Chanakya: ಇಂತಹ ಹೆಣ್ಣನ್ನು ಮದುವೆ ಆಗಲೇಬಾರದು ಜೀವನ ನರಕ ಆಗುತ್ತೆ. ಚಾಣಕ್ಯರೇ ಹೇಳಿದ ಸತ್ಯವಿದು!

Chanakya Neethi ಚಾಣಕ್ಯ ನೀತಿ ಎನ್ನುವುದು ಕೇವಲ ಅಂದಿನ ಕಾಲದಲ್ಲಿ ಮಾತ್ರವಲ್ಲದೆ ಇಂದಿನ ನವಯುಗಕ್ಕೂ ಕೂಡ ಅತ್ಯಂತ ಪ್ರಸ್ತುತ ಎನಿಸುವಂತಹ ಪಾಠಗಳನ್ನು ಕಲಿಸುತ್ತೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಯಶಸ್ವಿ ವೈವಾಹಿಕ ಜೀವನದ ಬಗ್ಗೆ ಚಾಣಕ್ಯರು(Chanakya) ತಮ್ಮ ಗ್ರಂಥದಲ್ಲಿ ಏನನ್ನು ಬರೆದಿದ್ದಾರೆ ಎನ್ನುವುದನ್ನು ತಿಳಿಯಲು. ಬನ್ನಿ ಹಾಗಿದ್ದರೆ ಸಂಪೂರ್ಣ ವಿವರವಾಗಿ ತಿಳಿಯೋಣ.

ಮಹಿಳೆ ಎಷ್ಟೇ ಸುಂದರವಾಗಿದ್ದರೂ ಕೂಡ ಆಕೆ ಒಳ್ಳೆಯ ಕುಟುಂಬದಿಂದ ಬಂದಿಲ್ಲವೆಂದರೆ ಖಂಡಿತ ಮದುವೆ ಆಗಬೇಡಿ ಯಾಕೆಂದರೆ ಮದುವೆಯಾಗಿ ಬಂದ ನಂತರ ನಿಮ್ಮ ಕುಟುಂಬವನ್ನು ಕೂಡ ಆಕೆ ಒಡೆಯಬಹುದು. ಆಕೆ ಎಷ್ಟೇ ಸೌಂದರ್ಯ ವತಿ ಆಗಿರಲಿ ಆದರೆ ಅವಳ ಗುಣನಡತೆ ಹಾಗೂ ಮನೋಭಾವನೆ(Attitude Of women) ಕೆಟ್ಟದ್ದಾಗಿದೆ ಎಂದರೆ ಆಕೆಯನ್ನು ಮದುವೆಯಾಗಲೇಬಾರದು.

ಯಾಕೆಂದರೆ ತನ್ನ ಸೌಂದರ್ಯದ(Beauty) ಆಧಾರದ ಮೇಲೆ ಹಾಕಿ ತನ್ನ ಗಂಡನನ್ನು ಏನು ಬೇಕಾದರೂ ಕೂಡ ಮಾಡಲು ಪೀಡಿಸಬಹುದು ಹಾಗೂ ಇದರಿಂದಾಗಿ ಸಂಸಾರ ಅಶಾಂತಿಯಿಂದ ಕೂಡಿರುತ್ತದೆ. ಇನ್ನು ಸಂಸಾರದಲ್ಲಿ ಸುಳ್ಳು ಹೇಳುವಂತಹ ಮಹಿಳೆ ಕೇವಲ ಕುಟುಂಬವನ್ನು ಮಾತ್ರವಲ್ಲದೆ ಗಂಡನ ಮುಂದಿನ ಯೋಜನೆಗಳಿಗೂ ಕೂಡ ತೊಡಕಾಗಿ ಕಾಣಿಸಿಕೊಳ್ಳಬಹುದು ಹೀಗಾಗಿ ಅಂತವರನ್ನು ಮದುವೆಯಾಗಬೇಡಿ. ವಿಶ್ವಾಸದ್ರೋಹ ಮಾಡುವಂತಹ ಮಹಿಳೆಯನ್ನು ಕೂಡ ಗಂಡು ದೂರ ಇರಿಸಬೇಕು.

ಇಂದು ಬೇರೆಯವರಿಗೆ ವಿಶ್ವಾಸದ್ರೋಹ ಮಾಡಿದವಳು ನಾಳೆ ತನ್ನ ಸ್ವಾರ್ಥಕ್ಕಾಗಿ ತನ್ನ ಗಂಡನಿಗೂ ಕೂಡ ವಿಶ್ವಾಸದ್ರೋಹ ಮಾಡಲು ಹಿಂಜರಿಯುವುದಿಲ್ಲ. ಮನೆ ಕೆಲಸ ಗೊತ್ತಿಲ್ಲದ ಮಹಿಳೆಯನ್ನು ಮದುವೆಯಾದರೆ ಪ್ರಸ್ತುತ ಸಮಾಜದಲ್ಲಿ ಗಂಡ ಬದುಕುವುದು ಕೂಡ ಸಾಕಷ್ಟು ದುಸ್ತರವಾಗಿ ಬಿಡುತ್ತದೆ. ಹೀಗಾಗಿ ಇವೆಲ್ಲಾ ವಿಚಾರಗಳನ್ನು ಅವಲೋಕಿಸಿ ನಂತರವೇ ಮದುವೆಯಾಗಬೇಕು ಎನ್ನುವುದಾಗಿ ಚಾಣಕ್ಯರು(Chanakya) ಹೇಳುತ್ತಾರೆ.

Leave a Comment

error: Content is protected !!