Ratan Tata; ರತನ್ ಟಾಟಾ ಅವರ ಅಪೂರ್ಣ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

Ratan Tata ಇಡೀ ಜಗತ್ತಿನ ಇಂಡಸ್ಟ್ರಿಯಲಿಸ್ಟ್ ಅನ್ನು ಗಮನಿಸಿದಾಗ ಅವರಲ್ಲಿ ಅಗ್ರರಾಗಿ ಕಂಡುಬರುವವರು ನಮ್ಮ ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ(Ratan Tata). ಒಂದು ಲೆಕ್ಕಚಾರದಲ್ಲಿ ಗಮನಿಸಿದರೆ ಟಾಟಾ ಸಂಸ್ಥೆಯ ಅಡಿಯಲ್ಲಿ ಬರುವಂತಹ ಎಲ್ಲಾ ಕಂಪನಿಗಳ ಒಟ್ಟು ಮೌಲ್ಯವನ್ನು ಅಳೆದು ತೂಗಿದರೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ರತನ್ ಟಾಟಾ ಅವರೇ ಆಗಿರುತ್ತಾರೆ ಆದರೂ ಕೂಡ ಅದನ್ನು ಅವರು ತಮ್ಮ ಸ್ವಂತ ಬಳಕೆಗಾಗಿ ಬಳಸಿಕೊಂಡಿಲ್ಲ.

ಹೌದು ಮಿತ್ರರೇ ತಮ್ಮ ಟಾಟಾ ಗ್ರೂಪ್ಸ್(Tata Groups) ಸಂಸ್ಥೆಯಿಂದ ಬರುವಂತಹ ಭರ್ಜರಿ 65 ಪ್ರತಿಶತಕ್ಕೂ ಅಧಿಕ ಆದಾಯವನ್ನು ಭಾರತ ಸೇರಿದಂತೆ ಜಗತ್ತಿನಾದ್ಯಂತ ಜನಪರ ಸೇವೆಗಳಿಗಾಗಿ ಹಾಗೂ ಬಡ ಜನರಿಗಾಗಿ ತಮ್ಮ ಟ್ರಸ್ಟ್ ಮೂಲಕ ವಿನಿಯೋಗಿಸುತ್ತಿದ್ದಾರೆ ನಮ್ಮೆಲ್ಲರ ನೆಚ್ಚಿನ ರತನ್ ಟಾಟಾ ಅವರು. ಇನ್ನು ಈಗಾಗಲೇ ರತನ್ ಟಾಟಾ ಅವರಿಗೆ ವಯಸ್ಸು 85 ಆಗಿದ್ದರೂ ಕೂಡ ಅವರು ಬ್ರಹ್ಮಚಾರಿಯಾಗಿಯೇ ಉಳಿದುಕೊಂಡಿದ್ದಾರೆ. ಹೀಗೇಕೆ ಎನ್ನುವುದಾಗಿ ನೀವು ಕೇಳಬಹುದು ಅದಕ್ಕೆ ಕೂಡ ಒಂದು ಕಥೆ ಇದೆ ಬನ್ನಿ ಪೂರ್ಣವಾಗಿ ತಿಳಿದುಕೊಳ್ಳೋಣ.

Ratan Tata

ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಮೊದಲಿಗೆ ಒಂದೇ ವಾಕ್ಯದಲ್ಲಿ ಸಿಗುವಂತಹ ಉತ್ತರ ಎಂದರೆ ಅದು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎನ್ನುವುದು. ರತನ್ ಟಾಟಾ ಅವರು 25 ವರ್ಷ ವಯಸ್ಸಿನಲ್ಲಿ ಅಮೆರಿಕದಲ್ಲಿ ಇರುವಂತಹ ಸಂದರ್ಭದಲ್ಲಿ ಅಲ್ಲಿನ ಹುಡುಗಿಯೊಂದಿಗೆ ರತನ್ ಟಾಟಾ(Ratan Tata) ಅವರಿಗೆ ಪ್ರೀತಿಯಾಗಿ ಪರಸ್ಪರ ಇಬ್ಬರು ಪ್ರೀತಿಸಿ ಮದುವೆಯಾಗುವ ನಿರ್ಧಾರವನ್ನು ಕೂಡ ಮಾಡಿರುತ್ತಾರೆ. ಇದಕ್ಕೆ ಎರಡು ಕುಟುಂಬದ ಒಪ್ಪಿಗೆ ಕೂಡ ಬಹುತೇಕ ಇರುತ್ತದೆ.

ಇದೇ ಸಂದರ್ಭದಲ್ಲಿ ಭಾರತ(Bharath) ಹಾಗೂ ಚೀನಾ ನಡುವಿನ ಸಮರ ಕಾವರುತ್ತದೆ ಹಾಗೂ ಭಾರತಕ್ಕೆ ಸಮಸ್ಯೆ ಆಗಲಿದೆ ಎನ್ನುವುದಾಗಿ ಜಗತ್ತಿನಾದ್ಯಂತ ಸುದ್ದಿಗಳು ಹರಡಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ರತನ್ ಟಾಟಾ(Ratan Tata) ಆ ಹುಡುಗಿಯನ್ನು ಮದುವೆಯಾಗಿ ಭಾರತಕ್ಕೆ ಕರೆದುಕೊಂಡು ಹೋಗುವ ಉಪಾಯವನ್ನು ಮಾಡುತ್ತಾರೆ ಆದರೆ ಅದಕ್ಕೆ ಆ ಹುಡುಗಿಯ ಪೋಷಕರು ಮಾತ್ರ ಒಪ್ಪುವುದಿಲ್ಲ. ನನ್ನ ಮಗಳಿಗೆನಾದರೂ ಆಗಬಹುದು ಎನ್ನುವ ಚಿಂತೆ ಯಾಕಂದರೆ ಭಾರತ ಚೀನಾ ಸಮರ ಅಷ್ಟೊತ್ತಿಗೆ ನಡೆಯುತ್ತಿತ್ತು. ಅವರು ತಮ್ಮ ಮಗಳನ್ನು ಬೇರೆಯವರೊಂದಿಗೆ ಮದುವೆ ಕೂಡ ಮಾಡುತ್ತಾರೆ ಇದೇ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡ ರತನ್ಯ ಟಾಟಾ ನಾನು ಪ್ರೀತಿಸಿದ್ದು ಒಬ್ಬಳನ್ನೆ ಇನ್ನು ಮುಂದೆ ಬೇರೆ ಯಾರನ್ನು ಮದುವೆಯಾಗಿ ಅದನ್ನು ಹಂಚಿಕೊಳ್ಳಲು ಕೂಡ ನನಗೆ ಇಷ್ಟ ಇಲ್ಲ ಎಂಬುದಾಗಿ ಭಾವಿಸಿ ಯಾರನ್ನು ಕೂಡ ಮದುವೆಯಾಗದೆ ಹಾಗೆ ಉಳಿದುಕೊಳ್ಳುತ್ತಾರೆ. ಇದೇ ರತನ್ ಟಾಟಾ ಅವರ ಅಪೂರ್ಣ ಪ್ರೇಮ್ ಕಹಾನಿ.

Leave a Comment

error: Content is protected !!