ಅಮೆರಿಕದ ಕಂಪನಿಯನ್ನು ಇಂಪ್ರೆಸ್ ಮಾಡಿದ 15 ವರ್ಷದ ಯುವಕ ಈತನಿಗೆ ಆಫರ್ ಮಾಡಿದ ಸಂಬಳ ಎಷ್ಟು ಗೊತ್ತಾ!


ಸಾಧನೆ ಮಾಡೋದಕ್ಕೆ ಯಾವ ವಯಸ್ಸಿನ ಮಿತಿಯು ಇಲ್ಲ, ಜಾತಿ ಧರ್ಮದ ಹಂಗು ಮೊದಲೇ ಇಲ್ಲ ಹಾಗಾಗಿ ಯಾರಾದ್ರೂ ಛಲತೊಟ್ಟು ತಾನು ಇಂಥದ್ದನ್ನು ಸಾಧಿಸಲೇಬೇಕು ಎಂದು ಹಠ ತೊಟ್ಟರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಮುಖ್ಯವಾಗಿ ಬೇಕಾಗಿದ್ದೇ ಸಾಧಿಸುವ ಛಲ ಹಾಗೂ ಪ್ರಯತ್ನ. ಇನ್ನೊಬ್ಬ 15ರ ಪೋರ ಅಮೆರಿಕಾದ ಪ್ರತಿಷ್ಠಿತ ಜಾಹೀರಾತು ಕಂಪನಿಯಲ್ಲಿ ಇಂಪ್ರೆಸ್ ಮಾಡಿದ್ದಾನೆ. ಇತ ಮಾಡಿದ ಸಾಧನೆ ಕೇಳಿದ್ರೆ ಖಂಡಿತವಾಗಿಯೂ ನೀವು ದಂಗಾಗೀ ಬಿಡುತ್ತೀರಿ.

ಹೌದು. ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿರುವ ಹುಡುಗ ಈತ. ಈತನಿಗೆ ಮೀಸೆಯೇ ಸರಿಯಾಗಿ ಚಿಗುರಿಲ್ಲ ಆದರೆ ಅವನ ಸಾಧನೆ ಮಾತ್ರ ಎಲ್ಲರೂ ತಲೆಯೆತ್ತಿ ನೋಡುವಷ್ಟು! ಆತನ ಹೆಸರು ವೇದಾಂತ ದಿಯೋಕಟೆ. ವೆಬ್ಸೈಟ್ ಡೆವಲಪ್ಮೆಂಟ್ ಕಾಂಪಿಟೇಶನ್ ನಲ್ಲಿ ವಿಶ್ವದ ಸಾವಿರಕ್ಕೂ ಅಧಿಕ ಸ್ಪರ್ಧಿಗಳನ್ನು ಹಿಂದಕ್ಕೆ ಮಹಾನ್ ಸಾಧಕ ಈತ. ವೇದಾಂತ್ ನ ಸಾಧನೆಗೆ ಅಮೆರಿಕಾದ ನ್ಯೂಜರ್ಸಿಯ ಜಾಹಿರಾತು ಕಂಪನಿಯೊಂದು ದೊಡ್ಡ ಪ್ಯಾಕೇಜ್ ಇರುವ ಜಾಬ್ ಅನ್ನು ಆಫರ್ ಮಾಡಿದೆ.

ಹೌದು ಈ ಕಂಪನಿ 33 ಲಕ್ಷ ರೂಪಾಯಿ ಪ್ಯಾಕೇಜ್ ನೀಡಿ ತಮ್ಮಲ್ಲಿ ಜಾಬ್ ಗೆ ಸೇರುವಂತೆ ಆಫರ್ ನೀಡಿದೆ. ವೇದಾಂತ್ ನಾಗಪುರದ ಹುಡುಗ. ಅಮ್ಮನ ಹಳೆಯ ಲ್ಯಾಪ್ಟಾಪ್ ಅನ್ನ ಇಟ್ಕೊಂಡು, ವೆಬ್ಸೈಟ್ ಡೆವಲಪ್ಮೆಂಟ್ ಕಾಂಪಿಟೇಶನ್ ಒಂದರಲ್ಲಿ ಪಾಲ್ಗೊಂಡಿದ್ದ. ಕೇವಲ ಎರಡು ದಿನಗಳಲ್ಲಿ 2066 ಕೋಡ್ ಲೈನ್ ಗಳನ್ನು ಬರೆದಿದ್ದ ವೇದಾಂತ್. ಇದೆ ವೇದಾಂತ್ ಗೆ ಅಮೆರಿಕ ಕಂಪನಿ ಕೆಲಸ ನೀಡಲು ಮುಖ್ಯವಾದ ಕಾರಣ.

ವಿಶ್ವದ ಸಾವಿರ ಸ್ಪರ್ಧಿಗಳಲ್ಲಿ ನಮ್ಮ ದೇಶದ ವೇದಾಂತ ಮೊದಲಿಗ ಎನ್ನುವುದೇ ಹೆಮ್ಮೆ. ಅಮೆರಿಕ ಕಂಪನಿ ಜಾಬ್ ಆಫರ್ ನೀಡಿತ್ತು ಆದರೆ ಈತನಿಗೆ 15 ವರ್ಷ ಎನ್ನುವ ಕಾರಣಕ್ಕೆ ಆಫರ್ ಅನ್ನು ಹಿಂಪಡೆದುಕೊಂಡಿದೆ. ಆದರೆ ನೀನು ಓದನ್ನ ಕಂಪ್ಲೀಟ್ ಮಾಡಿದ ಮೇಲೆ ಖಂಡಿತವಾಗಿಯೂ ಕೆಲಸಕ್ಕೆ ನಮ್ಮನ್ನು ಸಂಪರ್ಕಿಸು ಅಂತ ವೇದಾಂತ ಅವರಿಗೆ ಈ ಕಂಪನಿ ಪ್ರಾಮಿಸ್ ಮಾಡಿದೆ.

ವೇದಾಂತ ಡೆವಲಪ್ ಮಾಡಿರುವ ವೆಬ್ಸೈಟ್ animeeditor.com ಇದರಲ್ಲಿ ಯೂಟ್ಯೂಬ್ ನಂತೆ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಅಲ್ಲದೆ ಇನ್ನಷ್ಟು ಫೀಚರ್ಸ್ ಗಳು ಇದರಲ್ಲಿ ಇದ್ದು, ಬ್ಲಾಗಿಂಗ್, ವ್ಲೋಗಿಂಗ್, ಚಾಟ್ ಮೊದಲದ ಫೀಚರ್ ಗಳನ್ನ ಆ ತರ ಡೆವಲಪ್ ಮಾಡಿದ್ದಾನೆ.

ಮಗ ಓದಿನ ಕಡೆ ಗಮನ ಕೊಡಲಿ ಅಂತ ತಾಯಿ ಲ್ಯಾಪ್ಟಾಪ್ ಅನ್ನು ಕೊಡಿಸಿರಲಿಲ್ಲ ಆದರೂ ತಾಯಿಯ ಹಳೆ ಲ್ಯಾಪ್ ಟಾಪ್ ನ್ನೇ ಇಟ್ಟುಕೊಂಡು ವೆಬ್ಸೈಟ್ ಅನ್ನ ಡೆವಲಪ್ ಮಾಡಿದ್ದಾನೆ ವೇದಾಂತ.  ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಹಾಗೂ ಆತನ ಬುದ್ಧಿವಂತಿಕೆಗೆ ನಿಜಕ್ಕೂ ಶಹಭಾಷ್ ಹೇಳಲೇಬೇಕು.


Leave A Reply

Your email address will not be published.