ಸಾವಿರಾರು ಕೋಟಿಯ ಒಡೆಯ ಆದರು ಬೇಕರಿಯಲ್ಲಿ ಕೆಲಸ ಮಾಡ್ತಿರೋದ್ಯಾಕೆ? ನೀವು ಓದಲೇಬೇಕಾದ ಇಂಟರೆಸ್ಟಿಂಗ್ ರಿಯಲ್ ಸ್ಟೋರಿ.

Why are you working in a bakery, the owner of thousands of crores? An interesting true story you must read ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ನಾಣ್ಣುಡಿ ಇದೆ. ಆದರೆ ಇನ್ನೊಬ್ಬ ಸಾವಿರಾರು ಕೋಟಿ(Thousands Of Crores) ರೂಪಾಯಿಗಳ ಒಡೆಯ ತನ್ನ ಮಗನಿಗೆ ನೀಡಿರುವಂತಹ ಹಾಗೂ ಕಲಿಸಿರುವಂತಹ ಪಾಠ ನಿಜಕ್ಕೂ ಕೂಡ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎನ್ನುವ ಹಾಗಿದೆ. ಅಷ್ಟಕ್ಕೂ ಸಾವಿರಾರು ಕೋಟಿ ರೂಪಾಯಿ ಒಡೆಯ ಬೇಕರಿಯಲ್ಲಿ ಕೆಲಸಕ್ಕೆ ಇದ್ದಿದ್ದು ಯಾಕೆ ಎನ್ನುವಂತಹ ಸ್ವಾರಸ್ಯಕರ ನೈಜ ಘಟನೆಯನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

the owner of thousands of crores

ಸಾವ್ಜಿ ದೋಲಾಕಿಯ ಎನ್ನುವ ರೂ.7000 ಕೋಟಿ ರೂಪಾಯಿ ಒಡೆಯ ಹಾಗೂ ಖ್ಯಾತ ಉದ್ಯಮಿಯ ಬಗ್ಗೆ ನೀವೆಲ್ಲರೂ ತಿಳಿದಿರಬಹುದು. ತಮ್ಮ ಡೈಮಂಡ್(Diamond) ಕಂಪನಿಯಲ್ಲಿ ಕೆಲಸ ಮಾಡುತ್ತಿರುವಂತಹ ಎಲ್ಲಾ ಉದ್ಯೋಗಿಗಳಿಗೆ ಈಗಾಗಲೇ ಉಡುಗೊರೆ ರೂಪದಲ್ಲಿ ಸಾಕಷ್ಟು ಹಣ ಕಾರುಗಳು ಹಾಗೂ ಅಪಾರ್ಟ್ಮೆಂಟ್(Apartment) ಸೇರಿದಂತೆ ಬಹುಮೂಲ್ಯ ಉಡುಗೊರೆಗಳನ್ನು ಈಗಾಗಲೇ ನೀಡಿ ಸುದ್ದಿಯಾಗಿದ್ದಾರೆ. ಅವರ ಮಗ ಆಗಿರುವ ದ್ರವ್ಯ್ ದೊಲಾಕಿಯ ವಿದೇಶದಿಂದ ಎಂಬಿಎ ಪದವಿಯನ್ನು ಮುಗಿಸಿಕೊಂಡು ಭಾರತಕ್ಕೆ ಬಂದಿದ್ದು ತನ್ನ ಮಗನಿಗೆ ಕಂಪನಿಯ ಉಸ್ತುವಾರಿಯನ್ನು ಕೊಡುವ ಮೊದಲು ಆತನನ್ನು ಪರೀಕ್ಷಿಸಬೇಕು ಎನ್ನುವ ಪ್ರಯತ್ನಕ್ಕೆ ಅವರು ಕೈ ಹಾಕುತ್ತಾರೆ.

ಇದನ್ನೂ ಓದಿ..ಹರಿಪ್ರಿಯಾ ನ ಹೇಗೆ ಪಟಾಯಿಸಿಕೊಂಡೆ ಎಂದು ಕೇಳಿದವರಿಗೆ ನಟ ವಸಿಷ್ಟ ಸಿಂಹ ನೀಡಿದ ಉತ್ತರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರ.

