105 ವರ್ಷದ ಈ ವೃದ್ಧ 30 ನಿಮಿಷಕ್ಕೂ ಮುಂಚೆ ತನ್ನ ಕೊನೆಯ ಅಸೆಯನ್ನು ಈಡೇರಿಸಿಕೊಂಡು ಪ್ರಾಣ ಬಿಟ್ಟ. ವೃದ್ಧನ ಕೊನೆಯ ಆಸೆ ಏನಿತ್ತು ಗೊತ್ತಾ
ನಾವು ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವುದು ಸಾಮಾನ್ಯ ಸತ್ಯ. ಅದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಅಲ್ವೇ ಬದುಕಿರುವಾಗ ನಮ್ಮ ಆಸೆಗಳನ್ನ ಈಡೇರಿಸಿಕೊಳ್ಳುವುದಕ್ಕೇ ಏನೆಲ್ಲಾ ಕಷ್ಟಪಡುತ್ತೇವೆ, ಎಷ್ಟೇಲ್ಲಾ ಸಾಹಸ ಮಾಡ್ತೇವೆ. ಬದುಕಿನ ಕೊನೆಯ ಗಳಿಗೆಯವರೆಗೂ ದುಡಿಯುತ್ತೇವೆ. ಯಾಕಂದ್ರೆ ಯಾವಾಗ ಯಾರ ಆಯಸ್ಸು ಮುಗಿಯುತ್ತೆ ಅಂತ ಹೇಳೋದಕ್ಕೇ ಆಗಲ್ಲ ನೋಡಿ! ಇಲ್ಲೊಬ್ಬ ವ್ಯಕ್ತಿ ವಯಸ್ಸು 105. ಇತ್ತೀಚಿಗೆ ಕೊನೆಯುಸಿರೆಳೆದ ಈತನ ಕೊನೆಯ ಆಸೆ ಏನಿತ್ತು ಅಂತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ.
ಹೌದು. ಆ ವೃದ್ಧ ಸೆಂಚುರಿಯ ಗಡಿಯನ್ನೂ ದಾಟಿದ್ದ. ಆತನ ವಯಸ್ಸು ಬರೋಬ್ಬರಿ 105 ವರ್ಷ ವಯಸ್ಸು. ಆತ ಹಜಾರಿಬಾಗ್ ನ ಬೆಲಾಹಿಯ ಪರ್ತಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ವ್ಯಕ್ತಿ. ಅವರ ಹೆಸರು ವರುಣ್ ಸಾಹು. ಈತ ಸಾಯುವ ಅರ್ಧಗಂಟೆ ಮೊದಲು ತನ್ನ ಕೊನೆಯ ಆಸೆಯನ್ನು ಈಡೇರಿಸಿಕೊಂಡು ಕಣ್ಮುಮುಚ್ಚಿದ ಪುಣ್ಯಾತ್ಮ! ಏನಪ್ಪಾ ಅವರ ಕೊನೆ ಆಸೆ ಅಂತನಾ ಬನ್ನಿ ಹೇಳ್ತೀವಿ.
ವರುಣ್ ಸಾಹು ಹಾಸಿಗೆ ಹಿಡಿದು ಕೆಲವು ದಿನಗಳಾಗಿತ್ತು. ಆದರೆ ಅವರು ಅವರ ಕೊನೆಯ ಆಸೆ ಇದೇರಿವವರೆಗೂ ಉಸಿರನ್ನು ಬಿಗಿ ಹಿಡಿದುಕೊಂಡಿದ್ದರು ಎನ್ನಬಹುದು. ಹೌದು ವರುಣ್ ಸಾಹು ಅವರ ಕೊನೆಯ ಆಸೆ ಬೇರೆನೂ ಅಲ್ಲ, ಮತದಾನ ಮಾಡುವುದಾಗಿತ್ತು! ತನು ಸಾಯುವ ಮೊದಲು ತನ್ನ ಹಕ್ಕನ್ನು ಚಲಾಯಿಸಿಯೇ ಸಾಯುವುದು ಎಂದು ಮನೆಯವರ ಬಳಿ ಆಗಾಗ ಕೇಳುತ್ತಿದ್ದರಂತೆ ಈ ವೃದ್ಧ. ಹಾಗಾಗಿ ಸಾಯುವುದಕ್ಕೂ ಮೊದಲು ಪಂಚಾಯತ್ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿಯೇ ಅಸುನೀಗಿದ್ದಾರೆ.
