ಬ್ಯಾನ್ ಆಗ್ತಿದೆಯಾ 2000 ರೂಪಾಯಿ ನೋಟ್? ಸಿಕ್ತು ನೋಡಿ ಸಂಪೂರ್ಣ ಮಾಹಿತಿ!

2000 Rupees Note 2016ರಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಳೆಯ 500 ಹಾಗೂ ಸಾವಿರ ರೂಪಾಯಿಗಳ ನೋಟನ್ನು ನರೇಂದ್ರ ಮೋದಿ(Narendra Modi) ನೇತೃತ್ವ ಕೇಂದ್ರ ಸರ್ಕಾರ ರದ್ದು ಮಾಡಿ ಅದರ ಜಾಗಕ್ಕೆ ಹೊಸ ಐನೂರು ಹಾಗೂ 2,000 ನೋಟುಗಳನ್ನು ಜಾರಿಗೆ ತಂದಿತ್ತು. ಈ ಸಂದರ್ಭದಲ್ಲಿ ಎಟಿಎಂ ಮುಂದೆ ನಿಂತು ಹಣ ಪಡೆಯಲು ಸಾಮಾನ್ಯರು ಸಾಕಷ್ಟು ಕಷ್ಟವನ್ನು ಪಟ್ಟಿದ್ದರು. ಇದೇ ರೀತಿ ಈಗ ನಾಗರಿಕರಲ್ಲಿ ಮತ್ತೊಂದು ಅನುಮಾನ ಕೂಡ ಮೂಡಲು ಪ್ರಾರಂಭವಾಗಿದೆ.

ಇತ್ತೀಚಿನ ದಿನಗಳಲ್ಲಿ ನೀವು ಕರೆಕ್ಟ್ ಆಗಿ ನೋಡಿದರೆ ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಹಾಗೂ ಕೆಲವೊಂದು ಎಟಿಎಂ ಗಳಲ್ಲಿ ಕೂಡ ಎರಡು ಸಾವಿರ ರೂಪಾಯಿ(2000 Rupees Note) ನೋಟುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ನೋಟ್ ಕೂಡ ಬ್ಯಾನ್ ಆಗಿದೆ ಎನ್ನುವುದಾಗಿ ಜನಸಾಮಾನ್ಯರಲ್ಲಿ ಅನುಮಾನ ಮೂಡಲು ಪ್ರಾರಂಭವಾಗಿದೆ.

ಈಗಾಗಲೇ ಮೊದಲಬಾರಿ ನೋಟ್ ಬ್ಯಾನ್ ಮಾಡುವಾಗಲು ಕೂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಡೀರನೆ ನಿರ್ಧಾರವನ್ನು ಕೈಗೊಂಡಿತ್ತು ಹೀಗಾಗಿ 2ಸಾವಿರ ರೂಪಾಯಿ ನೋಟಿನ ವಿಚಾರದಲ್ಲಿ ಕೂಡ ಹಾಗೆ ಆಗುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದಾರೆ. ಆದರೆ ವಿತ್ತ ಸಚಿವೆ ಆಗಿರುವ ನಿರ್ಮಲ ಸೀತಾರಾಮನ್(Nirmala Seetharaman) ಇದಕ್ಕೆ ನೀಡುವಂತಹ ಸ್ಪಷ್ಟೀಕರಣವೇ ಬೇರೆ ಆಗಿದೆ.

ಅವರು ಹೇಳುವ ಪ್ರಕಾರ ಬ್ಯಾಂಕುಗಳು ಎಟಿಎಂ(ATM) ಗಳಿಗೆ ಹಣವನ್ನು ಹಾಕುವಂತಹ ಪೂರ್ಣವಾದ ಸ್ವಾತಂತ್ರ್ಯವನ್ನು ಹೊಂದಿದ್ದು ಇದರ ಕುರಿತಂತೆ ವಿತ್ತ ಸಚಿವಾಲಯ ಯಾವುದೇ ವಿಶೇಷ ಸೂಚನೆಗಳನ್ನು ನೀಡಿಲ್ಲ. ಹೀಗಾಗಿ ಎಟಿಎಂ ಗಳಲ್ಲಿ 2000 ನೋಟು ಸಿಕ್ಕದೆ ಇರುವ ಹಿನ್ನೆಲೆಯಲ್ಲಿ ನೋಟ್ ಬ್ಯಾನ್ ಆಗಿದೆ ಎನ್ನುವ ತಪ್ಪು ಕಲ್ಪನೆಯನ್ನು ಮಾಡಿಕೊಳ್ಳುವಂತಹ ಯಾವುದೇ ಅಗತ್ಯ ಇಲ್ಲ ಎಂಬುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಅಧಿಕೃತ ನಿಲುವು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!