Govt Jobs: ಒಂದು ಲಕ್ಷಕ್ಕೂ ಅಧಿಕ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನ! ನೀವು ಕೂಡ ಅರ್ಜಿ ಸಲ್ಲಿಸಿ ಸಂಬಳ ಎಷ್ಟು ಗೊತ್ತಾ?

Govt Jobs ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF) ಸಂಸ್ಥೆಯಿಂದ ಭರ್ಜರಿ 129929 ಹುದ್ದೆಗಳಿಗೆ ಭರ್ತಿ ಮಾಡುವಂತಹ ಆಹ್ವಾನವನ್ನು ನೀಡಲಾಗಿದ್ದು ಯಾರು ಬೇಕಾದರೂ ಕೂಡ ಮೇ ಐದರ ಒಳಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗುವಂತಹ ಅರ್ಹತೆಗಳೇನು ಹಾಗು ತಿಂಗಳಿಗೆ ಸಿಗುವಂತಹ ಸಂಬಳ ಎಷ್ಟು ಎಂಬುದನ್ನು ತಿಳಿಯೋಣ.

ಹುದ್ದೆಯ ಮಾಹಿತಿಯನ್ನು ತಿಳಿಯುವುದಾದರೆ ಪುರುಷರಿಗೆ 125262 ಆಹ್ವಾನಗಳು ಹಾಗೂ ಮಹಿಳೆಯರಿಗೆ 4667 ಆಹ್ವಾನಗಳನ್ನು ಮಾಡಲಾಗಿದೆ. ವಿದ್ಯಾರ್ಹತೆಯ(Educational Qualification) ಕುರಿತಂತೆ ನೀವು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ. ಇನ್ನು ವಯಸ್ಸಿನ ಮಿತಿಯನ್ನು ಗಮನಿಸುವುದಾದರೆ ಕನಿಷ್ಠ 18 ಹಾಗೂ ಗರಿಷ್ಠ 23 ಮೀರಿರಬಾರದು. ವಯಸ್ಸಿನ ಸಡಿಲಿಕೆ ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ 5 ವರ್ಷ ಹಾಗೂ ಒಬಿಸಿ ವರ್ಗದ ಜನಾಂಗಕ್ಕೆ ಮೂರು ವರ್ಷ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಈ ವಿಚಾರದ ಕುರಿತಂತೆ ಅರ್ಜಿ ಶುಲ್ಕದ(Fee) ರೂಪದಲ್ಲಿ ಯಾವುದೇ ಹಣವನ್ನು ಪಾವತಿ ಮಾಡಬೇಕಾದ ಅಗತ್ಯವಿಲ್ಲ. ಇನ್ನು ಸಂಬಳದ ಕುರಿತಂತೆ ಮಾತನಾಡುವುದಾದರೆ ತಿಂಗಳಿಗೆ 21700 ರಿಂದ 69,100 ವರೆಗೆ ಇದೆ. ಯಾಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ಗಮನಿಸುವುದಾದರೆ ದೈಹಿಕ(Physical Test) ಲಿಖಿತ ಹಾಗೂ ಮೌಖಿಕ ಅಂದರೆ ಸಂದರ್ಶನದ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ ಏಪ್ರಿಲ್ 5ರಿಂದ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮೇ 5 ಆಗಿರುತ್ತದೆ. ಅಧಿಕೃತ ವೆಬ್ಸೈಟ್ನಲ್ಲಿ ವಿದ್ಯಾರ್ಹತೆಯನ್ನು ಗಮನಿಸಿ ನೀವು ಕೂಡ ಆ ಅರ್ಹತೆಗೆ ಒಳಗಾಗಿದ್ದರೆ ತಪ್ಪದೆ ಈ ಕೆಲಸಕ್ಕೆ ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

Leave a Comment

error: Content is protected !!