Chanakya Neethi: ಪುರುಷರಿಗಿಂತ ಮಹಿಳೆಯರು ಈ 8 ವಿಷಯದಲ್ಲಿ ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ.

Chanakya Neethi ಭಾರತದ ಇತಿಹಾಸವನ್ನು ಗಮನಿಸುವುದಾದರೆ ಚಂದ್ರಗುಪ್ತ ಮೌರ್ಯಂತಹ ಸಾಮಾನ್ಯ ಬಾಲಕನನ್ನು ಚಾಣಕ್ಯರು ಮೌರ್ಯ ಸಾಮ್ರಾಜ್ಯದ ಚಕ್ರಾಧಿಪತಿಯನ್ನಾಗಿ ಮಾಡಿರುವ ಕಥೆ ನಿಮ್ಮೆಲ್ಲರಿಗೂ ತಿಳಿದಿರಬಹುದು. ಅಷ್ಟು ಮೇಧಾವಿಗಳಾಗಿದ್ದ ಆಚಾರ್ಯ ಚಾಣಕ್ಯರು(Acharya Chanakya) ಬರೆದಿರುವಂತಹ ಚಾಣಕ್ಯ ಗ್ರಂಥ ಇಂದಿಗೂ ಕೂಡ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಓದಲೇ ಬೇಕಾಗಿರುವ ಗ್ರಂಥವಾಗಿದೆ. ಇದೇ ಗ್ರಂಥದಲ್ಲಿ ಎಂಟು ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಿದ್ದಾರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು ಎನ್ನುವುದು ಸಾಕಷ್ಟು ಹೆಚ್ಚಾಗಿರುತ್ತದೆ ಎಂಬುದಾಗಿ ಕೂಡ ಚಾಣಕ್ಯ(Chanakya) ನೀತಿಯಲ್ಲಿ ಉಲ್ಲೇಖವಾಗಿದೆ. ಇಷ್ಟು ಮಾತ್ರವಲ್ಲದೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಾಚಿಕೆ ಸ್ವಭಾವ ಕೂಡ ಹೆಚ್ಚಾಗಿರುತ್ತದೆ. ಹೆಣ್ಣಿನ ನಾಚಿಕೆಯನ್ನು ಹೋಲಿಸಿ ಹಲವಾರು ಗ್ರಂಥಗಳನ್ನೇ ಬರೆಯಲಾಗಿದೆ ಇದು ಕೂಡ ನೀವೆಲ್ಲರೂ ತಿಳಿದುಕೊಳ್ಳ ಬೇಕಾಗಿರುವಂತಹ ವಿಚಾರ.

Chanakya

ಪುರುಷರನ್ನು ಸಾಹಸ ಮತ್ತು ಧೈರ್ಯಕ್ಕೆ ಪ್ರತೀಕವಾಗಿ ಉಲ್ಲೇಖಿಸಲಾಗುತ್ತದೆ. ಆದರೆ ನಿಜಕ್ಕೂ ಹೇಳಬೇಕೆಂದರೆ ಚಾಣಕ್ಯ ನೀತಿಯ ಪ್ರಕಾರ ಸಾಹಸ ಹಾಗೂ ಧೈರ್ಯದ ವಿಚಾರವಾಗಿ ಪುರುಷರಿಗಿಂತಲೂ ಅಧಿಕವಾಗಿ ಮಹಿಳೆಯರು ಈ ಕುರಿತಂತೆ ಅಧಿಕತೆಯನ್ನು ಹೊಂದಿರುತ್ತಾರೆ. ಇನ್ನು ಕಾ’ಮದ ವಿಚಾರದಲ್ಲಿ ಕೂಡ ಪುರುಷರನ್ನು ಮಹಿಳೆಯರು ಸಾಕಷ್ಟು ದೊಡ್ಡ ಮಟ್ಟದ ಅಂತರದಿಂದ ಮೀರಿಸುತ್ತಾರೆ. ಇದನ್ನು ಕೂಡ ಈಗಾಗಲೇ ಮಹಾಮೇಧಾವಿ ಆಚಾರ್ಯ ಚಾಣಕ್ಯರ ಚಾಣಕ್ಯ ನೀತಿ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ಪುರುಷರಿಗಿಂತ ಮಹಿಳೆಯರು ತಾಳ್ಮೆ ಹಾಗೂ ಸಹಾನುಭೂತಿಯಲ್ಲಿ ಕೂಡ ಸಾಕಷ್ಟು ಮುಂದಿದ್ದಾರೆ. ಯಾವುದೇ ವಿಚಾರಗಳಿಗೂ ಅವರು ಕೂಡಲೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದೇ ವಿಚಾರದಲ್ಲಿ ಕೂಡ ಕೂಡಲೇ ಕೋಪಗೊಳ್ಳುವುದಕ್ಕೆ ಹೋಗುವುದಿಲ್ಲ ಅವರಲ್ಲಿ ತಾಳ್ಮೆ ಶಕ್ತಿ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಭೂಮಿಯ ತೂಕದ ಕರುಣೆ ವಾತ್ಸಲ್ಯ ಎನ್ನುವುದು ಕೂಡ ಅವರಲ್ಲಿ ಇರುತ್ತದೆ ಹೀಗಾಗಿ ಎಲ್ಲರನ್ನು ಕ್ಷಮಿಸುವ ಗುಣ ಪುರುಷರಿಗಿಂತ ಹೆಚ್ಚಾಗಿದೆ. ಈ ಎಲ್ಲಾ ವಿಚಾರಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಳವನ್ನು ಹೊಂದಿದ್ದಾರೆ ಎಂಬುದಾಗಿ ಚಾಣಕ್ಯ ನೀತಿ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

Leave a Comment

error: Content is protected !!