India’s Smart Village: ಒಬ್ಬ ಸಾಮಾನ್ಯ ಗ್ರಾಮಪಂಚಾಯ್ತಿ ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಮಾಡಿದ್ದಾರೆ ಗೊತ್ತಾ? ಇಂತ ವ್ಯಕ್ತಿ ನಮ್ಮೂರಿಗೂ ಬೇಕು ಅಂತಿದಾರೆ ನೆಟ್ಟಿಗರು

India’s Smart Village: ನಮ್ಮ ಭಾರತ ದೇಶ (India) ಗ್ರಾಮ ಹಾಗೂ ಸಾಕಷ್ಟು ಹಳ್ಳಿಗಳನ್ನು ಹೊಂದಿರುವಂತ ದೇಶವಾಗಿದೆ (country) ದೇಶ ಅಭಿವೃದ್ಧಿಯಾಗಬೇಕು ಅನ್ನೋದಾದ್ರೆ ಮೊದಲು ಹಳ್ಳಿಯಿಂದ ಅಭಿವೃದ್ಧಿ ಕಾರ್ಯಗಳು ಆಗಬೇಕು. ಹಳ್ಳಿ ಅಥವಾ ಗ್ರಾಮ ಅಭಿವೃದ್ಧಿಗೆ ಗ್ರಾಮ ಪಂಚಾಯ್ತಿಗಳು ಹೆಚ್ಚಾಗಿ ಕೆಲಸ ಮಾಡಬೇಕಾಗುತ್ತೆ. ಆದ್ರೆ ನಮ್ಮ ದೇಶದಲ್ಲಿ ಇವತ್ತಿಗೂ ಸಹ ಸರಿಯಾಗಿ ಅಭಿವೃದ್ಧಿಯಾಗದೇ ಉಳಿದಿರುವಂತ ಸಾಕಷ್ಟು ಗ್ರಾಮಗಳು ನಮ್ಮ ಕಣ್ಣ ಮುಂದೆ ಇದೆ.

ಹೌದು ನಾವು ಇವತ್ತು ನಿಮಗೆ ತಿಳಿಸಲು ಹೊರಟಿರುವ ವಿಚಾರ ಏನು ಅಂದ್ರೆ ಒಬ್ಬ ಸಾಮಾನ್ಯ ಗ್ರಾಮಪಂಚಾಯ್ತಿ (Gram Panchayat) ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಮಾಡಬಹುದು ಅನ್ನೋದನ್ನ ಈ ವ್ಯಕ್ತಿ ಮಾಡಿ ತೋರಿಸಿದ್ದಾರೆ ಹಾಗೂ ಸಾಕಷ್ಟು ಜನಕ್ಕೆ ಇವರು ಮಾದರಿಯಾಗಿದ್ದಾರೆ. ನಿಜಕ್ಕೂ ಇವರು ಯಾರು ಇದು ಹೇಗೆ ಸಾಧ್ಯ ಆಯಿತು ಅನ್ನೋದನ್ನ ಮುಂದೆ ತಿಳಿಸುತ್ತಾ ಹೋಗುತ್ತೇವೆ ನೋಡಿ

ಇದು ನಮ್ಮ ರಾಜ್ಯದಲ್ಲಿ ಆಗಿರುವಂತದ್ದು ಅಲ್ಲಾ ಪಕ್ಕದ ರಾಜ್ಯ ತಮಿಳುನಾಡಿನ (tamilnadu) ಕೊಯಂಬತ್ತೂರು ಜಿಲ್ಲೆಯ ಪೆಟ್ಟು ಮಲ್ಯಮ್ ತಾಲೂಕಿನ ವದಂಟುರೈ ಗ್ರಾಮದಲ್ಲಿ ಆಗಿರುವಂತದ್ದು, ಹೌದು ಈ ಹಳ್ಳಿಗೆ ಹೋದ್ರೆ ಸಾಕು ನಗರಕ್ಕೆ ಅಂದರೆ ಸಿಟಿಗೆ ಬಂದಿರುವ ಹಾಗೆ ಅನಿಸುತ್ತೆ ಅಷ್ಟರ ಮಟ್ಟಿಗೆ ಸ್ವಚ್ಛತೆ ಹಾಗೂ ಮನೆಗಳ ನಿರ್ಮಾಣ ಹಾಗೂ ರಸ್ತೆ ನೀರಿನ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಒದಗಿಸಿ ಕೊಡಲಾಗಿದೆ. ಅಷ್ಟೇ ಅಲ್ಲ ಅಲ್ಲಿನ ಜನ ಕೂಡ ಸ್ವಚ್ಛತೆಯನ್ನು ಕಾಪಾಡುವಲ್ಲಿ ಮುಂದಾಗಿದ್ದಾರೆ

