ಆಸ್ಪತ್ರೆಯಲ್ಲಿ ಹೆಣ್ಣು ಹುಟ್ಟಿದ್ರೆ ಈ ಮಹಿಳಾ ಡಾಕ್ಟರ್ ಏನು ಮಾಡ್ತಾರೆ ಗೊತ್ತಾ! ಇಂಥ ಡಾಕ್ಟರ್ ಗಳು ಇದ್ದಾರಾ ನಮ್ಮ ದೇಶದಲ್ಲಿ
ದೇಶಲ್ಲಿ ವಿವಿಧ ರೀತಿಯ ಜನಗಳನ್ನು ಕಾಣಬಹುದು, ಕೆಲವರು ಹಲವು ರೀತಿಯ ವಿಶೇಷತೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಮುಖ್ಯವಾಗಿ ಹೇಳಬೇಕಾದ್ರೆ ಇಂದಿನ ದಿನಗಳಲ್ಲಿ ವೈದ್ಯರು ಅಂದ್ರೆ ಹಣ ಕೀಳುವ ವೃತ್ತಿ ಅನ್ನೋ ಮನೋಭಾವ ಜನ ಸಾಮಾನ್ಯರಲ್ಲಿ ಬಂದಿದೆ, ಅಂತವರ ನಡುವೆ ಈ ರೀತಿಯ ವೈದ್ಯರುಗಳು ಇರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಅನ್ನಬಹುದು ಯಾಕೆಂದರೆ ಯಾರ ಮನೆಯಲ್ಲಿಯೇ ಆಗಲಿ ಗಂಡು ಹುಟ್ಟಿದ್ರೆ ಹೆಚ್ಚು ಖುಷಿ ಪಡುತ್ತಾರೆ ಆದ್ರೆ ಅದೇ ಹೆಣ್ಣು ಹುಟ್ಟಿದ್ರೆ ಸಂತೋಷ ಕಡಿಮೆ ಹಾಗೂ ಅದರಲ್ಲೂ ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದ್ರೆ ಸಂತೋಷವೇ ಇಲ್ಲವೇನೋ ಅನ್ನೋ ಮನೋಭಾವನೆ ಸೃಷ್ಟಿಯಾಗಿದೆ, ಆಗಾಗಿ ಭಾರತದ ಲಿಂಗಾನುಪಾತದಲ್ಲಿ ಹುಡುಗಿಯರ ಸಂಖ್ಯೆಗಿಂತ ಹುಡುಗರ ಸಂಖ್ಯೆ ಹೆಚ್ಚಾಗಿದೆ.
ವಿಷ್ಯಕ್ಕೆ ಬರೋಣ ಇಲ್ಲೊಬ ವೈದ್ಯ ದಂಪತಿಗಳು ಹೆಣ್ಣನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿದೆ, ಹೌದು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಮತ್ತು ಹೆಣ್ಣು ಮಗುವಿನ ಜನನವನ್ನು ಹೆಚ್ಚಿಸಲು ವಾರಣಾಸಿಯ ಈ ವೈದ್ಯೆ ಆಸ್ಪತ್ರೆಯ ಫೀಸ್ ಕೇಳೋದಿಲ್ಲ. ಇದರ ಬದಲಿಗೆ ಇಡೀ ನರ್ಸಿಂಗ್ ಹೋಂಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ.
