Chanakya Neethi: ಮಹಿಳೆಯರನ್ನು ಆಕರ್ಷಿಸಲು ಪುರುಷರು ಈ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಚಾಣಕ್ಯರೆ ಹೇಳಿರುವ ಮಾತಿದು.

Chanakya Neethi ಜೀವನದಲ್ಲಿ ಯಶಸ್ವಿಯಾಗಲು ಮಹಾಮೇಧಾವಿ ಚಾಣಕ್ಯರು ಬರೆದಿರುವಂತಹ ಚಾಣಕ್ಯ ಗ್ರಂಥವನ್ನು ಪ್ರತಿಯೊಬ್ಬರೂ ಕೂಡ ಅಧ್ಯಯನ ಮಾಡಲು ಇಷ್ಟಪಡುತ್ತಾರೆ ಹಾಗೂ ಅದರಿಂದ ಯಶಸ್ಸನ್ನು ಪಡೆದವರು ಕೂಡ ಇದ್ದಾರೆ. ಆರ್ಥಿಕವಾಗಿ ಹಾಗೂ ಜೀವನದಲ್ಲಿ ಮಾನಸಿಕವಾಗಿ ಕೂಡ ತಮ್ಮನ್ನು ಸದೃಢರನ್ನಾಗಿಸಲು ಚಾಣಕ್ಯರ ಚಾಣಕ್ಯ ನೀತಿ ಗ್ರಂಥ ಪ್ರಮುಖವಾಗಿದೆ ಎನ್ನಬಹುದಾಗಿದೆ.

ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬ ಪುರುಷನು ಕೂಡ ತನಗೆ ಇಷ್ಟವಾಗಿರುವಂತಹ ಮಹಿಳೆಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಲು ಇಷ್ಟಪಡುತ್ತಾನೆ. ಆದರೆ ತಾನು ಇಷ್ಟಪಡುವಂತಹ ಮಹಿಳೆಗೆ ತಾನು ಹೇಗೆ ಇಷ್ಟ ಆಗಬಲ್ಲೆ ಎನ್ನುವ ಕುರಿತಂತೆ ಪ್ರತಿಯೊಬ್ಬರೂ ಕೂಡ ಯೋಚಿಸುತ್ತಲೇ ಇರುತ್ತಾರೆ. ಇದಕ್ಕೆ ಕೂಡ ಚಾಣಕ್ಯ ನೀತಿಯಲ್ಲಿ ಸರಿಯಾದ ಉಪಾಯವನ್ನು ನೀಡಿದ್ದು ಕೆಲವೊಂದು ಸ್ವಭಾವಗಳು ಪುರುಷರಲ್ಲಿ ಮಹಿಳೆಯರನ್ನು ಆಕರ್ಷಿಸುತ್ತದೆ. ಹಾಗಿದ್ದರೆ ಅವುಗಳು ಯಾವುವು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಪುರುಷರಲ್ಲಿ ಮಹಿಳೆಯರು ಮೊದಲು ನೋಡುವಂತಹ ಗುಣ ಸ್ವಭಾವ ಎಂದರೆ ಅದು ಪ್ರಾಮಾಣಿಕತೆ. ಯಾವತ್ತೂ ಕೂಡ ಮೋಸ ಮಾಡದಂತಹ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ನಿಭಾಯಿಸುವಂತಹ ಪುರುಷರ ಕಡೆಗೆ ಅವರು ತಮ್ಮ ಆಸಕ್ತಿಯನ್ನು ತೋರಿಸುತ್ತಾರೆ. ತಮ್ಮ ಮಾತನ್ನು ಎಚ್ಚರಿಕೆಯಿಂದ ಗಂಭೀರವಾಗಿ ಗಮನವಹಿಸಿ ಕೇಳುವಂತಹ ಹಾಗೂ ಅದನ್ನು ಪಾಲನೆ ಮಾಡುವಂತಹ ಪುರುಷರನ್ನು ಮಹಿಳೆಯರು ಅತ್ಯಂತ ಇಷ್ಟಪಡುತ್ತಾರೆ ಎಂಬುದಾಗಿ ಕೂಡ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಜೀವನದ ಎಲ್ಲಾ ವಿಚಾರಗಳನ್ನು ಕೂಡ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ರೀತಿಯಲ್ಲಿ ಅವರ ವ್ಯಕ್ತಿತ್ವ ಇರಬೇಕು ಎಂಬುದಾಗಿ ಮಹಿಳೆಯರು ಬಯಸುತ್ತಾರೆ. ತಮ್ಮ ಕುರಿತಂತೆ ಕೇರಿಂಗ್ ಸ್ವಭಾವವನ್ನು ಹೊಂದಿರಬೇಕು ಎನ್ನುವುದಾಗಿ ಕೂಡ ಅವರು ಬಯಸುತ್ತಾರೆ. ಅವರ ಹಣಕ್ಕಿಂತ ಹೆಚ್ಚಾಗಿ ಅವರ ಸಮಯವನ್ನು ಮಹಿಳೆಯರು ನಿರೀಕ್ಷೆ ಮಾಡಿರುತ್ತಾರೆ. ಇವೆಲ್ಲ ವಿಚಾರಗಳನ್ನು ಒಬ್ಬ ಪುರುಷನನ್ನು ಇಷ್ಟಪಡುವುದಕ್ಕಿಂತ ಮುಂಚೆ ಮಹಿಳೆಯರು ನೋಡುತ್ತಾರೆ. ಈ ವಿಚಾರಗಳು ಚಾಣಕ್ಯರ ಗ್ರಂಥದಲ್ಲಿ ಉಲ್ಲೇಖಿತವಾಗಿದ್ದು ಜೀವನದಲ್ಲಿ ಪರಿಣಾಮಕಾರಿ ಅಂಶಗಳನ್ನು ಕೂಡ ಇದು ಮೂಡಿಸುವಂತಹ ಸಾಧ್ಯತೆ ಹೆಚ್ಚಿದೆ.

Leave a Comment

error: Content is protected !!