ಈ ಸೊಪ್ಪು ಬೆಳೆಸಿ ಲಕ್ಷ ಲಕ್ಷ ಗಳಿಸುತ್ತಿದ್ದಾರೆ ರೈತರು. ನೀವು ಕೂಡ ಟ್ರೈ ಮಾಡಬಹುದು!

Business Tips ನಮ್ಮ ದೇಶದ ರೈತರು(Farmer) ಮೊದಲಿನಿಂದಲೂ ಕೂಡ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದುಕೊಂಡು ಬಂದು ರಾಷ್ಟ್ರದ ಜನರ ಹೊಟ್ಟೆಯ ಹಸಿವನ್ನು ನೀಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಕೂಡ ಲಾಭವನ್ನು ನೀಡುವಂತಹ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಅವುಗಳಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ಪುದಿನ ಸೊಪ್ಪಿನ ಬೆಳೆಯ ಕುರಿತಂತೆ. ಆಹಾರ ಹಾಗೂ ಔಷಧಿ(Medicine) ಸೇರಿದಂತೆ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಇದರ ಬಳಕೆ ಹೇರಳವಾಗಿದೆ.

ಪುದಿನ ಸೊಪ್ಪಿನ(Pudina Soppu) ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಇದರ ಬೆಳೆಯನ್ನು ಬೆಳೆಯುವ ಮೂಲಕ ಸಾಕಷ್ಟು ಲಾಭವನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಹತ್ತರಿಂದ ಇಪ್ಪತ್ತು ಟನ್ಗಳಷ್ಟು ಹಸುವಿನ ಸಾವಯುವ ಗೊಬ್ಬರವನ್ನು ಪುದಿನ ಬೆಳೆಯುವಂತಹ ಜಾಗದಲ್ಲಿ ಉಪಯೋಗಿಸಬೇಕು. ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ ಹೊಲವನ್ನು ನೇಗಿಲನಿಂದ ಉತ್ತು ಸಿದ್ಧಪಡಿಸಿದ ನಂತರವೇ ಪುದಿನಾ ಅನ್ನು ಬಿತ್ತಬೇಕು.

ನಂತರ ಬೇವಿನ ಹಿಂಡಿಯನ್ನು ಆ ಹೊಲಕ್ಕೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗುತ್ತದೆ. ಗದ್ದೆ ಸಿದ್ಧವಾದ ನಂತರ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಬೇಕು. ಚಳಿಗಾಲದ ಅಂತ್ಯದಿಂದ ಬೇಸಿಗೆ ಆರಂಭದವರೆಗೆ ಪುದೀನಾ ಬಿತ್ತೋದಕ್ಕೆ ಒಳ್ಳೆಯ ಸಮಯ ಎಂದು ಹೇಳಬಹುದಾಗಿದೆ. ಪುದಿನದಲ್ಲಿ ಮೂರು ವಿಧದ ಪುದಿನಗಳಿದ್ದು ಎಲ್ಲವನ್ನು ಕೂಡ ಮಾರ್ಚ್ 30ರ ನಂತರ ಕೂಡ ನೆಡಬಹುದಾಗಿದೆ.

ಪುದಿನ ಬೆಳೆಯನ್ನು ಕೀಟಗಳಿಂದ ರಕ್ಷಿಸಲು ಡೈಕ್ಲೊವರ್ಸ್ ಅಥವಾ ಮಾನಾಕ್ರೋಟೋಫಾಸ್(Monachrotophas) ನಂತಹ ಕೀಟನಾಶಕಗಳನ್ನು ಬಳಸಿದರೇ ಖಂಡಿತವಾಗಿ ಉತ್ತಮ ಬೆಳೆಯನ್ನು ನೀವು ಪಡೆಯಬಹುದಾಗಿದ್ದು, ತಿಂಗಳಿಗೆ ಲಕ್ಷ ಲಕ್ಷಗಟ್ಟಲೆ ಲಾಭವನ್ನು ಪಡೆಯಬಹುದಾಗಿದೆ. ಒಂದು ವೇಳೆ ನೀವು ಕೂಡ ಈ ಬೆಳೆಯನ್ನು ಸಂಪೂರ್ಣ ಕೃಷಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಡುವ ಯೋಚನೆಯನ್ನು ಹೊಂದಿದ್ದಾರೆ ತಪ್ಪದೇ ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ ಗಳಲ್ಲಿ ಹೋಗಿ ವೀಕ್ಷಿಸಿ.

Leave a Comment

error: Content is protected !!