Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುವುದನ್ನು ತಪ್ಪಿಸಲು ಇಲ್ಲಿದೆ ನೋಡಿ ಸುಲಭ ಮದ್ದು!

Skin Care ತ್ವಚೆಯ ಸುರಕ್ಷೆ ಎನ್ನುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲಿ ವಿಶೇಷವಾಗಿ ಯುವತಿಯರು ತಮ್ಮ ಸ್ಕಿನ್ ಕೇರ್(Skin Care) ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿ ದುಬಾರಿ ಮೊತ್ತದ ಸ್ಕಿನ್ ಕೇರ್ ಪ್ರಾಡಕ್ಟ್ ಗಳನ್ನು ಕೂಡ ಉಪಯೋಗಿಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅದರ ಸೈಡ್ ಎಫೆಕ್ಟ್ ನಿಂದಾಗಿ ಅನಾಹುತಗಳು ಕೂಡ ಸಂಭವಿಸಬಹುದು. ಹೀಗಾಗಿ ಬೇಸಿಗೆ ಕಾಲದಲ್ಲಿ ಸ್ಕಿನ್ ಕೇರ್ ಕುರಿತಂತೆ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಟಿಪ್ಸ್(Tips) ಗಳನ್ನು ಅನುಸರಿಸಬಹುದು ಎನ್ನುವುದಕ್ಕೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೇಸಿಗೆ ಸಂದರ್ಭದಲ್ಲಿ ಸ್ಕಿನ್ ಕೇರ್ ವಿಚಾರದಲ್ಲಿ ಮೊದಲಿಗೆ ಕಂಡುಬರುವಂತಹ ಸಮಸ್ಯೆ ಎಂದರೆ ಅದು ತೇವಾಂಶದ(Moisture) ಕೊರತೆ. ನೀರಿನಂಶ ಚರ್ಮದಿಂದ ಒಣಗಿ ಹೋಗಿಬಿಡುತ್ತದೆ. ಈ ಸಂದರ್ಭದಲ್ಲಿ ಚರ್ಮದ ಟ್ಯಾನಿಂಗ್ ಹೊಡೆದು ಹೋಗುವಿಕೆ ಸೇರಿದಂತೆ ಇನ್ನಿತರ ಚರ್ಮದ ಸೋಂ’ ಕುಗಳು ಕೂಡ ಬರಬಹುದಾಗಿದೆ. ಹೀಗಾಗಿ ಚರ್ಮದ ಆರೋಗ್ಯದ ಕುರಿತಂತೆ ಸರಿಯಾದ ಪರಿಹಾರವನ್ನು ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತಾಪತ್ರಯ ಎದುರಿಸಬೇಕಾದಂತಹ ಸಾಧ್ಯತೆ ಇರುತ್ತದೆ.

ಮೊದಲಿಗೆ ನಿಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವುದರಿಂದ ಈ ಸಮಸ್ಯೆಗಳಿಂದ ಪಾರಾಗಬಹುದು ಹೀಗಾಗಿ ದಿನ ನಿತ್ಯ ನೀರಿನ ಅತಿಯಾದ ಸೇವನೆಯನ್ನು ಮಾಡುವುದು ದೇಹಕ್ಕೆ ಬೇಸಿಗೆಕಾಲದಲ್ಲಿ ಲಾಭವನ್ನು ತಂದುಕೊಡುತ್ತದೆ. ಮಣ್ಣಿನ ತಾಜಾ ರಸ ಕೋಕೋನಟ್ ವಾಟರ್(Coconut Water) ವಾಟರ್ ಮಿಲನ್ ಹಣ್ಣು ಸೇರಿದಂತೆ ಇನ್ನಿತರ ನೀರಿನ ಅಂಶ ಹೆಚ್ಚಿರುವಂತಹ ನೈಸರ್ಗಿಕ ಆಹಾರವನ್ನು ಬಳಸುವುದು ಅಥವಾ ಸೇವಿಸುವುದು, ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಈ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಹಾಗೂ ಬೇಸಿಗೆ ಸಮಯದಲ್ಲಿ ಸನ್ಸ್ಕ್ರೀನ್ ಕ್ರೀಮ್ಗಳನ್ನು ನಿಮ್ಮ ದೇಹಕ್ಕೆ ಹಾಕಿಕೊಳ್ಳುವುದು ಕೂಡ ಒಳ್ಳೆಯದು. ರೋಸ್ ವಾಟರ್ ಅನ್ನು ಬಳಸುವುದು ಕೂಡ ನಿಮ್ಮ ಸ್ಕಿನ್ ನ ಆರೋಗ್ಯವನ್ನು ಕಾಪಾಡುತ್ತದೆ. ರಾತ್ರಿಯ ಸಂದರ್ಭದಲ್ಲಿ ನಿಮ್ಮ ತ್ವಚೆಗೆ ಅಲೋವೆರಾ ಮಾಯಿಶ್ಚರೈಸರ್(Alovera Moisturizer) ಅನ್ನು ಅಳವಡಿಸಿ.

Leave a Comment

error: Content is protected !!