ಒಂದು ಕಾಲದ ಕನ್ನಡ ಚಿತ್ರರಂಗದ ಖ್ಯಾತ ನಟ ಅಬ್ಬಾಸ್ ಈಗ ಮಾಡ್ತಿರೋದೇನು ಗೊತ್ತಾ? ಇಂಥ ಪರಿಸ್ಥಿತಿ ಬರಬಾರದಿತ್ತು

Actor Abbas About Present work 90ರ ದಶಕದಲ್ಲಿ ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ನಟ ಅಬ್ಬಾಸ್ ಅವರು ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಶಸ್ಸನ್ನು ಪಡೆದುಕೊಂಡಿದ್ದರು. ತಮಿಳಿನ ಕಾದಲ್ ದೇಶಂ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಅಬ್ಬಾಸ್ ಕನ್ನಡದಲ್ಲಿ ಶಾಂತಿ ಶಾಂತಿ ಸಿನಿಮಾದಲ್ಲಿ ನಟಿಸುವ ಮೂಲಕ ಜನಮನ್ನಣೆಯನ್ನು ಪಡೆದುಕೊಳ್ಳುತ್ತಾರೆ.

ಆದರೆ ಈಗ ಅಭ್ಯಾಸ ಅವ್ರು ಏನು ಮಾಡುತ್ತಿದ್ದಾರೆ ಎಂಬ ಸುಳಿವು ಯಾರಿಗೂ ಇಲ್ಲ. ಕೆಲವು ವರ್ಷಗಳ ಹಿಂದಷ್ಟೇ ವೈರಲ್ ಆಗಿರುವ ವಿಡಿಯೋದಲ್ಲಿ ಅಬ್ಬಾಸ್ ಅವರು ತಮ್ಮ ಕುಟುಂಬದ ಜೊತೆಗೆ ನ್ಯೂಜಿಲ್ಯಾಂಡ್ ನ ಆಕ್ಲಾಂಡ್ ನಲ್ಲಿ ಇದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಅವರಿಗೆ ಸಾಕಾಗಿ ಹೋಗಿತ್ತಂತೆ ಅದಕ್ಕಾಗಿ ಹೊರಗೆನಾದರೂ ಹೋಗಿ ಮಾಡಬೇಕೆಂಬ ಯೋಚನೆ ಅವರಲ್ಲಿತ್ತು. ಒಮ್ಮೆ ಯಾರದ್ದೋ ಮದುವೆ ಕಾರ್ಯಕ್ರಮಕ್ಕೆ ನ್ಯೂಜಿಲೆಂಡ್ ಗೆ ಹೋದ ಸಂದರ್ಭದಲ್ಲಿ ಅಲ್ಲಿನ ಪರಿಸರ ಇಷ್ಟವಾಗಿ ಅಲ್ಲಿಯೇ ಇದ್ದುಬಿಟ್ಟರಂತೆ. ನ್ಯೂಜಿಲೆಂಡ್ಗೆ ಹೋಗಿದ್ದ ಆರಂಭಿಕ ದಿನಗಳಲ್ಲಿ ಅಬ್ಬಾಸ್ ಅವರಿಗೆ ದಿನಗಳು ಅಷ್ಟೊಂದು ಸುಲಭ ವಾಗಿರಲಿಲ್ಲ.

ಮೊದಲಿಗೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ನಂತರ ಅಲ್ಲಿ ವಾಶ್ರೂಮ್ ಅನ್ನು ಕೂಡ ತೊಳೆಯಬೇಕಾದಂತಹ ಪರಿಸ್ಥಿತಿ ಅವರಿಗೆ ಒದಗಿ ಬಂದಿತ್ತು. ಮೊದಮೊದಲಿಗೆ ಅಬ್ಬಾಸ್ ಅವರಿಗೆ ತಮ್ಮ ಜೀವನವನ್ನೇ ಮುಗಿಸಿಕೊಳ್ಳುವ ನಿರ್ಧಾರವನ್ನು ಮಾಡುವ ಆಲೋಚನೆ ಕೂಡ ಬಂದಿತ್ತು.

ಮೋಟಾರ್ ಬೈಕ್ ಮೆಕಾನಿಕ್ ಆಗಿ ಕೂಡ ನ್ಯೂಜಿಲ್ಯಾಂಡ್ ನಲ್ಲಿ ಅಬ್ಬಾಸ್ ಅವರು ಕೆಲಸ ಮಾಡಿದ್ದಾರಂತೆ. ಸದ್ಯಕ್ಕೆ ಅಬ್ಬಾಸ್ ಅವರು ಕಾಲ್ ಸೆಂಟರ್ ನಲ್ಲಿ ಅನಾಲಿಸ್ಟ್ ಆಗಿ ಹೊಸದಾಗಿ ಸೇರುವವರಿಗೆ ತರಬೇತಿ ನೀಡುತ್ತಿದ್ದೇನೆ ಎಂಬುದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಯುವ ಉದಯೋನ್ಮುಖ ನಟರಲ್ಲಿ ಒಬ್ಬರಾಗಿದ್ದ ಅಬ್ಬಾಸ್ ಅವರು ಇಷ್ಟೊಂದು ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಅವರು ಕನಸು ಮನಸಿನಲ್ಲಿ ಕೂಡ ಊಹಿಸಿರಲು ಸಾಧ್ಯವಿಲ್ಲ.

ಚಪ್ಪಲಿ ಎಸೆದವರ ವಿರುದ್ಧ ಹುಬ್ಬಳ್ಳಿಯಲ್ಲಿ ನಿಂತು ಡಿ ಬಾಸ್ ಓಪನ್ ಚಾಲೆಂಜ್ ಹಾಕಿ ಹೇಳಿದ್ದೇನು ಗೊತ್ತಾ..

ಸ್ವತಹ ಅಬ್ಬಾಸ್ ಅವರೇ ಹೇಳುವಂತೆ ನಾಯಕನಟನಾಗಿದ್ದ ಸಂದರ್ಭದಲ್ಲಿ ನನಗೆ ಸಾಕಷ್ಟು ಅಹಂ ಇತ್ತು. ಆದರೆ ಜೀವನ ನಂತರದ ದಿನಗಳಲ್ಲಿ ನನಗೆ ಪಾಠವನ್ನು ಕಲಿಸಿದೆ ಎಂಬುದಾಗಿ ಹೇಳುತ್ತಾರೆ. ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ಹೊರ ಬಂದಿದ್ದೇನೆ ಸಾಮಾನ್ಯ ಜೀವನ ನಡೆಸಿದರು ಕೂಡ ನನಗೆ ಮನಸ್ಸಿಗೆ ತೃಪ್ತಿ ಇದೆ ಎಂಬುದಾಗಿ ಅಬ್ಬಾಸ್ ಹೇಳುತ್ತಾರೆ. ಒಂದು ಕಾಲದ ಖ್ಯಾತ ನಟ ಈಗ ಹೀಗೆ ಸಾಮಾನ್ಯರಂತೆ ಜೀವನ ನಡೆಸುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!