ಇಷ್ಟುವರ್ಷವಾಗಿದ್ದರೂ ಅವರ ನಾಗರಿಕ ಜವಾಬ್ದಾರಿಯನ್ನು ಮರೆತಿರಲಿಲ್ಲ ವರುಣ್ ಸಾಹುಅವರು. ಬೆಲಾಹಿ ಪಂಚಾಯತ್ ನ ಮತಗಟ್ಟೆ ಸಂಖ್ಯೆ 256ರಲ್ಲಿ ಮಧ್ಯಾಹ್ನ 2.40ರ ಸುಮಾರಿಗೆ ಮತ ಚಲಾಯಿಸಿದ್ದಾರೆ. ಎದ್ದು ಓಡಾಡುವುದಕ್ಕೆ ಸಾಧ್ಯವಾಗದ ಕಾರಣ ಇಬ್ಬರು ಹುಡುಗರು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿಯೇ ಕುಳಿತು ಮತದಾನ ಮಾಡಿದ್ದಾರೆ. ನಂತರ ಮನೆಗೆ ಬಂದು ಮಲಗಿದ ಸಾಹು ಅರ್ಧ ಗಂಟೆಯಲ್ಲಿಯೇ ಅಸುನೀಗಿದ್ದಾರೆ.
ಇನ್ನು ವರುಣ್ ಸಾಹು ಅವರ ಕೊನೆಯ ಆಸೆಯ ಬಗ್ಗೆ ಮನೆಯವರ ಬಳಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಗಜಧರ್ ಪ್ರಸಾಧ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇನ್ನು ಮತ ಹಾಕಿ ಬಂದ ನಂತರ ತಾನು ತನ್ನ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿಕೊಂಡು ತೃಪ್ತಿಯಿಂದ ಕಣ್ಣುಮುಚ್ಚಿದ್ದಾರೆ. ಮರುಣ್ ಸಾಹು ಅವರ ಮಕ್ಕಳು ಮುಂಬೈ ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ಅವರ ಬಳಿಯೂ ಕೂಡ ತನ್ನ ಈ ಕೊನೆಯ ಆಸೆಯ ಬಗ್ಗೆ ಹೇಳಿಕೊಂಡಿದ್ದರಂತೆ ವರುಣ್ ಸಾಹು.
ಕೊನೆಗೂ ತನ್ನ ಕೊನೆಯ ಆಸೆ ಮತದಾನವನ್ನು ಮಾಡಿ ಮುಗಿಸಿಯೇ ಇಹ ಲೋಕ ತ್ಯಜಿಸಿದ್ದಾರೆ 105 ವರ್ಷದ ವೃದ್ದ ವರುಣ್ ಸಾಹು. ಇದಲ್ಲವೇ ನಿಜವಾದ ನಾಗರಿಕನ ಜವಾಬ್ದಾರಿ ಎಂದರೆ. ತಮ್ಮ ಇಳೆವಯಸ್ಸಿನಲ್ಲಿ ಮಕ್ಕಳ ಬಗ್ಗೆ ಮನೆಯ ಬಗ್ಗೆ ಕನಸನ್ನು ಇಟ್ಟುಕೊಳ್ಳುವುದನ್ನು ಬಿಟ್ಟು ದೇಶಕ್ಕಾಗಿ ತಾನು ತನ ಹಕ್ಕನ್ನು ಚಲಾಯಿಸಬೇಕು ಎನ್ನುವ ಸಾಹು ಅವರ ನಿಲುವು ಖಂಡಿತವಾಗಿಯೂ ಎಲ್ಲರಿಗೂ ಮಾದರಿ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.