Chanakya Neethi: ಹೆಣ್ಣಿನ ಬಗ್ಗೆ ಚಾಣಕ್ಯ ಬಿಚ್ಚಿಟ್ಟ ಕಟು ಸತ್ಯಗಳೇನು ಗೊತ್ತಾ? ನಿಮಗಿದು.ತಿಳಿದಿರಲಿ.

Chanakya Neethi ನಮ್ಮ ಪೂರ್ವಜರು ಹೇಳುವಂತೆ ಯಾರನ್ನು ಬೇಕಾದರೂ ಏನನ್ನು ಬೇಕಾದರೂ ತಿಳಿಯಬಹುದು ಆದರೆ ಹೆಣ್ಣಿನ ಮನಸ್ಸಿನ ಆಳವನ್ನು ತಿಳಿಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಕೂಡ ಇದೇ ರೀತಿಯ ವಿಚಾರಗಳನ್ನು ತಮ್ಮ ಗ್ರಂಥದಲ್ಲಿ ಕೂಡ ಬರೆದಿದ್ದಾರೆ. ಹೀಗಿದ್ದರೂ ಕೂಡ ಕೆಲವೊಂದು ರಹಸ್ಯಗಳನ್ನು ಚಾಣಕ್ಯರು(Chankya) ಕೂಡ ಹೆಣ್ಣಿನ ಹುರಿದಂತೆ ತಮ್ಮ ಗ್ರಂಥದಲ್ಲಿ ಬಿಚ್ಚಿಟ್ಟಿದ್ದಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪುರುಷನನ್ನು ತನ್ನ ಕೈಗೊಂಬೆನ್ನಾಗಿ ಮಾಡಿಕೊಳ್ಳುವಂತಹ ವಿದ್ಯೆ ಹೆಣ್ಣಿಗೆ ಸುಲಭವಾಗಿ ತಿಳಿದಿದೆ. ದೇವತೆಗಳು ಕೂಡ ಹೆಣ್ಣಿನ ಮೋಹ ಪಾಷಕ್ಕೆ ಸಿಕ್ಕಿಬಿದ್ದಿದ್ದಾರೆ ಇನ್ನು ಹುಲು ಮಾನವರಂತೂ ಅತ್ಯಂತ ಸುಲಭದ ವಿಚಾರವಾಗಿದ್ದಾರೆ. ಇನ್ನು ಹೆಣ್ಣನ್ನು ಮದುವೆಯಾಗುವವರು ಆಕೆ ಚೆನ್ನಾಗಿಲ್ಲದಿದ್ದರೂ ಆಕೆಯ ಗುಣ ಹಾಗೂ ನಡತೆ ಸರಿಯಾಗಿದೆ ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಬೇಕು.

ಸೌಂದರ್ಯ(Beauty) ಇಂದಲ್ಲ ನಾಳೆ ಮಾಸುತ್ತದೆ ಆದರೆ ಗುಣ ಎನ್ನುವುದು ಆಕೆ ಬದುಕಿರುವವರೆಗೂ ಕೂಡ ನಿಮ್ಮ ಜೊತೆ ಚೆನ್ನಾಗಿ ಇರುವಂತೆ ನಿಮಗೆ ಆಶ್ವಾಸನೆ ನೀಡುತ್ತದೆ. ಇನ್ನು ಗಂಡಿಗೆ ಹೋಲಿಸಿದರೆ ಧೈರ್ಯ ಹಾಗೂ ತಾಳ್ಮೆಯಲ್ಲಿ ಮಹಿಳೆ ಸಾಕಷ್ಟು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾಳೆ. ತನ್ನ ಸೌಂದರ್ಯದಿಂದ ಪುರುಷನನ್ನು ಆಸೆ ಎಂಬ ಬಂಧನದಲ್ಲಿ ಬಂಧಿಸುತ್ತಾಳೆ. ಹೆಣ್ಣು ತನಗೆ ವಯಸ್ಸಾಗಿದ್ದರು ಕೂಡ ತಾನು ಸುಂದರಿ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ ಇದನ್ನು ತನ್ನ ಮನಸ್ಸಿನಲ್ಲಿ ಕೂಡ ಕೇಂದ್ರೀಕೃತವಾಗಿರಿಸಿಕೊಳ್ಳುತ್ತಾಳೆ.

ಗಂಡಿಗೆ ಹೆಣ್ಣು ಬೆಳಗ್ಗೆ ತಾಯಿಯಾಗಿ ಮಧ್ಯಾಹ್ನ ಸೋದರಿಯಾಗಿ ಹಾಗೂ ರಾತ್ರಿ ಹೆಂಡತಿಯಾಗಿ ನೋಡಿಕೊಳ್ಳುತ್ತಾಳೆ. ಗಂಡಿನ ಮಾತನ್ನು ಕೇಳುವ ಹೆಣ್ಣು ಹೆಂಡತಿಯಾಗಿ ಸಿಗುವುದು ಅತ್ಯಂತ ಅಪರೂಪ ಹೀಗಾಗಿ ಒಂದು ವೇಳೆ ಅಂತಹ ಹೆಣ್ಣು ನಿಮಗೆ ಸಿಕ್ಕಿದರೆ ಪ್ರಪಂಚದಲ್ಲಿ ನೀವು ಅತ್ಯಂತ ಅದೃಷ್ಟವಂತ ಎಂದು ಹೇಳಬಹುದಾಗಿದೆ. ಇವುಗಳೇ ಮಿತ್ರರೇ ಆಚಾರ್ಯ ಚಾಣಕ್ಯರು(Acharya Chanakya) ಹೆಣ್ಣಿನ ಕುರಿತಂತೆ ಬಿಚ್ಚಿಟ್ಟಿರುವ ರಹಸ್ಯಗಳು.

Leave a Comment

error: Content is protected !!