ಹೀಗಾಗಿ ತನ್ನ ಮಗನನ್ನು ಕರೆದು ಅವನ ಕೈಗೆ ರೂ.7,000 ಹಣವನ್ನು ನೀಡಿ ನೀನು ಎಲ್ಲಿಯಾದರೂ ಹೋಗಿ ಜನರ ನಡುವೆ ಸೇರಿ ಕಷ್ಟದಿಂದ ಕೆಲಸ ಮಾಡಬೇಕು ಎಲ್ಲಿಯೂ ಕೂಡ ನೀನು ನನ್ನ ಮಗ ಎಂದು ಹೇಳಿಕೊಂಡು ತಿರುಗಬಾರದು. ಮೊಬೈಲ್(Mobile) ಅನ್ನು ಬಳಸಬಾರದು ಹಾಗೂ ನಿನ್ನ ತಾಯಿ ಹಾಗೂ ಮನೆಯವರಿಗೆ ಯಾರಿಗೂ ಕೂಡ ಕರೆ ಮಾಡಬಾರದು. ಒಂದು ವೇಳೆ ತೀರಾ ಎಮರ್ಜೆನ್ಸಿ(Emergency) ಎಂದರೆ ಮಾತ್ರ ನನಗೆ ಕರೆ ಮಾಡಬೇಕು ಎಂಬುದಾಗಿ ಶರತ್ತನ್ನು ವಿಧಿಸಿ ಕಳುಹಿಸಿ ಕೊಡುತ್ತಾರೆ.

ತಂದೆಯ ಮಾತಿಗೆ ಚಾಲೆಂಜ್ ಹಾಕಿ ದ್ರವ್ಯ್ ಮೊದಲಿಗೆ ಕೇರಳಕ್ಕೆ ಹೋಗುತ್ತಾನೆ. ಕೇರಳಕ್ಕೆ ಹೋಗುವಾಗಲೇ ಆತನ ಕೈಯಲ್ಲಿದ್ದ ರೂ.7000 ಹಣ ಸಂಪೂರ್ಣವಾಗಿ ಖರ್ಚಾಗಿ ಬಿಡುತ್ತದೆ. ಭಾಷೆ ಬರದ ಊರಿನಲ್ಲಿ ಆತನಿಗೆ ಮೊದಲಿಗೆ ಕೆಲಸ ಸಿಗುವುದಿಲ್ಲ ನಂತರ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ್ದು ಬೇಕರಿಯಲ್ಲಿ ಕೆಲಸ ಮಾಡುತ್ತಾನೆ. ಅಲ್ಲಿಂದ ಮುಂದೆ ಕಾರ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಾನೆ ಆದರೆ ಅಲ್ಲಿ ಆತ ಲವಲವಿಕೆಯಿಂದ ಇರದಿದ್ದ ಕಾರಣ ಕೆಲಸದಿಂದ ತೆಗೆದುಹಾಕುತ್ತಾರೆ.

ಇದನ್ನೂ ಓದಿ..ಒಳಉಡುಪು ಹಾಕದೆ ಬೆಡ್ರೂಮ್ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ! ಮುಂದೆ ಆಗಿದ್ದೆ ಬೇರೆ

ಇದಾದ ನಂತರ ಒಂದಾದ ಮೇಲೊಂದರಂತೆ ವಿವಿಧ ಕೆಲಸಗಳಲ್ಲಿ ದ್ರವ್ಯ್ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಕೊನೆಗೆ ಮ್ಯಾಕ್ಡೊನಾಲ್ಸ್ ಕೆಲಸ ಮಾಡುತ್ತಿರಬೇಕಾದರೆ ಆತನ ತಂದೆಯ ಅಸಿಸ್ಟೆಂಟ್(assistant) ನೋಡಿ ಆತನನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯನ್ನು ನೋಡಿದ ಕೂಡಲೇ ನೀವು ಇಷ್ಟೊಂದು ಎತ್ತರಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದೀರಿ ಎಂಬುದಾಗಿ ಈಗ ನನಗೆ ಅರ್ಥವಾಯಿತು ಎಂಬುದಾಗಿ ತಂದೆಯ ಬಳಿ ಹೇಳುತ್ತಾರೆ. ಈಗಾಗಲೇ ಈ ವಿಚಾರ ದೊಡ್ಡ ಮಟ್ಟದಲ್ಲಿ ಹೊರಬಂದಿದ್ದು ಎಲ್ಲರೂ ಕೂಡ ಈ ವಿಚಾರದ ಕುರಿತಂತೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Comment

error: Content is protected !!