ಅಷ್ಟಕ್ಕೂ ಇವರ ಹೆಸರೇನು ಇವರ ಬಗ್ಗೆ ಒಂದಿಷ್ಟು ತಿಳಿಯುವುದಾದರೆ, ಡಾ. ಶಿಪ್ರಧಾರ್ ಎಂಬುದಾಗಿ ಇವರು ದೆಹಲಿಯ ವಾರಣಾಸಿಯಲ್ಲಿದ್ದಾರೆ, ಇವರ ಪತಿ ಕೂಡ ಇವರ ಈ ಸಾಮಾಜಿಕ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ದೆ ಹೆಣ್ಣು ಗಂಡು ಅನ್ನೋ ತಾರತಮ್ಯ ಮಾಡುವವರಿಗೆ ಸರಿಯಾಗಿಯೇ ಉತ್ತರ ನೀಡುತ್ತಾರೆ ಈ ದಂಪತಿ. ಈ ಸಮಾಜ ಕಾರ್ಯಕ್ಕೆ ಕಾರಣವಾಗಿದ್ದು ಹೇಗೆ ಅನ್ನೋದನ್ನ ತಿಳಿಯುವುದಾದರೆ ಡಾ. ಶಿಪ್ರಧಾರ್ ವಾರಣಾಸಿಯ ಪಹಡಿಯಾ ಪ್ರದೇಶದಲ್ಲಿ ಕಾಶಿ ಮೆಡಿಕೇರ್ ಹೆಸರಿನಲ್ಲಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ ಹೀಗಿರುವಾಗ ಬಡವರು ಹಾಗು ಆರ್ಥಿಕವಾಗಿ ಸಫಲತೆ ಕಾಣದೆ ಇರೋರು ಹೆಣ್ಣು ಹುಟ್ಟಿದರೆ ತುಂಬ ದುಃಖ ಪಡುತ್ತಾರೆ ಹಾಗು ಅಳುತ್ತಾರೆ. ಇದನ್ನರಿತ ಡಾ. ಶಿಪ್ರಾ ಧಾರ್ ಅವರಿಂದ ಫೀಸ್ ತಕ್ಕೊಳೋದಿಲ್ಲ.

ಇದರಿಂದ ಈ ವೈದ್ಯರಿಗೆ ಆರ್ಥಿಕವಾಗಿ ತುಂಬಾನೇ ನಷ್ಟವಾಗುತ್ತದೆ ಹಾಗೂ ಆಸ್ಪತ್ರೆ ನಡೆಸಲು ಹಣದ ಕೊರತೆ ಉಂಟಾಗುತ್ತದೆ ಅನ್ನೋದನ್ನ ಕೂಡ ಹೇಳುತ್ತಾರೆ ಆದ್ರೆ ನಾವು ಮಾಡುವಂತ ಕೆಲಸ ನಮಗೆ ಆತ್ಮ ತೃಪಿ ನೀಡುತ್ತದೆ ಅನ್ನೋದನ್ನ ಹೇಳುತ್ತಾರೆ ಇವರ ಈ ಕಾರ್ಯಕ್ಕೆ ಮೆಚ್ಚಿ ಪ್ರಧಾನಿ ಮೋದಿಯವರು ವಾರಣಾಸಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಡಾಕ್ಟರ್ ಶಿಪ್ರಾ ಬಗ್ಗೆ ತಿಳಿದು ತುಂಬಾ ಪ್ರಭಾವಿತರಾಗಿ. ನಂತರ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ದೇಶದ ಎಲ್ಲಾ ವೈದ್ಯರಿಗೆ ಪ್ರತಿ ತಿಂಗಳು 9 ರಂದು ಜನಿಸಿದ ಹೆಣ್ಣು ಮಗುವಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಕರೆ ನೀಡಿದ್ದರು.
ಅಷ್ಟೇ ಅಲ್ಲದೆ ಈ ವೈದ್ಯೆ ಬಡವರಿಗಾಗಿ ಉತ್ತಮ ಪೌಷ್ಟಿಕಾಂಶ ನೀಡಲು ಟಾಲಾ ೧೦ ಕೆಜಿ ಗೋದಿ ಮತ್ತು ೫ ಕೆಜಿ ಅಕ್ಕಿಯನ್ನು ವಿಧವೆಯರಿಗೆ ಹಾಗು ಬಡವರಿಗೆ ನಿರ್ಗತಿಕರಿಗೆ ಒದಗಿಸುತ್ತಾರೆ. ಇವರಿಂದ ಸ್ಪೂರ್ತಿಗೊಂಡ ಬೇರೆ ವೈದ್ಯರು ಕೂಡ ಇವರ ಜೊತೆ ಈ ಸಾಮಾಜಿಕ ಕಾರ್ಯಕ್ಕೆ ಜೋಡಿಸಿದ್ದಾರೆ.