ಗರ್ಭಿಣಿ ಮಹಿಳೆಯರು ಕೇಸರಿ ತಿಂದ್ರೆ ಒಳ್ಳೆದಾ?

ಮದುವೆ ಸಮಾರಂಭಗಳಲ್ಲಿ ಕೇಸರಿ ಬಾತ್ ಮಾಡುವುದು ಸಾಮಾನ್ಯವಾಗಿದೆ. ಗರ್ಭಿಣಿ ಮಹಿಳೆಯರು ಕೇಸರಿ ತಿನ್ನಬೇಕು ಇದರಿಂದ ಮಗು ಸುಂದರವಾಗಿ, ಬೆಳ್ಳಗೆ ಹುಟ್ಟುತ್ತದೆ ಎಂಬ ನಂಬಿಕೆ ಇದೆ ಇದು ಸತ್ಯವೇ, ಕೇಸರಿಯ ಸೇವನೆಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಕೇಸರಿಯನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಆಯುರ್ವೇದ ತಜ್ಞರ ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಕೇಸರಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಅತಿಯಾದ ಪ್ರಮಾಣದಲ್ಲಿ ಕೇಸರಿಯನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿ.‌ ಕೇಸರಿಯಿಂದ ಬಣ್ಣವನ್ನು ಪಡೆದುಕೊಳ್ಳಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕುಂಕುಮ ತೈಲವೆಂದು ಸಿಗುತ್ತದೆ ಅದು ದುಬಾರಿಯಾಗಿದ್ದು, ಅದನ್ನು ಮುಖಕ್ಕೆ ಹಚ್ಚಿಕೊಂಡರೆ ಒಂದು ವಾರದಲ್ಲಿ ಮುಖ ಸುಂದರವಾಗಿ ಹೊಳೆಯುತ್ತದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ತಿಳಿಸಲಾಗಿದೆ. ಕುಂಕುಮ ತೈಲದಲ್ಲಿ ಕೇಸರಿ ಅಂಶವನ್ನು ಹೆಚ್ಚಾಗಿ ಸೇರಿಸಲಾಗಿದೆ ಆದ್ದರಿಂದ ಮುಖ ಸುಂದರವಾಗಿ ಕಾಣುತ್ತದೆ. ಕೇಸರಿಯನ್ನು ಸೇವಿಸುವುದರಿಂದ ಪುರುಷರಲ್ಲಾಗಲಿ, ಮಹಿಳೆಯರಲ್ಲಾಗಲಿ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಸ್ತ್ರೀಯರು ಗರ್ಭ ಧರಿಸುವ ಮೊದಲು ಕೇಸರಿಯನ್ನು ಸೇವಿಸುವುದು ಒಳ್ಳೆಯದು. ಕೇಸರಿಯು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ನಮ್ಮ ಬುದ್ಧಿಶಕ್ತಿ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮೇಧ ಶಕ್ತಿಯನ್ನು ಕೇಸರಿ ಹೆಚ್ಚಿಸುವುದರಿಂದ ಆಯುರ್ವೇದದಲ್ಲಿ ಕೇಸರಿಯನ್ನು ಮೇಧ್ಯ ಎಂದು ಕರೆಯುತ್ತಾರೆ. ಕೇಸರಿ ನಮ್ಮ ದೇಹದಲ್ಲಿ ಆಂಟಿ ಟಾಕ್ಸಿಕ್ ಆಗಿ ಕೆಲಸ ಮಾಡುತ್ತದೆ. ಗರ್ಭಿಣಿ ಸ್ತ್ರೀಯರು ಕೇಸರಿಯನ್ನು ಸೇವಿಸುವುದರಿಂದ ಆಹಾರ ಸೇವನೆಯಿಂದ ದೇಹದ ಒಳಗೆ ವಿಷ ಪದಾರ್ಥಗಳು ಇದ್ದರೆ ಅವುಗಳನ್ನು ನಿವಾರಿಸುವಲ್ಲಿ ಕೇಸರಿ ಪ್ರಮುಖ ಪಾತ್ರ ವಹಿಸುತ್ತದೆ.

