35 ವರ್ಷಗಳ ನಂತರ ಹೈಸ್ಕೂಲ್ ಕ್ಲಾಸ್ ಮೇಟ್ ಗಳನ್ನು ಮದುವೆ ಮಾಡಿಸಿದ ಸ್ನೇಹಿತರು

ಕೇರಳದಲ್ಲಿ ನಡೆದಿರುವ ಒಂದು ವಿಶೇಷ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೈಸ್ಕೂಲ್ನಲ್ಲಿ ಓದುತ್ತಿದ್ದ ಸಹಪಾಠಿಗಳಿಬ್ಬರು 35 ವರ್ಷಗಳ ನಂತರ ಸ್ನೇಹಿತರ ಮಧ್ಯಸ್ಥಿಕೆಯಲ್ಲಿ ಈಗ ಮದುವೆ ಆಗಿದ್ದಾರೆ. ಮದುವೆ ಆಗಿರುವ ಜೋಡಿಯ ಹೆಸರು ಹರಿದಾಸನ್ ಹಾಗೂ ಸುಮತಿ ಎನ್ನುವುದಾಗಿ. ಇವರಿಬ್ಬರೂ ಕೂಡ 86 ಹಾಗೂ 87ನೇ ಬ್ಯಾಚಿನ ಹೈ ಸ್ಕೂಲ್ ವಿದ್ಯಾರ್ಥಿಗಳಾಗಿದ್ದರು. ಹರಿದಾಸನ್ ಅವರು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖಂಡರಾಗಿದ್ದರೆ ಸುಮತಿ ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತೆ ಆಗಿದ್ದರು.

ಸದ್ಯಕ್ಕೆ ಹರಿದಾಸನ್ ಅವರು ಕಲಾಮಂದಳಂ ನ ತಿಮಿಲಾ ದ ಪರಿಣಿತರಾಗಿದ್ದಾರೆ. ಇನ್ನು ಈ ಕಡೆ ಸುಮತಿಯವರು ಪನ್ನಿತ್ತಡಂ ಶಾಖೆಯ ಸಿಪಿಎಂನ ಸದಸ್ಯರಾಗಿದ್ದಾರೆ. ಹರಿದಾಸನ್ ಹಾಗೂ ಸುಮತಿ ಇತ್ತೀಚಿಗಷ್ಟೇ ಅಂದರೆ ನವೆಂಬರ್ 14ರಂದು ಮದುವೆಯಾಗಿದ್ದಾರೆ.

ಇವರು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು ಇಲ್ಲಿಯೇ ಸ್ನೇಹಿತರು ಇವರಿಬ್ಬರೂ ಇನ್ನೂ ಕೂಡ ಮದುವೆ ಆಗದೆ ಅವಿವಾಹಿತರಾಗಿ ಉಳಿದುಕೊಂಡಿದ್ದಾರೆ ಎಂಬುದಾಗಿ ತಿಳಿದುಕೊಂಡರು. ಇವರ ಕ್ಲಾಸ್ ಲೀಡರ್ ಆಗಿದ್ದ ಸತೀಶನ ಎನ್ನುವವರು ಇವರಿಬ್ಬರು ಮದುವೆ ಆಗುವುದರ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಬಹುದಲ್ಲ ಎನ್ನುವ ವಿಜ್ಞಾಪನೆ ಇಟ್ಟಾಗ ಎಲ್ಲಾ ಸಹಪಾಠಿಗಳು ಕೂಡ ಒಪ್ಪಿಗೆ ನೀಡುತ್ತಾರೆ. ಮೊದಲಿಗೆ ಇಬ್ಬರೂ ಕೂಡ ಸುಖರ ಬೇಡ ಎನ್ನುವುದಾಗಿ ನಿರಾಕರಿಸುತ್ತಾರೆ ಆದರೆ ಪ್ರಯತ್ನ ಬಿಡದ ಸ್ನೇಹಿತರು ಅವರನ್ನು ಈ ಮದುವೆಗೆ ಒಪ್ಪಿಸಿ ದೇವಸ್ಥಾನ ಒಂದರಲ್ಲಿ ಮದುವೆ ಮಾಡಿಸುತ್ತಾರೆ.

ಇಬ್ಬರೂ ಕೂಡ ಒಂದೇ ತರಗತಿಯಲ್ಲಿ ಓದಿರುವ ಕಾರಣದಿಂದಾಗಿ ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ವೈಯಕ್ತಿಕ ಜೀವನದಲ್ಲಿ ರಾಜಕೀಯ ಜೀವನವನ್ನು ಸೇರಿಸಲು ಹೋಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇನ್ನು ಹರಿದಾಸನ ಕೂಡ ನಾನು ಒಂಟಿಯಾಗಿದ್ದೆ ಎನ್ನುವ ದುಃಖ ನನ್ನಲ್ಲಿತ್ತು ಈಗ ಸ್ನೇಹಿತರು ಮದುವೆ ಮಾಡಿಸಿ ನನ್ನ ಜೀವನದಲ್ಲಿ ಒಬ್ಬ ಒಡನಾಡಿ ಸಿಗುವಂತೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!