ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡುತಿದ್ದ ವ್ಯಕ್ತಿ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್!

ಒಬ್ಬ ವ್ಯಕ್ತಿ ಯಶಸ್ಸಿನ ಹಾದಿಯನ್ನು ಮೆಟ್ಟಿದ್ದಾನೆ ಹಾಗೂ ತಾನು ಅಂದು ಕೊಂಡಿದ್ದನ್ನು ಸಾಧಿಸಿದ್ದಾನೆ ಅಂದಾಗಲೇ ಅವನ ಜೀವನ ಚರಿತ್ರೆ ಎಲ್ಲರಿಗೂ ತಿಳಿಯೋದು ಪ್ರತಿ ಯಶಸ್ಸಿನ ಪುರುಷನ ಹಿಂದೆ ಕಷ್ಟದ ಜೀವನಗಳು ಇದ್ದೆ ಇರುತ್ತದೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಅದೇ ಸಾಲಿನಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯವರ ಜೊತೆಗೆ ಬಿಡುವಿನ ವೇಳೆ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ತಂದೆ ತಾಯಿಗಳಿಗೆ ಅಸರೆಯಾಗುತ್ತಿದ್ದ ವ್ಯಕ್ತಿ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ.

ಅಷ್ಟಕ್ಕೂ ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಇವರ ಹೆಸರು ಟಿ.ಎಸ್ ದಿವಾಕರ್ ಎಂಬುದಾಗಿ ತಿಪಟೂರಿನವರು 2016 ನೇ ಸಾಲಿನಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 600 ನೇ ರ‍್ಯಾಂಕ್ ಪಡೆದಿದ್ದಾರೆ. ಇದು ಮೊದಲ ಪ್ರಯತ್ನದಲ್ಲಿ ಅಲ್ಲದೆ ಇದ್ದರು ಕೂಡ ಈ ಹಿಂದೆ ಇವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 19 ಅಂಕಗಳಿಂದ ಅನುತ್ತೀರ್ಣರಾಗಿದ್ದರು. ಕುಗ್ಗದೆ ಮತ್ತೊಮ್ಮೆ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

ಇವರ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದಾದರೆ ಇವರು ಓದಿದ್ದು ಕಂಪ್ಯೂಟರ್ ಎಂಜಿನಿಯರಿಂಗ್‌ ಇವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಹೈದ್ರಾಬಾದ್ ನ ಖಾಸಗಿ ಕಂಪನಿಯಲ್ಲಿ ಇಂಜಿನಿಯರಿಂಗ್ ಕೆಲಸ ಸಿಕ್ಕಿತು ಆದ್ರೆ ಇದರಿಂದ ನಾನು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಕೊಡುವುದಕ್ಕೆ ಆಗೋದಿಲ್ಲ ನಾಲ್ಕು ಜನರಿಗೆ ನನ್ನಿಂದ ಒಳ್ಳೆಯ ಕೆಲಸ ಆಗಬೇಕು ಅನ್ನೋ ಉದ್ದೇಶದಿಂದ ಕೆಲಸ ಬಿಟ್ಟು ಹುನ್ನತ ಉದ್ಧೆಯನ್ನು ಸ್ವೀಕರಿಸಬೇಕು ಅನ್ನೋ ಛಲದೊಂದಿಗೆ ಮನೆಯಲ್ಲಿ ತಂದೆ ತಾಯಿಗಳ ಜೊತೆಗೆ ಅವರ ಆಸರೆಯಾಗಿ ಯಾವುದೇ ಕೋಚಿಂಗ್ ಹೋಗದೆ ಮನೆಯಲ್ಲೇ ಓದಿ UPSCಪರೀಕ್ಷೆಗೆ ತಯಾರಿ ನಡೆಸಿ ಇಂದಿನ ದಿನಗಳಲ್ಲಿ ರ‍್ಯಾಂಕ್ ಪಡೆದಿದ್ದಾರೆ.

ಇವರ ಮನೆಯವರು ತನ್ನ ತಾತನ ಕಾಲದಿಂದಲೂ ಕೂಡ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು ಇಂದು ಕೂಡ ಈ ವೃತ್ತಿಯನ್ನೇ ಮುಂದುವರೆಸಿದ್ದಾರೆ, ಇವರ ಯಶಸ್ಸಿಗೆ ತನ್ನ ತಂದೆ ತಾಯಿಗಳೇ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಯಶಸ್ಸಿನ ಹಾದಿ ಅಷ್ಟೊಂದು ಸುಲಭವಾಗಿಲ್ಲದಿದ್ದರು ಕಠಿಣ ಶ್ರಮ ಹಾಗೂ ಛಲದಿಂದ ಅದನ್ನು ಸುಲಭ ಮಾಡಿಕೊಂಡಿದ್ದಾರೆ.ಅದೇನೇ ಇರಲಿ ಸಾಧಿಸುವವನಿಗೆ ಛಲದ ಜೊತೆಗೆ ಕಠಿಣ ಶ್ರಮ ಇದ್ದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಇವರು ಉತ್ತಮ ಉದಾಹರಣೆ ಅನ್ನಬಹುದು.

Leave a Comment

error: Content is protected !!