10 ನೇ ತರಗತಿ ಪಾಸ್ ಆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗಾವಕಾಶ

ಕೇಂದ್ರ ಸಿಬ್ಬಂದಿ ನೇಮಕಾತಿಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹುದ್ದೆಗಳು:- ಕೇಂದ್ರ ಸಿಬ್ಬಂದಿ ನೇಮಕಾತಿ ಸಂಸ್ಥೆಯಲ್ಲಿ ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ:- ಒಟ್ಟಾರೆಯಾಗಿ ಹುದ್ದೆಗಳ ಸಂಖ್ಯೆಯನ್ನು ಹೇಳಿಲ್ಲ. ಆದರೆ ನೇಮಕಾತಿ ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಸೇರಿ ಎಲ್ಲಾ ಕಡೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ವಿದ್ಯಾರ್ಹತೆ :- ಹತ್ತನೇ ತರಗತಿಯಲ್ಲಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನುಳಿದ ಯಾವುದೇ ಪದವಿ ಪಾಸಾಗಿರುವ ಅವಶ್ಯಕತೆ ಇಲ್ಲ.

ವಯೋಮಿತಿ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಎಂದರೆ 18 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ಎಂದರೆ 25 ವರ್ಷ ವಯೋಮಿತಿ ಹೊಂದಿರಬೇಕು. ಅದೇ ರೀತಿ ಎಸ್.ಸಿ.ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿ.ಡಬ್ಲ್ಯೂ.ಡಿ. ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆಯ ನೇಮಕಾತಿ:- ಇದಕ್ಕೆ ಪತ್ರಿಕೆ 1 ಮತ್ತು ಪತ್ರಿಕೆ 2 ಎಂಬ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆಯಾಗಿ 100 ಅಂಕಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇವರಿಗೆ ಒಂದು ನಿಗದಿತ ಸಮಯವನ್ನು ಪರೀಕ್ಷೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ:-ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-3-2021 ಆಗಿದೆ. ಅಂದರೆ ಈಗಾಗಲೇ ಅರ್ಜಿ ಸಲ್ಲಿಸುವಿಕೆ ಶುರುವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:- ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಹೋಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ:-ಎಸ್ಸಿ.ಎಸ್ಟಿ, ಪಿ.ಡಬ್ಲ್ಯೂ.ಡಿ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳು 100 ರೂಪಾಯಿಗಳನ್ನು ಕಟ್ಟಬೇಕು.
ಪರೀಕ್ಷಾ ಕೇಂದ್ರಗಳು:-ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ

Leave a Comment

error: Content is protected !!