ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅಜ್ಜಿಗೆ ಈ ಅಧಿಕಾರಿ ಮಾಡಿದ ಸಹಾಯವೇನು ಗೊತ್ತೇ

ಐಎಎಸ್ ಅಧಿಕಾರಿ ಬಡ ಅಜ್ಜಿಗೆ ಸಹಾಯ ಮಾಡಿ ದೇವರಾದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಲವು ಮನೆಗಳಲ್ಲಿ ಕರೆಂಟ್ ಇರುವುದಿಲ್ಲ. ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಕದ್ದು ಮುಚ್ಚಿ ಕರೆಂಟ್ ಹಾಕಿಕೊಂಡಿರುತ್ತಾರೆ. ಈ ರೀತಿ ಅಕ್ರಮವಾಗಿ ಕರೆಂಟ್ ಬಳಸುವ ಮನೆಗಳನ್ನು ಪತ್ತೆಹಚ್ಚಲು ಭೀಮಸಿಂಗ್ ಎನ್ನುವ ಐಏಎಸ್ ಅಧಿಕಾರಿ ಛತ್ತೀಸ್ ಗರ್ ರಾಜ್ಯದ ರಾಜನಂದಗಾಂವ್ ನಲ್ಲಿ ಪರಿಶೀಲನೆ ನಡೆಸುತ್ತಾರೆ. ಆಗ ವಯಸ್ಸಾದ ಬಡ ಮಹಿಳೆಯು ಮನೆ ಹೊರಗೆ ಕುಳಿತಿರುತ್ತಾರೆ. ಆಗ ಭೀಮಸಿಂಗ್ ಯಾಕಜ್ಜಿ ಇಲ್ಲಿ ಕೂತಿದ್ದಿಯ ಎಂದು ಕೇಳುತ್ತಾರೆ. ಆಗ ಅಜ್ಜಿ ಈ ಮನೆ ತುಂಬಾ ಚಿಕ್ಕದು ಬುದ್ದಿ ಮನೆಯೊಳಗೆ ಕತ್ತಲೆ ಇರುತ್ತದೆ ಅದಕ್ಕೆ ಆಚೆ ಕೂತಿದ್ದಿನಿ ಎನ್ನುತ್ತಾರೆ.

ಆಗ ಮನೆಯೊಳಗೆ ಹೋಗಿ ಪರಿಶೀಲಿಸಿ ಬಂದ ಕಲೆಕ್ಟರ್ ಯಾಕೆ ಅಜ್ಜಿ ಮನೆಗೆ ಕರೆಂಟ್ ಹಾಕಿಸಿಲ್ಲಾ ಎಂದು ಕೇಳುತ್ತಾನೆ. ಆಗ ಅಜ್ಜಿ ಇಲ್ಲಪ್ಪಾ ಇದು ಮಣ್ಣಿನಿಂದ ಕಟ್ಟಿದ ಮನೆ ಮಳೆ ಬಂದಾಗ ನೀರು ಒಳಗೆ ನುಗ್ಗುತ್ತದೆ ಹೀಗಿರುವಾಗ ಕರೆಂಟ್ ಹೇಗೆ ಹಾಕಿಸಲಿ ಎನ್ನುತ್ತಾರೆ ಅಜ್ಜಿ. ಕೂಡಲೇ ತನ್ನ ಸ್ವಂತ ಖರ್ಚಿನಿಂದ ಐಏಎಸ್ ಅಧಿಕಾರಿ ಮನೆಗೆ ಸೋಲಾರ್ ಲೈಟ್ ಹಾಕಿಸುತ್ತಾರೆ ಜೊತೆಗೆ ಸರ್ಕಾರದಿಂದ ಬಡವರಿಗೆ ಮನೆ ಕೊಡುತ್ತಾರೆ ಅಲ್ಲಿಗೆ ನಿನ್ನನ್ನು ಶಿಫ್ಟ್ ಮಾಡಿಸುತ್ತೇನೆ ಎಂದು ಹೇಳಿ ಅಜ್ಜಿಗೆ ತಿಂಗಳು ತಿಂಗಳು ಸರ್ಕಾರದಿಂದ ಪೆನ್ಷನ್ ಬರುವಂತೆ ಮಾಡಿದ್ದಾರೆ.

ಈ ಕೆಲಸಕ್ಕೆ ಭೀಮಸಿಂಗ್ ಅವರಿಗೆ ಶಭಾಷ್ ಎನ್ನುತ್ತಿದ್ದಾರೆ. ಲಂಚ ಪಡೆಯದೆ ಸ್ವಾರ್ಥಕ್ಕಾಗಿ ಕೆಲಸ ಮಾಡದೆ ಜನರಿಗಾಗಿ ಸೇವೆ ಮಾಡಿದರೆ ಅವರನ್ನು ದೇವರಂತೆ ಕಾಣುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

Leave a Comment

error: Content is protected !!