Kiccha Sudeep: ಕಿಚ್ಚನ ಮುಂದಿನ ಸಿನಿಮಾಗೆ ಇದೆ ರಜನಿಕಾಂತ್ ಅವರ ಕಬಾಲಿ ಕನೆಕ್ಷನ್?

Kiccha 46 ಸಾಕಷ್ಟು ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ಯಾವುದು ಹಾಗೂ ಯಾವಾಗ ಘೋಷಣೆ ಆಗುತ್ತೆ ಎಂಬುದಾಗಿ ಕಾತರದಿಂದ ಕಾಯುತ್ತಿದ್ದರು. ಈ ಹಿಂದೆ ಬಿಗ್ ಬಾಸ್ ಇದ್ದ ಕಾರಣದಿಂದಾಗಿ ಬಿಗ್ ಬಾಸ್ ಮುಗಿದ ನಂತರ ಘೋಷಣೆ ಆಗಬಹುದು ಎನ್ನುವುದಾಗಿ ಭಾವಿಸಿದ್ದರು ಆದರೆ ಈಗಾಗಲೇ ಬಿಗ್ ಬಾಸ್ ಕೂಡ ಮುಗಿದಿದೆ.

ಸದ್ಯಕ್ಕೆ ಸಿಸಿಎಲ್(CCL) ನಲ್ಲಿ ನಿರತರಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಅತಿ ಶೀಘ್ರದಲ್ಲೇ ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಬಹುದು ಎಂದು ಅಭಿಮಾನಿಗಳಲ್ಲಿ ಮಾತುಕತೆ ಪ್ರಾರಂಭವಾಗಿದೆ. ಆದರೆ ಈಗ ಕೆಲವೊಂದು ಸುದ್ದಿಗಳ ಪ್ರಕಾರ ಒಂದೊಂದಾಗಿ ಕಿಚ್ಚ(kiccha) ಸುದೀಪ್ ರವರ ಸಿನಿಮಾಗಳ ಬಗ್ಗೆ ಮಾಹಿತಿ ದೊರಕಲು ಪ್ರಾರಂಭವಾಗಿವೆ.

ಅನುಪ್ ಭಂಡಾರಿ(Anup Bhandari) ಅವರ ಜೊತೆಗೆ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ನಿರ್ಮಾಣದಲ್ಲಿ ಸಿನಿಮಾವನ್ನು ಮಾಡುವುದಕ್ಕಿಂತ ಮುಂಚೆ ಕಿಚ್ಚ ಸುದೀಪ್(Kiccha Sudeep) ಮತ್ತೊಂದು ಸಿನಿಮಾವನ್ನು ಮಾಡುವುದು ಕೂಡ ಕನ್ಫರ್ಮ್ ಆಗಿದೆ ಎನ್ನುವ ಸುದ್ದಿಗಳು ಕೂಡ ಗಾಂಧಿನಗರದಲ್ಲಿ ಓಡಾಡುತ್ತಿವೆ. ಇದಕ್ಕೆ ತಮಿಳುನಾಡಿನ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್(Rajinikanth) ನಟನೆಯ ಕಬಾಲಿ ಸಿನಿಮಾದ ಸಂಬಂಧವು ಕೂಡ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಅದು ಹೇಗೆ ಎನ್ನುವುದನ್ನು ವಿವರಿಸುತ್ತೇವೆ ಬನ್ನಿ.

ಹೌದು ಮಿತ್ರರೇ ಮೂಲಗಳ ಪ್ರಕಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾವನ್ನು ಕಬಾಲಿ ಸಿನಿಮಾವನ್ನು ನಿರ್ಮಾಣ ಮಾಡಿರುವಂತಹ ಕಲೈಪುಲಿ ಎಸ್ ತನು(Kalaipuli S Thanu) ನಿರ್ಮಿಸಲಿದ್ದು ಕಿಚ್ಚ ಸುದೀಪ್ ರವರ ಕಾಲ್ ಶೀಟ್ ಅವರಿಗೆ ಸಿಕ್ಕಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಿನಿಮಾಗೆ ನಿರ್ದೇಶಕ ಯಾರು ಕಥೆ ಯಾವ ರೀತಿ ಇರುತ್ತೆ ಎನ್ನುವ ಅಧಿಕೃತ ಮಾಹಿತಿಗಳು ಮುಂದಿನ ದಿನಗಳಲ್ಲಿಯೇ ನಮಗೆ ಸಿಗಬೇಕಾಗಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಪರಭಾಷಾ ಸಿನಿಮಾ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದು ಒಳ್ಳೆಯ ಸುದ್ದಿ ಎನ್ನುಬಹುದಾಗಿದೆ.

Leave a Comment

error: Content is protected !!