೇ ಅಲ್ಲದೆ ಈ ದಂಪತಿಗಳು, ಪಶ್ಚಿಮ ಲಂಡನ್ ಓಲ್ಡ್ ಬ್ರಾಂಪ್ಟನ್ ರಸ್ತೆಯಲ್ಲೊಂದು ಫ್ಲಾಟ್ ಮತ್ತು ಸಾಂಟಾ ಮೋನಿಕಾ ಬೀಚ್ ಪೆಂಟ್ ಹೌಸ್ ಅನ್ನು ಹೊಂದಿದ್ದಾರೆ. ಇವು 5 ಮಿಲಿಯನ್ಗಳಿಗಿಂತಲೂ ಹೆಚ್ಚಿನದಾಗಿ ಬೆಲೆಬಾಳುತ್ತದೆ. ಒಟ್ಟಿನಲ್ಲಿ ಯುಕೆಯ ರಾಜ ಚಾರ್ಲ್ಸ್ lll ಮತ್ತು ಕ್ಯಾಮೆಲ್ಲಾ ದಂಪತಿಗಳಿಗಿಂತ ರಿಷಿ ಸುನಕ್, ಅಕ್ಷತಾ ದಂಪತಿಗಳು ಹೆಚ್ಚು ಶ್ರೀಮಂತರಿರುವುದು ಖಚಿತ.

Leave a Comment

error: Content is protected !!