ಕೇಸರಿಯನ್ನು ಸೇವಿಸುವುದರಿಂದ ಖಿನ್ನತೆ, ಮಾನಸಿಕ ರೋಗಗಳು ನಿವಾರಣೆಯಾಗುತ್ತದೆ. ಕೇಸರಿ ಮೆದುಳಿಗೆ ಶಕ್ತಿ ಕೊಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮಾನಸಿಕ ದೃಢತೆಯನ್ನು ಕೊಡುತ್ತದೆ. ಮಹಿಳೆಯರ ಮುಟ್ಟಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಕೂಡ ಕೇಸರಿ ಪ್ರಮುಖ ಪಾತ್ರವಹಿಸುತ್ತದೆ ಆದರೆ ಕೇಸರಿಯನ್ನು ಸರಿಯಾದ ಪ್ರಮಾಣದಲ್ಲಿ ಸ್ತ್ರೀಯರು ತೆಗೆದುಕೊಳ್ಳದಿದ್ದಲ್ಲಿ ಗರ್ಭಪಾತ ಕೂಡ ಆಗುವ ಸಂಭವವಿರುತ್ತದೆ. ಕೇವಲ ಗರ್ಭಿಣಿ ಸ್ತ್ರೀಯರು ಮಾತ್ರ ಕೇಸರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತೇವೆ ಆದರೆ ಬಾಣಂತಿ ಸ್ತ್ರೀಯರು ಕೇಸರಿಯನ್ನು ತೆಗೆದುಕೊಂಡಾಗ ಅವರ ಗರ್ಭಾಶಯ ಕ್ಲೀನ್ ಆಗುತ್ತದೆ ಮತ್ತು ಶಕ್ತಿ ಸಿಗುತ್ತದೆ. ಹೈ ರಿಸ್ಕ್ ಪ್ರೆಗ್ನೆನ್ಸಿ ಹೊಂದಿರುವವರು ಕೇಸರಿಯನ್ನು ಸೇವನೆ ಮಾಡದಿರುವುದು ಒಳ್ಳೆಯದು. ಕೇಸರಿಯಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ ಆದರೆ ಕೇಸರಿಯನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾಗಿದೆ. ಪ್ರಗ್ನೆನ್ಸಿಯ ಹಿನ್ನೆಲೆಯನ್ನು ತಿಳಿದುಕೊಂಡು ಯಾವ ಪ್ರಮಾಣದಲ್ಲಿ ಕೇಸರಿಯನ್ನು ಸೇವಿಸಬಹುದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕೇಸರಿಯ ಪ್ರಮಾಣವನ್ನು ಹೇಳುವುದಾದರೆ ಅರ್ಧ ಕೇಸರಿಯನ್ನು ಹಾಲಿನಲ್ಲಿ ನೆನೆಸಿ ಅರ್ಧಗಂಟೆ ನಂತರ ಸೇವಿಸಬೇಕು ಹಾಲು ದೇಹಕ್ಕೆ ತಂಪನ್ನು ಕೊಡುತ್ತದೆ ಇದರಿಂದ ಕೇಸರಿಯಲ್ಲಿರುವ ಉಷ್ಣಾಂಶದಿಂದ ಆಗುವ ತೊಂದರೆಯನ್ನು ನಿವಾರಿಸುತ್ತದೆ. ಗರ್ಭಿಣಿ ಸ್ತ್ರೀಯರು ಕೇಸರಿಯನ್ನು ತೆಗೆದುಕೊಂಡಾಗ ಉಷ್ಣಾಂಶ ಒಳಗೊಂಡ ಇನ್ನಿತರೆ ಯಾವುದೇ ಆಹಾರವನ್ನು ಸೇವಿಸಬಾರದು. ಗರ್ಭಪಾತ ಆಗುತ್ತಿರುವ ಮಹಿಳೆ ಗರ್ಭ ಧರಿಸುವ ಮೊದಲು ಕೇಸರಿಯನ್ನು ಸೇವಿಸುವುದರಿಂದ ಗರ್ಭಾಶಯಕ್ಕೆ ಶಕ್ತಿ ದೊರೆತು ಗರ್ಭಪಾತ ಆಗುವ ಸಂಭವ ಕಡಿಮೆ ಮಾಡುತ್ತದೆ. ಮಹಿಳೆಯು ಗರ್ಭಧರಿಸಿ 3 ತಿಂಗಳವರೆಗೆ ಕೇಸರಿಯನ್ನು ಸೇವಿಸಬಾರದು. ಕೇಸರಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಸೇವಿಸುವ ಪ್ರಮಾಣದ ಬಗ್ಗೆ ಬಹಳ ಕಾಳಜಿ ವಹಿಸಬೇಕು ಅದರಲ್ಲೂ ಗರ್ಭಿಣಿ ಸ್ತ್ರೀಯರು ತೆಗೆದುಕೊಳ್ಳುವಾಗ ಹೆಚ್ಚಿನ ಕಾಳಜಿಯನ್ನು ವಹಿಸಬೇಕು.

Leave a Comment

error: Content is protected !!