ಒಂದು ಕಾಲದಲ್ಲಿ ಕುಡಿಯುವ ನೀರಿಗಾಗಿ ಸುಮಾರು ಕಿಲೋಮೀಟರ್ ನಷ್ಟು ದೂರ ಹೋಗಿ ತರಬೇಕಾದ ಪರಿಸ್ಥಿತಿ ಇತ್ತು ಹಾಗೂ ಸರಿಯಾದ ವಿದ್ಯುತ್ ಇರಲಿಲ್ಲ ಹತ್ತಾರು ಕುಂದು ಕೊರತೆಗಳಿಂದ ತುಂಬಿರುವಂತ ಗ್ರಾಮ ಇದಾಗಿತ್ತು, ಇದರಿಂದ ಬೇಸತ್ತ ಜನ ಸಿಟಿ ಅಥವಾ ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದರು. ದಿನೆ ದಿನೆ ಊರಿನಲ್ಲಿ ಜನಸಂಖ್ಯೆ ಕಡಿಮೆಯಾಗುತ್ತ ಬಂತು

ಇಂತಹ ಪರಿಸ್ಥಿತಿಯನ್ನು ಗಮನಿಸಿದ ಗ್ರಾಮಪಂಚಾಯ್ತಿ ಅಧ್ಯಕ್ಷ ಆರ್ ಷಣ್ಮುಗಂ ಅವರು ಹೇಗಾದರೂ ಮಾಡಿ ತನ್ನ ಗ್ರಾಮವನ್ನು ಸುಂದರ ಹಾಗೂ ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದು ದೃಢ ನಿರ್ಧಾರವನ್ನು ಮಾಡಿ ಹಲವಾರು ಯೋಜನೆಗಳನ್ನು ಕೈಗೊಂಡರು ಮೊದಲನೆಯದಾಗಿ ಸರ್ಕಾರದಿಂದ ಬರುವ ಯೋಜನೆಯನ್ನು ಸರಿಯಾಗಿ ಬಳಸಿಕೊಂಡು ಮನೆ ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ, ನಂತರ ಒಂದೊಂದೇ ಕೆಲಸಗಳನ್ನು ಪೂರೈಸುತ್ತಾ ಬರುತ್ತಾರೆ ಹಾಗೂ ಸರಕಾರದಿಂದ ಬರುವಂತ ಹಲವು ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಊರಿನ ಅಭಿವೃದ್ಧಿ ಮಾಡುವಲ್ಲಿ ಇವರು ಯಶ್ವಸಿಯಾಗಿದ್ದಾರೆ

ಒಟ್ಟಾರೆಯಾಗಿ ಇವರ ಊರು ನಗರ ರೀತಿಯಲ್ಲಿ ಅಭಿವೃದ್ಧಿಯಾಗಿದೆ, ಹಾಗೂ ನೋಡಲು ಕೂಡ ಸೀಟಿ ರೀತಿಯಲ್ಲಿ ಅನಿಸುತ್ತೆ, ಅದೇನೇ ಇರಲಿ ಇವರ ಕೆಲಸಕ್ಕೆ ಸರ್ಕಾರ ಕೂಡ ಮೆಚ್ಚಿ ಗೌರವ ಸಲ್ಲಿಸಿದೆ, ಅದೇ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಅಭಿವೃದ್ಧಿಯಾಗಲಿ ಅನ್ನೋದೇ ನಮ್ಮ ಆಶಯ ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ

Leave a Comment

error: Content is protected !!