ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ ಮನೆಗೆ ಹೋಗಿ ಬದುಕು ನಡೆಸುವುದುಕ್ಕೆ ದಾರಿ ತಿಳಿಯದೆ ಬಾವಿಯಲ್ಲಿರುವ ಕಪ್ಪೆಯಂತೆ ಹಿಂದೆ ಮುಂದೆ ತಿಳಿಯದೆ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ಪೂಜಾ ಎಂಬ 22 ವರ್ಷ ವಯಸ್ಸಿನ ಮಹಿಳೆ ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣದಲ್ಲಿ ತನ್ನ ಜೀವನವನ್ನ ಅಂತ್ಯಗೊಳಿಸಿಕೊಂಡಿದ್ದಾಳೆ. ಮದುವೆಯಾದ ಕೆಲವೇ ವರ್ಷದಲ್ಲಿ ಪೂಜಾ ಜೀವನದಲ್ಲಿ ಆದ ಬದಲಾವಣೆಗೆ ಈಕೆ ಇಂತಹ ಕಟು ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ. ಪೂಜಾ ಮದುವೆಯಾದ ನಂತರ ಪಟ್ಟ ಕಷ್ಟವನ್ನು ಕೇಳಿದರೆ ನಿಜಕ್ಕೂ ಮನ ಕಲಕುತ್ತೆ. ಇಪ್ಪತ್ತನೇ ವಯಸ್ಸಿನಲ್ಲಿ ಪೂಜಾಗೆ ಮಂಜುನಾಥ್ ನೊಂದಿಗೆ ಮದುವೆ ಮಾಡಲಾಗಿತ್ತು. ಚಿಕ್ಕ ವಯಸ್ಸಿಗೇ ಪೂಜಾ ಗೆ ಮದುವೆ ಮಾಡಲಾಗಿತ್ತು.

ಪೂಜಾ ತುಮಕೂರಿನ ಮೂಲದ ಹುಡುಗಿ. ಮದುವೆಯಾದ ನಂತರ ಪೂಜಾ ತನ್ನ ಗಂಡ ಮಂಜುನಾಥ್ ಮತ್ತು ಅತ್ತೆಯ ಜೋತೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಳು. ತನ್ನ ಗಂಡ ಮತ್ತು ಅತ್ತೆಯ ಜೊತೆ ಪೂಜಾ ಆರಂಭದಲ್ಲಿ ಸುಖ ಜೀವನವನ್ನು ನಡೆಸುತ್ತಿದ್ದಳು. ಮೊದಲ ಕೆಲ ತಿಂಗಳು ಕಾಲ ಇವರ ಜೀವನ ಸುಖಕರವಾಗಿತ್ತು. ನಂತರ ಶುರುವಾಯ್ತು ನೋಡಿ ಪೂಜಾಗೆ ಕಂಟಕ. ಪೂಜಾಳ ಮೊದಲ ಮಗುಗೆ ಗ’ರ್ಭಪಾ’ತವಾಯ್ತು. ನಂತರ ಅದಾದ ಮೇಲೆ ದುರದೃಷ್ಟವಶಾತ್ ಎರಡನೆ ಮಗುವೂ ಕೂಡ ಆರೇ ತಿಂಗಳಲ್ಲಿ ಕೊನೆಯುಸಿರು ಬಿಟ್ಟಿತು.

ಮದುವೆಯಾಗಿ 2 ವರ್ಷವಾದರೂ ಒಂದು ಮಗೂನ ಹೇರೋಕೆ ಆಗಲಿಲ್ಲ ಅಂತ ಪೂಜಾಳ ಅತ್ತೆ ರಂಪಾಟ ಶುರು ಮಾಡಿದಳು. ದಿನ ಕಳೆದಂತೆ ಪೂಜಾಳ ಪತಿ ಮಂಜುನಾಥ್​ ಮತ್ತು ಅತ್ತೆ ಶ್ಯಾಮಲಾರಿಂದ ಕಿರು’ಕು’ಳ ಶುರುವಾಗಲು ಆರಂಭವಾಯಿತು. ನೀನು ಪಾಪದವಳು ನೀನು ಅನಿಷ್ಠ ಅಂತೆಲ್ಲ ಪೂಜಾಗೆ ಅತ್ತೆಯಿಂದ ಬೈಗುಳಗಳು ಶುರುವಾದವು . ಅತ್ತೆ ಮತ್ತು ಅಣ್ಣಂದಿರ ಟೀಕೆಗಳನ್ನು ಸಹಿಸಿಕೊಳ್ಳುವಷ್ಟು ಆತ್ಮಸ್ಥೈರ್ಯ ಇರಲಿಲ್ಲ. ದಿನೇದಿನೆ ಪೂಜಾ ಮಾನಸಿಕವಾಗಿ ಸ್ಥೈರ್ಯ ಕಳೆದುಕೊಂಡಳು. ಪೂಜಾ ಬೆಳಿಗ್ಗೆ ಹಾಲುಕ್ಕಿಸಿದ ಕೆಲವೇ ಸೆಕೆಂಡುಗಳಲ್ಲಿ ಆ’ತ್ಮಹ’ತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಳು . ಇದೀಗ ಪೊಲೀಸರು ಮತ್ತೆ ಶ್ಯಾಮಲಾ ಮತ್ತು ಗಂಡ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

Leave a Comment

error: Content is protected !!